Kona Movie Teaser: ನಟ ಕೋಮಲ್‌ ಕಡೆಯಿಂದ ಮಾಟ ಮಂತ್ರ ಮಾಡಿಸಲು ಮುಂದಾದ Bigg Boss ಖ್ಯಾತಿಯ ತನಿಷಾ ಕುಪ್ಪಂಡ-sandalwood news komal kumar starrer kona movie teaser released produced by bbk 10 fame tanisha kuppanda mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kona Movie Teaser: ನಟ ಕೋಮಲ್‌ ಕಡೆಯಿಂದ ಮಾಟ ಮಂತ್ರ ಮಾಡಿಸಲು ಮುಂದಾದ Bigg Boss ಖ್ಯಾತಿಯ ತನಿಷಾ ಕುಪ್ಪಂಡ

Kona Movie Teaser: ನಟ ಕೋಮಲ್‌ ಕಡೆಯಿಂದ ಮಾಟ ಮಂತ್ರ ಮಾಡಿಸಲು ಮುಂದಾದ Bigg Boss ಖ್ಯಾತಿಯ ತನಿಷಾ ಕುಪ್ಪಂಡ

ನಟ ಕೋಮಲ್‌ ಕುಮಾರ್‌ ಇದೀಗ ಹೊಸ ಅವತಾರದ ಮೂಲಕ ಆಗಮಿಸಿದ್ದಾರೆ. ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿರುವ ಕೋಣ ಚಿತ್ರದಲ್ಲಿ ಮಂತ್ರವಾದಿಯಾಗಿ ಕೋಮಲ್‌ ಎದುರಾಗಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾವನ್ನು ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿದ್ದಾರೆ,

ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿರುವ ಕೋಣ ಚಿತ್ರದಲ್ಲಿ ಮಂತ್ರವಾದಿಯಾಗಿ ಕೋಮಲ್‌ ಎದುರಾಗಿದ್ದಾರೆ.
ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿರುವ ಕೋಣ ಚಿತ್ರದಲ್ಲಿ ಮಂತ್ರವಾದಿಯಾಗಿ ಕೋಮಲ್‌ ಎದುರಾಗಿದ್ದಾರೆ.

Kona Movie Teaser: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಿಂದ ಮರಳಿದ ಬಳಿಕ ನಟಿ ತನಿಷಾ ಕುಪ್ಪಂಡ ನಟನೆಯ ಜತೆಗೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಿಲ್ವರ್‌ ಜ್ಯುವೆಲ್ಲರಿ ಶಾಪ್‌ ಸಹ ತೆರೆದಿದ್ದರು ತನಿಚಾ. ಅದಾದ ನಂತರ ಅಚ್ಚರಿಯ ರೀತಿಯಲ್ಲಿ ಕುಪ್ಪಂಡ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ನಟ ಕೋಮಲ್‌ ಅವರ ಜತೆಗೆ ಕೋಣ ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ತನಿಷಾ. ಇದೀಗ ಇದೇ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ಈ ನಿಮಿತ್ತ ಒಂದೇ ಕಡೆ ಸೇರಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಈ ವರೆಗೂ ಪೋಸ್ಟರ್ ಮೂಲಕ ಗಮನಸೆಳೆದಿದ್ದ ಕೋಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್‌ನಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕೋಮಲ್ ಕುಮಾರ್ , "ಕೋಣ ಡಾರ್ಕ್ ಹ್ಯೂಮರ್ ಅಂತಾರೆ. ಆದರೆ ಇದರಲ್ಲಿ ಆ ರೀತಿಯ ಸಬ್ಟೆನ್ಸ್ ತುಂಬಾ ಇದೆ. ಚಾರ್ಲಿ ಚಾಪ್ಲಿನ್‌ ಕಷ್ಟದಲ್ಲಿರುವಾಗ ಆತನ ಪಾತ್ರ ಹೇಗೆ ಜನಕ್ಕೆ ಎಂಜಾಯ್ಮೆಂಟ್ ಸಿಗುತ್ತದೆಯೋ ಹಾಗೇ. ಹರಿ ಹೇಳಿದ್ದು, ಮೂಢನಂಬಿಕೆ, ನನ್ನ ಹೊಸದಾಗಿ ತೋರಿಸಿದ ರೀತಿ, ಶಾಸ್ತ್ರ ಹೇಳುವ ರೀತಿ, ರೋಬೋ ಬಗ್ಗೆ ಹೇಳಿದ ರೀತಿ ಇಷ್ಟವಾಯ್ತು. ಕೋಣ ಸಿನಿಮಾ ನೋಡಿದಾಗ ಮಲಯಾಳಂ ಸಿನಿಮಾ ನೋಡಿದ ರೀತಿ ಆಯ್ತು. ನಿಮ್ಮ ಬೆಂಬಲ ಕೋಣ ಸಿನಿಮಾ ಮೇಲೆ ಇರಲಿ ಎಂದರು.

ಟೀಸರ್‌ ಮೂಲಕ ಕ್ವಾಲಿಟಿ ಪ್ರದರ್ಶನ

ನಿರ್ದೇಶಕರಾದ ಹರಿಕೃಷ್ಣ ಎಸ್ ಮಾತನಾಡಿ, ನಮ್ಮ ಪ್ರೊಡಕ್ಷನ್ ಹೌಸ್ ಲಾಂಚಿಂಗ್ ಗ್ರೀಟಿಂಗ್ ಆಗಿ ಕೋಣ ಟೀಸರ್ ಬಿಡುಗಡೆ ಮಾಡಲಾಗಿದೆ. ಕೋಮಲ್ ಅವರಿಗೆ ಕಥೆ ಹೇಳಿಸದಾಗ ಇಷ್ಟವಾಯ್ತು. ಟೀಸರ್ ಗ್ರೀಟಿಂಗ್ ರೀತಿ. ನಮ್ಮ ಪ್ರೊಡಕ್ಷನ್‌ನಲ್ಲಿ ಈ ಕ್ವಾಲಿಟಿ ಸಿನಿಮಾ ಬರುತ್ತದೆ ಎಂದು ಪ್ರಮೋಷನ್ ಮಾಡುತ್ತಿದ್ದೇವೆ. ಅತಿ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇವೆ. ದೀಪಾವಳಿ ಬಳಿಕ ಮುಹೂರ್ತ ಮಾಡುತ್ತೇವೆ. ‌ಹಳ್ಳಿಯಲ್ಲಿ ಕೋಣದ ಜೊತೆ ನಡೆಯುವ ಕಥೆ ಇದು ಎಂದರು.

ನಿರ್ಮಾಪಕಿ ತನಿಷಾ ಕುಪ್ಪಂಡ ಹೇಳುವುದೇನು?

ನಿರ್ಮಾಪಕಿ ಕಂ ನಟಿ ತನಿಷಾ ಕುಪ್ಪಂಡ ಮಾತನಾಡಿ, ಕೋಣ ಟೀಸರ್ ಸಕ್ಸಸ್ ಫುಲ್ ಆಗಿ ಲಾಂಚ್ ಆಗಿರುವುದಕ್ಕೆ ನನ್ನ ತಂಡ ಕಾರಣ. ಕೆ ಅಂದರೆ ಕುಪ್ಪಂಡ ಕೋಣ, ಕೋಮಲ್. ಈ ರೀತಿ ಲಿಂಕ್ ಇದೆ. ಕುಪ್ಪಂಡ ಪ್ರೊಡಕ್ಷನ್ ಅಂತಾ ಯೋಚನೆ ಮಾಡಿದಾಗ ಸಣ್ಣದಾಗಿ ಮಾಡೋಣಾ. ಆಲ್ಬಂ ಸಾಂಗ್ ಮಾಡೋಣಾ ಅಂತಾ ಐಡಿಯಾ ಬಂತು. ನನಗೆ ಆಲ್ಬಂ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ಆ ಬಳಿಕ ಸಿನಿಮಾ. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ. ನನಗೆ ಖುಷಿ ಇದೆ. ಕೋಮಲ್ ಸರ್ ಈ ಪ್ರಾಜೆಕ್ಟ್ ನಲ್ಲಿ ಇರುವುದು ನಮಗೆ ಖುಷಿ ಎಂದರು.

ಕೋಣ, ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನವಾಗಿದೆ. ಈ ಬ್ಯಾನರ್ ನಡಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ನಿರ್ಮಾಣ ಮಾಡಿದ್ದಾರೆ. ಕೋಣ ಟೀಸರ್ ಬಹಳ ಕುತೂಹಲ ಹೆಚ್ಚಿಸಿದ್ದು, ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ. ನೈಜ ಘಟನೆ ಆಧರಿಸಿಯೇ ನಿರ್ದೇಶಕ ಎಸ್ ಹರಿಕೃಷ್ಣ ಒಂದು ರೋಚಕ ಕಥೆ ಹೆಣೆದಿದ್ದಾರೆ. ಈ ಕಥೆಯಲ್ಲಿ ಕೋಮಲ್ ಹೀರೋ ಅನ್ನೋದು ಒಂದು ಕಡೆಯಾದ್ರೆ, ಕೋಣ ಚಿತ್ರದ ಮತ್ತೊಬ್ಬ ಹೀರೋ ಅಂತಲೇ ಹೇಳಬಹುದು.

ಕೋಣ ಸಿನಿಮಾದಲ್ಲಿ ಕೋಮಲ್ ಹೊಸ ರೀತಿಯ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ನಟಿಸಿದ್ದಾರೆ. ಕೋಮಲ್ ಅಭಿನಯದ ಈ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಕಥಾಹಂದರ ಒಳಗೊಂಡಿದೆ.