Jaskaran Singh songs: ದ್ವಾಪರ ದಾಟುತ ಗಾಯಕ ಹಾಡಿರುವ ಬೇರೆ ಹಾಡು ಕೇಳಲು ಬಯಸುವಿರಾ? ಜಸ್ಕರಣ್‌ ಸಿಂಗ್‌ ಹಿಟ್‌ ಸಾಂಗ್ಸ್‌ ಲಿಸ್ಟ್‌-sandalwood news krishnam pranaya sakhi dwapara datuta singer jaskaran singh popular songs kannada hindi ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Jaskaran Singh Songs: ದ್ವಾಪರ ದಾಟುತ ಗಾಯಕ ಹಾಡಿರುವ ಬೇರೆ ಹಾಡು ಕೇಳಲು ಬಯಸುವಿರಾ? ಜಸ್ಕರಣ್‌ ಸಿಂಗ್‌ ಹಿಟ್‌ ಸಾಂಗ್ಸ್‌ ಲಿಸ್ಟ್‌

Jaskaran Singh songs: ದ್ವಾಪರ ದಾಟುತ ಗಾಯಕ ಹಾಡಿರುವ ಬೇರೆ ಹಾಡು ಕೇಳಲು ಬಯಸುವಿರಾ? ಜಸ್ಕರಣ್‌ ಸಿಂಗ್‌ ಹಿಟ್‌ ಸಾಂಗ್ಸ್‌ ಲಿಸ್ಟ್‌

Jaskaran Singh songs: ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ಹಾಡು ಹಾಡಿರುವ ಜಸ್ಕರಣ್‌ ಸಿಂಗ್‌ (ಜಸ್ಕರನ್‌) ಹಲವು ಹಿಂದಿ, ಪಂಜಾಬಿ, ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾನಾ, ಜಿಯೋಸಾವನ್‌, ವ್ಯಂಕ್‌, ಯೂಟ್ಯೂಬ್‌ಗಳಲ್ಲಿ ಜನಪ್ರಿಯತೆ ಪಡೆದಿರುವ ಹಾಡುಗಳ ವಿವರ ಇಲ್ಲಿದೆ.

ಜಸ್ಕರಣ್‌ ಸಿಂಗ್‌ ಹಿಟ್‌ ಸಾಂಗ್ಸ್‌ ಲಿಸ್ಟ್‌
ಜಸ್ಕರಣ್‌ ಸಿಂಗ್‌ ಹಿಟ್‌ ಸಾಂಗ್ಸ್‌ ಲಿಸ್ಟ್‌

Jaskaran Singh songs:ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ದ್ವಾಪರ ಹಾಡು ವೈರಲ್‌ ಆಗಿದೆ. ಈ ಹಾಡಿಗೆ ಧ್ವನಿ ನೀಡಿರುವುವರು ಪಂಜಾಬ್‌ ಮೂಲದ ಜಸ್ಕರಣ್‌ ಸಿಂಗ್‌. ಕನ್ನಡ ಮಾತನಾಡಲು ಅಷ್ಟು ಉತ್ತಮವಾಗಿ ಬಾರದೆ ಇದ್ದರೂ ಅದ್ಭುತವಾಗಿ ಕನ್ನಡ ಹಾಡುಗಳಿಗೆ ಧ್ವನಿಯಾಗುವುದು ಇವರ ಹೆಚ್ಚುಗಾರಿಕೆ. ಈಗಾಗಲೇ ಸರಿಗಮಪ ವೇದಿಕೆಯಲ್ಲಿ ಕನ್ನಡಿಗರ ಮನಸ್ಸು ತಟ್ಟಿರುವ ಈ ಗಾಯಕ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ದ್ವಾಪರ ಹಾಡಿಗೆ ಧ್ವನಿಯಾಗಿದ್ದಾರೆ. ಅಚ್ಚಕನ್ನಡದ ಈ ಹಾಡು ಸಾಕಷ್ಟು ಜನಪ್ರಿಯವಾಗಿದೆ.

ದ್ವಾಪರ ದಾಟುತ ಹಾಡು ವೈರಲ್‌

ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಈಗಾಗಲೇ ಈ ಹಾಡು 12 ದಶಲಕ್ಷ ಅಂದ್ರೆ 1.2 ಕೋಟಿ ವೀಕ್ಷಣೆ ಪಡೆದಿದೆ. ಈ ಹಾಡಿನ ಕುರಿತು ಸಾಕಷ್ಟು ಜನರು ನಿತ್ಯ ಕಾಮೆಂಟ್‌ ಹಾಕುತ್ತಿದ್ದಾರೆ. ಎಲ್ಲೋ ರಿಂಗ್‌ ಟೋನ್‌ ಕೇಳಿ ಇಲ್ಲಿಗೆ ಬಂದೆ, ಯಾವುದೋ ರೀಲ್ಸ್‌ನಲ್ಲಿ ಈ ಹಾಡು ಕೇಳಿತು, ಅದಕ್ಕೆ ಹುಡುಕಿಕೊಂಡು ಬಂದೆ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. "ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿನ ತುಣುಕು ಕೇಳಿ ಇಲ್ಲಿಗೆ ಬಂದೆ" "ಒಂದು ಬಾರಿಗಂತ ಜಾಸ್ತಿ ನೋಡಿದವರು ಲೈಕ್‌ ಮಾಡಿ" ಎನ್ನುವ ಕಾಮೆಂಟ್‌ಗೆ 400ಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಒಂದೇ ಒಂದು ಪರಭಾಷೆ ಬಳಸದೆ ಬಂದಂತಹ ಈ ಅದ್ಭುತ ಹಾಡು ಕೇಳಿದ್ದಷ್ಟು ಮತ್ತೆ ಕೇಳಬೇಕೆನಿಸುತ್ತದೆ ಎಂದೆಲ್ಲ ಕಾಮೆಂಟ್‌ಗಳು ಬಂದಿವೆ.

ದ್ವಾಪರ ಹಾಡಿಗೆ ಧ್ವನಿಯಾದ ಜಸ್ಕರಣ್‌ ಸಿಂಗ್‌

ಸರಿಗಮಪ ರಿಯಾಲಿಟಿ ಶೋನಲ್ಲಿ ಹಲವು ಹಾಡುಗಳನ್ನು ಜಸ್ಕರಣ್‌ ಸಿಂಗ್‌ ಹಾಡಿದ್ದರು. ಇವರ ಗಾಯನಕ್ಕೆ ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌, ಹಂಸಲೇಖ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇದಿಕೆಯಲ್ಲಿ ಇಷ್ಟಪಟ್ಟ ಹುಡುಗನಿಗೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರು ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದರು. ಈ ಪಂಜಾಬ್‌ ಮೂಲದ ಗಾಯಕ ದ್ವಾಪರ ದಾಟುತ ಹಾಡನ್ನು ಮನಃಬಿಚ್ಚಿ ಹಾಡಿದ್ದರು. ಇದೀಗ ಈ ಹಾಡು ಟ್ರೆಂಡಾಗಿದೆ.

ಜಸ್ಕರನ್‌ ಸಿಂಗ್‌ ಅವರು ಸರಿಗಮಪ ಸೀಸನ್‌ 20ರ ಸ್ಪರ್ಧಿ. ತನ್ನ ಮಧುರ ಕಂಠದಲ್ಲಿ ಕನ್ನಡ ಹಾಡುಗಳನ್ನು ಹಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

ಜಸ್ಕರಣ್‌ ಸಿಂಗ್‌ ಹಾಡಿರುವ ಪ್ರಮುಖ ಹಾಡುಗಳು

ದ್ವಾಪರ ದಾಟುತ ಹಾಡನ್ನು ಇಷ್ಟಪಟ್ಟವರು ಜಸ್ಕರಣ್‌ ಸಿಂಗ್‌ ಹಾಡಿರುವ ಇತರೆ ಹಾಡುಗಳನ್ನೂ ಹುಡುಕುತ್ತ ಇರಬಹುದು. ಜಸ್ಕರಣ್‌ ಸಿಂಗ್‌ ಹಾಡಿರುವ ಕೆಲವು ಹಾಡುಗಳನ್ನು ಕೇಳೋಣ ಬನ್ನಿ. ಆಸಕ್ತರು ಇಂಟರ್‌ನೆಟ್‌ನಲ್ಲಿ ಅಥವಾ ಮೊಬೈಲ್‌ ಮ್ಯೂಸಿಕ್‌ ಆಪ್‌ಗಳಲ್ಲಿ ಜಸ್ಕರಣ್‌ ಸಿಂಗ್‌ ಎಂದು ಹುಡುಕಿದರೆ ಹಲವು ಹಾಡುಗಳು ಕಾಣಿಸುತ್ತವೆ.

1. ಮೆಹಾಬೂಬಾ ಸಿನಿಮಾದ ಟೈಟಲ್‌ ಸಾಂಗ್‌ಗೆ ಜಸ್ಕರಣ್‌ ಸಿಂಗ್‌ ಧ್ವನಿಯಾಗಿದ್ದಾರೆ. ಶಶಿ, ಪಾವನ ಗೌಡ ನಟನೆಯ ಈ ಸಿನಿಮಾದ ಈ ಹಾಡಿಗೆ ಮ್ಯಾಥ್ಯೂ ಮನು ಸಂಗೀತ ನಿರ್ದೇಶಕರಾಗಿದ್ದರು. ವಿ ರಘು ಶಾಸ್ತ್ರಿ ಸಾಹಿತ್ಯವಿದೆ.

2. ಡ್ರೀಮರ್‌- ಫುಕ್ರ ಇನ್ಸಾನ್‌ ಜತೆ ಜಸ್ಕರಣ್‌ ಸಿಂಗ್‌ ಹಾಡಿದ್ದಾರೆ.

3. Phull Mohabbtan Da ಎಂಬ ಹಾಡಿಗೂ ಜಸ್ಕರಣ್‌ ಸಿಂಗ್‌ ಧ್ವನಿಯಾಗಿದ್ದಾರೆ.

4. Churai Janda Eh ಎಂಬ ಕವರ್‌ ಸಿಂಗ್‌ ಅನ್ನೂ ಜಸ್ಕರಣ್‌ ಸಿಂಗ್‌ ಹಾಡಿದ್ದಾರೆ.

5. ದ್ವಾಪರ ದಾಟುತ ಹಾಡನ್ನು ಇನ್ನೊಮ್ಮೆ ಕೇಳುವಿರಾ? ಈ ಕೆಳಗೆ ಲಿರಿಕಲ್‌ ವಿಡಿಯೋ ನೀಡಲಾಗಿದೆ.

ಪ್ರತಿಭಾನ್ವಿತ ಗಾಯಕ ಜಸ್ಕರಣ್‌ ಸಿಂಗ್‌ ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ, ಪಂಜಾಬಿ ಭಾಷೆಗಳಲ್ಲಿ ಹಲವು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಈ ಯುವ ಗಾಯಕನಿಗೆ ಅಭಿಮಾನಿಗಳಿದ್ದಾರೆ. ಅಂದಹಾಗೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪ್ರಚಾರಕ್ಕೆ ಯಾವುದೇ ಟೀಸರ್‌, ಟ್ರೇಲರ್‌ ಬಿಡುಗಡೆಯಾಗುತ್ತಿಲ್ಲ. ದ್ವಾಪರ ದಾಟುತ ಸೇರಿದಂತೆ ಸಿನಿಮಾದ ಹಾಡುಗಳೇ ಪ್ರೇಕ್ಷಕರಿಗೆ ಆಹ್ವಾನ ಪತ್ರಿಕೆ.