ಕನ್ನಡ ಸುದ್ದಿ  /  ಮನರಂಜನೆ  /  ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

Kishen Bilagali Ragini Dwivedi Dance: ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಬಿಗ್‌ಬಾಸ್‌ ಕನ್ನಡ ಫೇಮ್‌ ಕಿಶನ್‌ ಬಿಳಗಲಿ ಡ್ಯಾನ್ಸ್‌ ಮಾಡಿದ್ದಾರೆ. ಸರ್ಫರೋಶ್‌ ಚಿತ್ರದ ಜೋ ಹಾಲ್‌ ದಿಲ್‌ ಕಾ ಹಾಡಿಗೆ ಇವರಿಬ್ಬರು ರೊಮ್ಯಾಂಟಿಕ್‌ ಆಗಿ ಹೆಜ್ಜೆ ಹಾಕಿದ್ದಾರೆ.

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ಡ್ಯಾನ್ಸ್‌
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ಡ್ಯಾನ್ಸ್‌

ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ಯುವ ಡ್ಯಾನ್ಸರ್‌ ಕಿಶನ್‌ ಬಿಳಗಲಿ ಆಗಾಗ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯರ ಜತೆ ಡ್ಯಾನ್ಸ್‌ ಮಾಡುತ್ತ ಇರುತ್ತಾರೆ. ಇದೀಗ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ರೋಮ್ಯಾಂಟಿಕ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋಗೆ ನೆಟ್ಟಿಗರು ಎಂದಿನಂತೆ ಗುಡ್‌-ಬ್ಯಾಡ್‌ ಕಾಮೆಂಟ್‌ ಹಾಕೋದನ್ನು ಮುಂದುವರೆಸಿದ್ದಾರೆ. ಆಗಾಗ ಸುಂದರವಾದ ನಟಿಯರ ಜತೆ ರೋಮ್ಯಾಂಟಿಕ್‌ ಆಗಿ ಡ್ಯಾನ್ಸ್‌ ಮಾಡುವ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಿಶನ್‌ ಬಿಳಗಲಿಗೆ ಕೆಲವರು "ಯಾಕೋ ಗುರು ನಮ್ಮ ಹೊಟ್ಟೆ ಉರಿಸ್ತಿಯಾ" ಎಂದು ಕಾಮೆಂಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಗಿಣಿ ಜತೆ ಕಿಶನ್‌ ಡ್ಯಾನ್ಸ್‌

ಸರ್ಫರೋಶ್‌ ಚಿತ್ರದ ಜೋ ಹಾಲ್‌ ದಿಲ್‌ ಕಾ ಹಾಡಿಗೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ. ಆ ಸಿನಿಮಾದ ಹಾಡಿನಂತಹ ಸೀನ್‌ ರಿಕ್ರಿಯೆಟ್‌ ಮಾಡಿ ರೊಮ್ಯಾಂಟಿಕ್‌ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಕ್ಕರೆ ಫಿಲ್ಮ್ಸ್‌ ಶೂಟ್‌ ಮಾಡಿದೆ. ಕಿಶನ್‌ ಬಿಳಗಲಿ ನಿರ್ದೇಶನ ಮತ್ತು ಕೊರಿಯೋಗ್ರಫಿ ಮಾಡಿದ್ದಾರೆ.

ಈ ವಿಡಿಯೋಗೆ ಎಂದಿನಂತೆ ನೆಟ್ಟಿಗರು ಬಗೆಬಗೆಯ ಕಾಮೆಂಟ್‌ ಮಾಡಿದ್ದಾರೆ. "ನೀನು ಕಲಿಯುಗದ ಕೃಷ್ಣ" "ಯಾಕ್ ನಮಗೆ ಹಿಂಗೆ ಹೊಟ್ಟೆ ಉರಿಸ್ತಿಯಾ" ಇತ್ಯಾದಿ ಕಾಮೆಂಟ್‌ಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಸಾಕಷ್ಟು ಜನರು ಈ ಡ್ಯಾನ್ಸ್‌ ಮೆಚ್ಚಿದ್ದಾರೆ. "ಅತ್ಯುತ್ತಮ ಡ್ಯಾನ್ಸ್‌" "ಒಳ್ಳೆಯ ಕೊರಿಯೊಗ್ರಫಿ" "ಅತ್ಯುತ್ತಮ ಪರ್ಫಾಮೆನ್ಸ್‌" "ತುಂಬಾ ಚೆನ್ನಾಗಿದೆ. ನಿಜವಾದ ಕಲಾವಿದ ನೀವು. ಕ್ರಿಯೆಟಿವಿಟಿ, ಎಡಿಟಿಂಗ್‌, ಕೊರಿಯೋಗ್ರಫಿ, ಹಾಡು, ನಿಮ್ಮ ಪರ್ಫಾಮೆನ್ಸ್‌, ನಿಮ್ಮ ಸ್ಟೈಲ್‌, ಎಲ್ಲವೂ ಚೆನ್ನಾಗಿದೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಪುಷ್ಪ ಪುಷ್ಪ ಹಾಡಿಗೆ ಡ್ಯಾನ್ಸ್‌

ಇತ್ತೀಚೆಗೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಸಿನಿಮಾದ ಪುಷ್ಪ ಪುಷ್ಪ ಎಂಬ ಫಸ್ಟ್‌ ಸಿಂಗಲ್‌ ಬಿಡುಗಡೆಯಾಗಿತ್ತು. ಇದಕ್ಕೆ ಕಿಶನ್‌ ಬಿಳಗಲಿ ತನ್ನದೇ ಸ್ಟೈಲ್‌ನಲ್ಲಿ ಡ್ಯಾನ್ಸ್‌ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಕಾರಿನಲ್ಲಿ ಕುಳಿತು ಕೈತುಂಬಾ ಉಂಗುರ ಹಾಕಿಕೊಂಡು, ಅಲ್ಲು ಅರ್ಜುನ್‌ನ ಸ್ಟೈಲ್‌ನಲ್ಲಿಯೇ ಸ್ಟೆಪ್‌ ಹಾಕಿದ್ದರು. ಈ ವಿಡಿಯೋಗೆ ನೆಟ್ಟಿಗರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

ಕಿಶನ್‌ ಬಿಳಗಲಿ ಕನ್ನಡದ ಜನಪ್ರಿಯ ಸೆಲೆಬ್ರಿಟಿಗಳ ಜತೆ ಆಗಾಗ ಡ್ಯಾನ್ಸ್‌ ಮಾಡುತ್ತ ಇರುತ್ತಾರೆ. ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚೆಲುವೆ ಚೈತ್ರಾ ಜೆ ಆಚಾರ್‌ ಜತೆ ಡ್ಯಾನ್ಸ್‌ ಮಾಡಿದ್ದರು. ರಣಬೀರ್‌ ಕಪೂರ್‌ ನಟನೆಯ ಅನಿಮಲ್‌ ಸಿನಿಮಾದ ಪಹ್ಲೆ ಬೀ ಮೇನ್‌ ಹಾಡಿಗೆ ಇವರಿಬ್ಬರು ಸಖತ್‌ ಡ್ಯಾನ್ಸ್‌ ಮಾಡಿದ್ದರು. ಅನಿಮಲ್‌ ಸಿನಿಮಾದ ಪಾಗಲ್‌ ಪಾಗಲ್‌ ಹೇ ಎಂಬ ಹಾಡಿಗೆ ಕಿಶನ್‌, ಚೈತ್ರಾ ಆಚಾರ್‌ ತನ್ಮಯರಾಗಿ ಡ್ಯಾನ್ಸ್‌ ಮಾಡಿದ್ದರು.

ಸ್ಯಾಂಡಲ್‌ವುಡ್‌ ನಟಿ ನಮ್ರತಾ ಗೌಡ ಜತೆ ಕಿಶನ್‌ ಹಲವು ಬಾರಿ ಡ್ಯಾನ್ಸ್‌ ಮಾಡಿದ್ದಾರೆ. ಇತ್ತೀಚೆಗೆ ಇವರಿಬ್ಬರು ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಏನೂ ಹೇಳಲಿ ನಾನು ಹೊಸತರ ಎಂಬ ಹಾಡಿಗೆ ಸ್ಟೆಪ್‌ ಹಾಕಿದ್ದರು. ಇದಕ್ಕೂ ಕೆಲವು ವಾರಗಳ ಹಿಂದೆ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಎಂಬ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ ಶಾಂತಿಕ್ರಾಂತಿ ಸಿನಿಮಾದ ಹಾಡಿಗೂ ಇವರು ಡ್ಯಾನ್ಸ್‌ ಮಾಡಿದ್ದರು. ಪರವಶನಾದೆನು ಹಾಡಿಗೂ ಕೆಲವು ತಿಂಗಳ ಹಿಂದೆ ಇವರಿಬ್ಬರು ಡ್ಯಾನ್ಸ್‌ ಮಾಡಿದ್ದರು. ನಮ್ರತಾ ಗೌಡ ಮಾತ್ರವಲ್ಲದೆ ಸಂಯುಕ್ತ ಹೆಗ್ಡೆ ಜತೆಯೂ ಇವರು ರೋಮ್ಯಾಂಟಿಕ್‌ ಡ್ಯಾನ್ಸ್‌ ಮಾಡಿದ್ದು ವೈರಲ್‌ ಆಗಿತ್ತು.

IPL_Entry_Point