Kannada Songs: ದ್ವಾಪರ ಟ್ರ್ಯಾಕ್ ಜತೆ ಮುಂಗಾರು ಮಳೆ, ಅರಮನೆ, ಉಲ್ಲಾಸ ಸಾಂಗ್ಸ್ ಹಾಡಿದ್ರೆ ಹೇಗಿರುತ್ತೆ? ಮ್ಯಾಶ್ಅಪ್ ಹಾಡಿನ ಮೋಡಿ ನೋಡಿ
Dwapara Kannada Song Trending: ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಈಗಲೂ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಗುಣಗಾನ ಮುಂದುವರೆಯುತ್ತಿರುವ ನಡುವೆಯೇ ಹಿನ್ನೆಲೆ ಗಾಯಕ ವರುಣ್ ರಾಮಚಂದ್ರ ಅವರು ಅರಮನೆ, ಉಲ್ಲಾಸ ಉತ್ಸಾಹ, ಮುಂಗಾರು ಮಳೆ ಮತ್ತು ದ್ವಾಪರ ಹಾಡುಗಳನ್ನು ಜತೆಯಾಗಿ ಹಾಡಿದ್ದಾರೆ.
Krishnam Pranya Sakhi Songs: ಒಂದು ತಿಂಗಳ ಹಿಂದೆ ಬಿಡುಗಡೆಯಾದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡು ಈಗಲೂ ಯೂಟ್ಯೂಬ್‌ನಲ್ಲಿ ಅಗ್ರ 3ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಮೊನ್ನೆಯವರೆಗೆ ಈ ಹಾಡು ಅಗ್ರ 1ನೇ ಸ್ಥಾನದಲ್ಲಿತ್ತು. ಈಗಲೂ ಈ ಹಾಡಿನ ಮೋಡಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಈ ಸಿನಿಮಾ ನೋಡುವಂತೆ ಜನರನ್ನು ಪ್ರೇರೇಪಿಸುವಲ್ಲಿ ದ್ವಾಪರ ದಾಟಲು ಹಾಡಿನ ಕೊಡುಗೆ ಸಾಕಷ್ಟಿದೆ. ಈ ಹಾಡಿನ ವಿಡಿಯೋಗೆ ಅಭಿಮಾನಿಗಳ ಕಾಮೆಂಟ್ ಪ್ರವಾಹ ಮುಂದುವರೆದಿದೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜೀ ವಾಹಿನಿಯ ಸರೆಗಮಪ ಪ್ರತಿಭೆ, ಹಿನ್ನೆಲೆ ಗಾಯಕ ವರುಣ್ ರಾಮಚಂದ್ರ ಅವರು ಅರಮನೆ, ಉಲ್ಲಾಸ ಉತ್ಸಾಹ, ಮುಂಗಾರು ಮಳೆ ಮತ್ತು ದ್ವಾಪರ ಹಾಡುಗಳನ್ನು ಜತೆಯಾಗಿ ಹಾಡಿದ್ದಾರೆ.
ನಾಲ್ಕು ಹಾಡುಗಳನ್ನು ಜತೆಯಾಗಿ ಹಾಡಿದ್ರೆ ಹೇಗಿರುತ್ತದೆ?
"ದ್ವಾಪರ ಹಾಡಿನ ಟ್ರ್ಯಾಕ್ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೆಲವು ಸಿನಿಮಾಗಳ ಹಾಡಿನ ಮಾಷಪ್ ಮಾಡಿದ್ದೇನೆ. ನಿಮಗಾಗಿ ಈ ಹಾಡಿನ ರೆಕಾರ್ಡಿಂಗ್ ಮಾಡಿದ್ದು ನನಗೆ ಖುಷಿ ನೀಡಿತ್ತು. ಮುಂಗಾರು ಮಳೆಯ ಕುಣಿದು ಕುಣಿದು ಬಾರೇ, ಉಲ್ಲಾಸ ಉತ್ಸಾಹ ಸಿನಿಮಾದ ಚಲಿಸುವ ಚೆಲುವೆ, ಅರಮನೆ ಸಿನಿಮಾದ ಕೊಲ್ಲೇ ನನ್ನನ್ನು ಮತ್ತು ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡನ್ನು ಒಂದೇ ಟ್ರ್ಯಾಕ್‌ನಲ್ಲಿ ಹಾಡಿದ್ದೇನೆ. ನಿಮಗಿದು ಇಷ್ಟವಾಗಬಹುದು" ಎಂದು ಇನ್‌ಸ್ಟಾಗ್ರಾಂನಲ್ಲಿ ವರುಣ್ ರಾಮಚಂದ್ರ ಪೋಸ್ಟ್ ಮಾಡಿದ್ದಾರೆ. ಬನ್ನಿ ದ್ವಾಪರ ದಾಟಲು ಹಾಡಿನ ಮ್ಯಾಶ್ಅಪ್ ಹಾಡನ್ನು ಕೇಳೋಣ.
ಮುಗಿಯದ ದ್ವಾಪರ ಹಾಡಿನ ಗುಣಗಾನ
ಯೂಟ್ಯೂಬ್‌ನಲ್ಲಿ ಸದ್ಯ ದ್ವಾಪರ ಹಾಡು ಅಗ್ರ 3ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ಸಾಕಷ್ಟು ಜನರು ಹೊಸದಾಗಿ ಕಾಮೆಂಟ್ ಮಾಡಿದ್ದಾರೆ. "ನಾವು ಕುಟುಂಬ ಸಮೇತ ಇಂದು ಈ ಸಿನೆಮಾ ನೋಡಿದೆವು. ಇದು ಒಂದು ಅದ್ಭುತವಾದ ಕೌಟುಂಬಿಕ ಚಿತ್ರ. ಕಥೆ ಹೇಳಿರುವ ರೀತಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಹಣಕ್ಕೆ ಸಂಪೂರ್ಣ ಸಂತೃಪ್ತಿ ಸಿಗುತ್ತದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ಮಟ್ಟದ ಸೌಂದರ್ಯ ವರ್ಣನೆಗೆ ಕನ್ನಡಕ್ಕಿಂತ ಬೇರೆ ಯಾವ ಭಾಷೆಯಲ್ಲು ಶಬ್ದಗಳಿರಲಾರವು, ಕನ್ನಡಾಂಬೆ ಮಡಿಲೊಳಗೆ ಜನಿಸಿದ ನಾವೇ ಧನ್ಯರು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಬಹಳ ದಿನ ಆದ ನಂತರ ಅಮೆರಿಕದಲ್ಲಿ ಟೆಸ್ಲಾ ಕಾರ್‌ನಲ್ಲಿ ಪೂರ್ತಿ ವಾಲ್ಯೂಂ ಇಟ್ಟುಕೊಂಡು ಹಾಡು ಕೇಳುತ್ತ ಹೋದ್ರೆ ಥ್ರಿಲ್ ಆಗುತ್ತದೆ. ರೋಡ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಹಾಡುಗಳಲ್ಲಿ ಈ ಹಾಡೇ ಟಾಪ್‌ನಲ್ಲಿ ಇರುತ್ತದೆ. ಇಂಗ್ಲಿಷ್ ಹಾಡಲ್ಲೇ ಸದಾ ಮುಳುಗುತ್ತಿದ್ದ ನನ್ನ ಮಕ್ಕಳು ಇದೇ ಹಾಡೇ ಬೇಕು ಎಂದಾಗ ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ಕನ್ನಡದ ಹಾಡುಗಳು ಇದೇ ರೀತಿ ಸಾವಿರ ವರ್ಷ ಸೂರ್ಯ ಚಂದ್ರ ಇರುವರೆಗೂ ಇರಬೇಕು" ಎಂದು ಯೂಟ್ಯೂಬ್‌ನಲ್ಲಿ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಅನೇಕ ವರ್ಷಗಳ ನಂತರ ಕನ್ನಡ ಕಸ್ತೂರಿಯ ಕಂಪನ್ನು ಸೂಸುವ ಸುಂದರವಾದ ಕವನದಂತಿರುವ ಹಾಡು ನಮ್ಮ ಚಿತ್ರರಂಗದಲ್ಲಿ ಬಂದಿದೆ. ಅದ್ಭುತ ಸಾಹಿತ್ಯ ಹಾಗೂ ಸಂಗೀತ ಇರುವ ಈ ರಚನೆಯನ್ನು ಕೇಳಿ ತುಂಬ ಸಂತೋಷವಾಯಿತು." "ಅದೇನೋ ಗೊತ್ತಿಲ್ಲ ಹುಡುಗರ ಮನಸ್ಥಿತಿ ಹೇಗೆ ಇರುತ್ತೊ ಹಾಗೆ ಗಣಿ ಸರ್ ಮೂವಿಗಳಲ್ಲಿ ಹಾಡುಗಳು ಇರುತ್ತವೆ" "ಜೀ ಕನ್ನಡದ ಸರಿಗಮಪ ಶೋ, ಕನ್ನಡಕ್ಕೆ ಉತ್ತಮ ಗಾಯಕರನ್ನು ನೀಡಿದೆ, ಅದರಲ್ಲಿ ಇವರು ಒಬ್ಬರು... ಅಪ್ಪು ಸಾರ್ ಅಭಿಮಾನಿಗಳ ಕಡೆಯಿಂದ ಚಿತ್ರತಂಡಕ್ಕೆ ಶುಭ ಹಾರೈಕೆಗಳು" "ಕವಿ ನಾಗೇಂದ್ರ ಪ್ರಸಾದ್ ಅದ್ಬುತ ಪದಪುಂಜ..... ಗಣೇಶ್ ಡಾನ್ಸ್ ಸೂಪರ್.... ಮ್ಯೂಸಿಕ್ ಅದ್ಭುತ...." "ನೋಡ್ರಪ್ಪ ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತ ಎಂದು, ಆ ಇಂಥ ಭಾಷೆ ಮಾತಾಡಲು ಸಾವಿರ ಜನ್ಮ ಪುಣ್ಯ ಮಾಡಿರಬೇಕು... ನೋಡಿ ಯಾವ ಭಾಷೆಯಲ್ಲಿ ಇಷ್ಟು ಸಿಹಿಯಾಗಿ ಕೇಳಬಹುದು .. ಹೆಮ್ಮೆ ಪಡಿ ನನ್ನ ಭಾಷೆ ಕನ್ನಡವೆಂದು" ಎಂದೆಲ್ಲ ದ್ವಾಪರ ಹಾಡಿನ ಗುಣಗಾಣ ಮಾಡಿದ್ದಾರೆ.