ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ

ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ

ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ಸೆಪ್ಟೆಂಬರ್‌ 12, ಗುರುವಾರ ತೆರೆ ಕಾಣುತ್ತಿದೆ. ಸದ್ಯಕ್ಕೆ ಕಿರಣ್‌ ರಾಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಸಿನಿಪ್ರಿಯರು ಹಾರೈಸುತ್ತಿದ್ದಾರೆ. ಇತ್ತೀಚೆಗೆ ರಾನಿ ಸಿನಿಮಾ ಟೈಟಲ್‌ ಹಾಡು ಬಿಡುಗಡೆಯಾಗಿತ್ತು.

ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣುತ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ
ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣುತ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ

ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿ ಈಗ ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವ ಕಿರಣ್‌ ರಾಜ್‌ಗೆ ಇಂದು ಬೆಳಗ್ಗೆ ಅಪಘಾತವಾಗಿದೆ. ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ಬಳಿ ಅಪಘಾತಕ್ಕೀಡಾಗಿದೆ. ಕಾರಿಗೆ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಕಿರಣ್‌ ರಾಜ್‌ ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ. ನಾಳೆ ಕಿರಣ್‌ ರಾಜ್‌ ಅಭಿನಯದ ರಾನಿ ಬಿಡುಗಡೆಯಾಗುತ್ತಿದ್ದು ಹಿಂದಿನ ದಿನ ಈ ಘಟನೆ ಸಂಬಂಧ ಚಿತ್ರತಂಡ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರಣ್‌ ರಾಜ್

ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ರಾನಿ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಖ್ಯಾತ ಚಿತ್ರಲೇಖಕ ಜೆ.ಕೆ.ಭಾರವಿ, ಪ್ರಮೋದ್ ಮರವಂತೆ ಬರೆದು, ಸಚಿನ್ ಬಸ್ರೂರ್ ಸಂಗೀತ ನೀಡಿರುವ "ರಾನಿ" ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದು ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸೆಪ್ಟೆಂಬರ್ 12 ಗುರುವಾರ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಕಾರ್ಯಕ್ರಮದಲ್ಲಿ ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡಿ, "ರಾನಿ" ಚಿತ್ರ ಸಾಗಿ ಬಂದ ಬಗ್ಗೆ ಹಂಚಿಕೊಂಡರು. ಇದೊಂದು ಕುಟುಂಬ ಸಮೇತ ನೋಡಬಹುದಾದ ಚಿತ್ರ. ಆಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲದರ ಸಂಗಮವೇ ರಾನಿ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ ಈ ಚಿತ್ರ, ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಈಗಾಗಲೇ ಜನರ ಮನ ಗೆದ್ದಿದೆ. ಯಾವುದೇ ಕೊರತೆ ಇಲ್ಲದೆ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ‌ ಮಾಡಿದ್ದಾರೆ. ಅಷ್ಟೇ ಅದ್ದೂರಿಯಾಗಿ ಸೆಪ್ಟೆಂಬರ್ 12 ರಂದು 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.‌

ಗುರುತೇಜ್ ಶೆಟ್ಟಿ ನಿರ್ದೇಶನದ ಚಿತ್ರ

ನಾಯಕ ಕಿರಣ್ ರಾಜ್ ಮಾತನಾಡಿ, ಇದು ಬರೀ ಚಿತ್ರವಲ್ಲ. ನನ್ನ ಕನಸು. ಈ ಕನಸಿಗೆ ಆಸರೆಯಾದವರು ನಮ್ಮ ನಿರ್ಮಾಪಕರು.‌ ನನ್ನ ಮೇಲೆ ಭರವಸೆಯಿಟ್ಟು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಹಾಗೂ ಮಣಿಕಾಂತ್ ಕದ್ರಿ ಅವರ ಸಂಗೀತ ಎಲ್ಲವೂ ಉತ್ತಮವಾಗಿದೆ. ಆಕ್ಷನ್ ಸನ್ನಿವೇಶಗಳು ಈ ಚಿತ್ರದ ಹೈಲೆಟ್ ಎನ್ನಬಹುದು. ಈ ಚಿತ್ರದಲ್ಲಿ ನಾನು ರಾನಿ ಹಾಗೂ ರಾಘವ ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ‌ ಎಂದರು.

ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗಡೆ ಹಾಗೂ ಗಿರೀಶ್, ನಾಯಕಿಯರಾದ ರಾಧ್ಯಾ, ಸಮೀಕ್ಷಾ , ಯಶ್ ಶೆಟ್ಟಿ, ಕರಿಸುಬ್ಬು, ಧರ್ಮಣ್ಣ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ರಾಘವೇಂದ್ರ ಬಿ ಕೋಲಾರ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಚಿತ್ರದ ಬಗ್ಗೆ ಮಾತನಾಡಿದರು. ಕಿರಣ್‌ ರಾಜ್‌ ಆದಷ್ಟು ಬೇಗ ಗುಣಮುಖರಾಗಲಿ, ರಾನಿ ಸಿನಿಮಾ ಯಶಸ್ಸು ಗಳಿಸಲಿ ಎಂದು ಸಿನಿಪ್ರಿಯರು ಹಾರೈಸಿದ್ದಾರೆ.

Whats_app_banner