ಕೆಆರ್‌ಜಿ ಸ್ಟುಡಿಯೋಸ್‌ ಪಾಲಾಯ್ತು ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ-sandalwood news krg studios bought the distribution rights of vinay rajkumars pepe movie mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಆರ್‌ಜಿ ಸ್ಟುಡಿಯೋಸ್‌ ಪಾಲಾಯ್ತು ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ

ಕೆಆರ್‌ಜಿ ಸ್ಟುಡಿಯೋಸ್‌ ಪಾಲಾಯ್ತು ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ

ಪೆಪೆ ಸಿನಿಮಾದಲ್ಲಿ ನಟ ವಿನಯ್‌ ರಾಜ್‌ಕುಮಾರ್‌ ಮಾಸ್‌ ಅವತಾರ ತಾಳಿದ್ದಾರೆ. ಈಗಾಗಲೇ ಹಾಡಿನ ಮೂಲಕ ಈ ಚಿತ್ರ ಸದ್ದು ಮಾಡುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಇದೀಗ ಇದೇ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ವಿತರಣೆ ಹಕ್ಕನ್ನು ಕೆಆರ್‌ಜಿ ಸಂಸ್ಥೆ ಪಡೆದುಕೊಂಡಿದೆ.

ಕೆಆರ್‌ಜಿ ಪಾಲಾಯ್ತು ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ
ಕೆಆರ್‌ಜಿ ಪಾಲಾಯ್ತು ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ

Pepe Movie Update: ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಕ್ಲಾಸ್ ಹೀರೊ ಆಗಿ ಸೈ ಎನಿಸಿಕೊಂಡಿರುವ ವಿನಯ್ ರಾಜ್‌ಕುಮಾರ್‌, ಪೆಪೆ ಚಿತ್ರಕ್ಕಾಗಿ ಮಾಸ್ ಅವತಾರವೆತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಸದ್ಯ ಪೆಪೆ ಪ್ರಿಸೆಟ್ ಟೈಟಲ್ ನಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್‌ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ 'ಪೆಪೆ' ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ‌ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಜೇನು ಕುರುಬ ಹಾಡಿನ ಮೋಡಿ..

ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್ ಅಡಿ ಚಿತ್ರ ಹಾಡೊಂದನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ಈ ಹಾಡು ಸೂಕ್ತ ಉದಾಹರಣೆ.