Deleted scene: ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಆ ಸೀನ್‌ ಡಿಲೀಟ್‌ ಮಾಡಿದ್ಯಾಕೆ? ಕಣ್ಣಲ್ಲಿ ನೀರು ಬರುತ್ತೆ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್-sandalwood news krishnam pranaya sakhi movie deleted scenes why deleted goldenstar ganesh explained pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Deleted Scene: ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಆ ಸೀನ್‌ ಡಿಲೀಟ್‌ ಮಾಡಿದ್ಯಾಕೆ? ಕಣ್ಣಲ್ಲಿ ನೀರು ಬರುತ್ತೆ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

Deleted scene: ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಆ ಸೀನ್‌ ಡಿಲೀಟ್‌ ಮಾಡಿದ್ಯಾಕೆ? ಕಣ್ಣಲ್ಲಿ ನೀರು ಬರುತ್ತೆ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

Krishnam pranaya sakhi deleted scene: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಹಲವು ಸೀನ್‌ಗಳನ್ನು ಡಿಲೀಟ್‌ ಮಾಡಲಾಗಿದೆ. ಆದರೆ, ನಿರ್ದಿಷ್ಟ ದೃಶ್ಯವೊಂದಕ್ಕೆ ಕತ್ತರಿ ಪ್ರಯೋಗ ಯಾಕೆ ಮಾಡಲಾಯಿತು ಎಂದು ಗಣೇಶ್‌ ಹೇಳಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾ
ಕೃಷ್ಣಂ ಪ್ರಣಯ ಸಖಿ ಸಿನಿಮಾ

Krishnam pranaya sakhi Movie Updates:ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಿ ಏಳು ದಿನಗಳು ಕಳೆದಿವೆ. ಇದೇ ಸಮಯದಲ್ಲಿ ಈ ಸಿನಿಮಾಕ್ಕೆ ಸಂಬಂಧಪಟ್ಟಂತೆ ಆಸಕ್ತಿದಾಯಕ ವಿಚಾರಗಳು ಬೆಳಕಿಗೆ ಬರುತ್ತವೆ. ಮಾಧ್ಯಮ ಸಂದರ್ಶನವೊಂದರಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದೃಶ್ಯವೊಂದನ್ನು ಬಿಡುಗಡೆಗೆ ಮುನ್ನ ಚಿತ್ರತಂಡ ಡಿಲೀಟ್‌ ಮಾಡಿತ್ತು ಎಂಬ ಅಂಶವನ್ನು ಗಣೇಶ್‌ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾಕೆ ಆ ದೃಶ್ಯ ಕೆಟ್ಟದಿತ್ತೇ? ವಲ್ಗರ್‌ ಇತ್ತೆ? ನೋಡಬಾರದಂತಹ ವಿಷಯವಿತ್ತೆ? ಯಾಕೆ ಆ ದೃಶ್ಯ ಡಿಲೀಟ್‌ ಮಾಡಲಾಯಿತು? ಎಂದೆಲ್ಲ ಪ್ರಶ್ನೆಗಳು ಮೂಡದು. ಆದರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಮೂವಿಗಳು ಯಾವತ್ತಿಗೂ ಫ್ಯಾಮಿಲಿ ಸಮೇತ ನೋಡುವಂತೆ ಇರುತ್ತವೆ. ಹಾಗಾದರೆ, ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರ ತಂಡ ಡಿಲೀಟ್‌ ಮಾಡಿದ ದೃಶ್ಯ ಯಾವುದು ಎಂದು ತಿಳಿಯೋಣ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಡ್ರಿಂಕ್ಸ್‌ ಮಾಡ್ತಾರ?

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಣೇಶ್‌ ಹೀಗೆ ಹೇಳಿದ್ದಾರೆ. "ಸದಾ ನಗುನಗುತ್ತಾ ಇರುವುದು ನನ್ನ ಅಭ್ಯಾಸ. ಎಷ್ಟು ಬೇಕೋ ಅಷ್ಟೇ ಹಾಕ್ತಿನಿ. ವಾರಕ್ಕೊಮ್ಮೆ ಮಾತ್ರ ಹಾಕ್ತಿನಿ. ನಾನು ನವತರುಣರಂತೆ ಇರಲು ಹ್ಯಾಪಿನೆಸ್‌, ಖುಷಿಯೇ ಕಾರಣ. ಅದು ಬಿಟ್ಟು ಏನೂ ಇಲ್ಲ. ಇನ್ನೊಬ್ಬರ ಸಿನಿಮಾ ಹಿಟ್‌ ಆದ್ರೂ ಖುಷಿ ಪಡ್ತಿನಿ. ನಮ್ಮ ಕನ್ನಡ ಸಿನಿಮಾ ಯಶಸ್ವಿಯಾದರೆ ಖುಷಿ ಪಡುತ್ತೇನೆ. ಕರೆಕ್ಟ್‌ ಟೈಮ್‌ಗೆ ನಿದ್ದೆ ಮಾಡ್ತಿನಿ. ಬೆಳಗ್ಗೆ ಬೇಗ ಎದ್ದೇಳ್ತಿನಿ. ಪಾಸಿಟೀವ್‌ ಆಗಿರ್ತಿನಿ" ಎಂದು ಗಣೇಶ್‌ ಹೇಳಿದ್ದಾರೆ.

ಆ ಸೀನ್‌ ಡಿಲೀಟ್‌ ಮಾಡಿದ್ಯಾಕೆ?

ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಒಂದು ದೃಶ್ಯ ಡಿಲೀಟ್‌ ಮಾಡಲಾಗಿತ್ತು. "ಆಸ್ಪತ್ರೆ ಮೇಲೆ ಬೆಡ್‌ ಮೇಲೆ ಮಲಗಿದ್ದ ದೃಶ್ಯದಲ್ಲಿ ನಾನು ಇಷ್ಟು ಕಣ್ಣೀರು ಸುರಿಸುವ ದೃಶ್ಯವಿತ್ತು. ಇಷ್ಟೊಂದು ಕಣ್ಣೀರು ಸುರಿಸಿದ್ರೆ ಆಗೋಲ್ಲ ಅಂದುಕೊಂಡೆವು. ನಮ್ಮ ಮನಸ್ಸಲ್ಲಿ ಇದ್ದದ್ದು ಅಷ್ಟೇ. ಮೆಲೋ ಡ್ರಾಮಾ ಬಿಟ್ಟು ಮಾಡೋಣ. ಕೊರೊನಾ ಬಂದ ಬಳಿಕ ಎಲ್ಲರೂ ದುಃಖದಲ್ಲಿದ್ದಾರೆ. ಎಲ್ಲರೂ ಬೇರೆಬೇರೆ ಕಾರಣದಿಂದ ದುಃಖದಲ್ಲಿರುತ್ತಾರೆ. ಮನೆಯಲ್ಲೋ, ಕೆಲಸದಲ್ಲೂ ದುಃಖ ಬರುವಂತಹ ಘಟನೆಗಳು ನಡೆಯುತ್ತವೆ. ಇಂತಹ ಸಮಯದಲ್ಲಿ ಚಿತ್ರಮಂದಿರಕ್ಕೆ ಬಂದು ಕಣ್ಣೀರು ಸುರಿಸೋದು ಯಾಕೆ. ಪ್ರೇಕ್ಷಕರಿಗೆ ಖುಷಿ ಕೊಡೋಣ ಎಂದು ಆ ದೃಶ್ಯ ಡಿಲೀಟ್‌ ಮಾಡಿದೆವು" ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಗಣೇಶ್‌, ಮಾಳವಿಕಾ ನಾಯರ್‌, ಶರಣ್ಯ ಶೆಟ್ಟಿ, ಸಾಧು ಕೋಕಿಲಾ, ಮಾನಸಿ ಸುಧೀರ್‌, ಶಶಿಕುಮಾರ್‌ ಮುಂತಾದವರು ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾವು ಮಂಗಳವಾರ ಅಂದರೆ, 6ನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ 0.68 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸೋಮವಾರ 0.76 ಕೋಟಿ ಗಳಿಕೆ ಮಾಡಿತ್ತು. ಈ ಸಿನಿಮಾ ಪ್ರಿಮೀಯರ್‌ ಶೋ ದಿನ 0.1 ಕೋಟಿ ರೂಪಾಯಿ, ಮೊದಲ ದಿನ 1.5 ಕೋಟಿ , 2ನೇ ದಿನ 0.85 ಕೋಟಿ ರೂಪಾಯಿ, 3ನೇ ದಿನ 1.7 ಕೋಟಿ ರೂಪಾಯಿ, 4ನೇ ದಿನ 2.18 ಕೋಟಿ, 5ನೇ ದಿನ 0.76 ಕೋಟಿ ರೂಪಾಯಿ ಮತ್ತು ನಿನ್ನೆ 0.68 ಕೋಟಿ ರೂ ಗಳಿಸಿತು. ಒಟ್ಟಾರೆ ಕಳೆದ ಆರು ದಿನಗಳಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾ 7.77 ಕೋಟಿ ರೂಪಾಯಿ ಗಳಿಸಿದೆ.