Box Office Report: ಕೃಷ್ಣಂ ಪ್ರಣಯ ಸಖಿ 5ನೇ ದಿನದ ಕಲೆಕ್ಷನ್‌ ಎಷ್ಟು? ವಾರದ ದಿನಗಳಲ್ಲೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಧಮಾಕ-sandalwood news krishnam pranaya sakhi kannada movie box office collection day 5 monday mints 0 76 cr pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Box Office Report: ಕೃಷ್ಣಂ ಪ್ರಣಯ ಸಖಿ 5ನೇ ದಿನದ ಕಲೆಕ್ಷನ್‌ ಎಷ್ಟು? ವಾರದ ದಿನಗಳಲ್ಲೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಧಮಾಕ

Box Office Report: ಕೃಷ್ಣಂ ಪ್ರಣಯ ಸಖಿ 5ನೇ ದಿನದ ಕಲೆಕ್ಷನ್‌ ಎಷ್ಟು? ವಾರದ ದಿನಗಳಲ್ಲೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಧಮಾಕ

Krishnam Pranaya Sakhi Box Office Day 5: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸಿರುವ, ಬಹುತಾರಾಗಣವಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮೊದಲ ಸೋಮವಾರದ ಗಳಿಕೆ ತುಸು ಇಳಿಕೆ ಕಂಡಿದೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂದು ನೋಡೋಣ.

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ
ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

Krishnam Pranaya Sakhi Box Office Collection: ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿದ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ವೀಕೆಂಡ್‌ವರೆಗೆ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ವೀಕೆಂಡ್‌ ಬಳಿಕ ವಾರದ ದಿನಗಳಲ್ಲಿ ಬಾಕ್ಸ್‌ ಆಫೀಸ್‌ ಗಳಿಕೆ ಕಡಿಮೆಯಾಗುವುದು ಸಾಮಾನ್ಯ. ಇದೇ ರೀತಿ ಮೊದಲ ಸೋಮವಾರ ಕೃಷ್ಣಂ ಪ್ರಣಯ ಸಖಿಯ ಗಳಿಕೆಯೂ ಕೋಟಿಯಿಂದ ಲಕ್ಷಕ್ಕೆ ಇಳಿದಿದೆ. ಸಕ್‌ನಿಲ್ಕ್‌.ಕಾಂ ಪೋರ್ಟಲ್‌ ನೀಡಿರುವ ಬಾಕ್ಸ್‌ ಆಫೀಸ್‌ ವರದಿಯ ಪ್ರಕಾರ ನಿನ್ನೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಮ್ಯೂಸಿಕಲ್‌ ಹಿಟ್‌ ಸಿನಿಮಾದ ಗಳಿಕೆ ಈ ಮುಂದಿನಂತೆ ಇದೆ.

ಕೃಷ್ಣಂ ಪ್ರಣಯ ಸಖಿ ಬಾಕ್ಸ್‌ ಆಫೀಸ್‌ ವರದಿ

  • ದಿನ 0 (ಪ್ರೀಮಿಯರ್‌ ಶೋ): 0.1 ಕೋಟಿ ರೂಪಾಯಿ
  • ದಿನ 1: 1.5 ಕೋಟಿ ರೂಪಾಯಿ
  • ದಿನ 2: 0.85 ಕೋಟಿ ರೂಪಾಯಿ
  • ದಿನ 3: 1.7 ಕೋಟಿ ರೂಪಾಯಿ
  • ದಿನ 4: 2.18 ಕೋಟಿ ರೂಪಾಯಿ
  • ದಿನ 5: 0.76 ಕೋಟಿ ರೂಪಾಯಿ
  • ಒಟ್ಟು: 7.09 ಕೋಟಿ ರೂಪಾಯಿ

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆ

ಇದು ರೋಮಿಯೋ ಸಿನಿಮಾದ ಉಲ್ಟಾ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಗಣೇಶ್‌ ಅಂದ್ರೆ ಕೃಷ್ಣ ಶ್ರೀಮಂತ ಹುಡುಗ. ಅನಾಥಶ್ರಮದ ಪ್ರಣಯಳ ಮೇಲೆ ಲವ್‌ ಆಗುತ್ತದೆ. ಆಕೆಯನ್ನು ಪಡೆಯಲು ತಾನು ಬಡವನ ವೇಷ ಧರಿಸುತ್ತಾನೆ. ಅಂದ್ರೆ, ಕ್ಯಾಬ್‌ ಡ್ರೈವರ್‌ ಆಗಿ ಆಕೆಯ ಅನಾಥಶ್ರಮದಲ್ಲಿ ಬಳಿ ಕೆಲಸಕ್ಕೆ ಸೇರುತ್ತಾನೆ. ಮದುವೆ ಹಂತಕ್ಕೆ ತಲುಪುವಾಗ ಗಣೇಶ್‌ಗೆ ನೆನಪಿನ ಶಕ್ತಿ ಕಳೆದುಹೋಗುತ್ತದೆ. ಗಣೇಶ್‌ನ ಈ ಹಿಂದಿನ ಯಾವುದಾದರೂ ಸಿನಿಮಾದ ಇದೇ ರೀತಿಯ ನೆನಪಿನ ಶಕ್ತಿಯ ಕಥೆ ನೆನಪಾದರೆ ಅಚ್ಚರಿಯಿಲ್ಲ. ಬಳಿಕ ಇನ್ನೊಬ್ಬಳು ನಾಯಕಿ ಶರಣ್ಯ ಶೆಟ್ಟಿ ಆಗಮಿಸುತ್ತಾಳೆ. ಬಳಿಕ ಈ ಸಿನಿಮಾದಲ್ಲಿ ಹಾಸ್ಯ, ಸಾಹಸ, ಒಂದಿಷ್ಟು ಟ್ವಿಸ್ಟ್‌ಗಳು ನಡೆಯುತ್ತವೆ. ಗಣೇಶ್‌ ನಟನೆಯ ಈ ಹಿಂದಿನ ಸಿನಿಮಾಗಳನ್ನು ಇಷ್ಟಪಟ್ಟವರಿಗೆ ಕೃಷ್ಣಂ ಪ್ರಣಯ ಸಖಿ ಅದೇ ರೀತಿ ಇಷ್ಟವಾಗುತ್ತದೆ.

ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡುಗಳು ಸಾಕಷ್ಟು ವೈರಲ್‌ ಆಗಿದ್ದವು. ಸೋಷಿಯಲ್‌ ಮೀಡಿಯಾದಲ್ಲಿ ದ್ವಾಪರ ಹಾಡಿಗೆ ಎಲ್ಲರೂ ರೀಲ್ಸ್‌ ಮಾಡುತ್ತಿದ್ದರು. ಅದಕ್ಕೂ ಮೊದಲು ಚಿನ್ನಮ್ಮ ಚಿನ್ನಮ್ಮ ಹಾಡು ಕೂಡ ವೈರಲ್‌ ಆಗಿದ್ದವು. ಒಂದಕ್ಕಿಂತ ಒಂದು ಹಾಡುಗಳು ಚೆನ್ನಾಗಿವೆ ಎನ್ನುವಂತೆ ಎಲ್ಲಾ ಹಾಡುಗಳು ವೈರಲ್‌ ಆಗಿದ್ದವು. ಇದು ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ಕೆಲವರು ಇದು ಹಳೆ ಗಣೇಶನ ಸಾಮಾನ್ಯ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದರು. ಇನ್ನು ಕೆಲವರಿಗೆ ಹಾಡುಗಳ ಗುಂಗಿನಿಂದ ಸಿನಿಮಾ ಇಷ್ಟವಾಗಿತ್ತು. ಒಟ್ಟಾರೆ, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸ್ಯಾಂಡಲ್‌ವುಡ್‌ಗೆ ಹೊಸ ಭರವಸೆಯಂತೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಾಣಿಸಿದೆ. ಈ ವಾರದ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ತುಸು ಕಡಿಮೆಯಿದ್ದರೂ ಮತ್ತೆ ವಾರಾಂತ್ಯಕ್ಕೆ ಗಳಿಕೆ ಹೆಚ್ಚಿಸಿಕೊಳ್ಳುವ ಸೂಚನೆಯಿದೆ.