ಕನ್ನಡ ಸುದ್ದಿ  /  Entertainment  /  Sandalwood News Kushboo Sundar Clicked Photo With Rishab Shetty Shared In Social Media Rsm

ರಿಷಬ್‌ ಶೆಟ್ಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಖುಷ್ಬೂ

ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ಖುಷ್ಬೂ ಕೂಡಾ ರಿಷಬ್‌ ಶೆಟ್ಟಿ ದಂಪತಿಯನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತೆಗೆಸಿದ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಖುಷ್ಬೂ ದಕ್ಷಿಣ ಭಾರತದ ಈ ಪ್ರತಿಭೆಯನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯ್ತು ಎಂದು ಬರೆದುಕೊಂಡಿದ್ದಾರೆ.

ಖುಷ್ಬೂ ಜೊತೆ ರಿಷಬ್‌ ಶೆಟ್ಟಿ ದಂಪತಿ
ಖುಷ್ಬೂ ಜೊತೆ ರಿಷಬ್‌ ಶೆಟ್ಟಿ ದಂಪತಿ

'ಕಾಂತಾರ' ಸಿನಿಮಾ ಸಕ್ಸಸ್‌ ನಂತರ ರಿಷಬ್‌ ಶೆಟ್ಟಿ ಹೊರ ರಾಜ್ಯಗಳಲ್ಲೂ ಬಹಳ ಫೇಮಸ್.‌ ಅದರಲ್ಲೂ ಅವರಿಗೆ ಉತ್ತರ ಭಾರತದಲ್ಲಿ ಕೂಡಾ ಸಾಕಷ್ಟು ಅಭಿಮಾನಿಗಳಿದ್ದಾರೆ. ತೆಲುಗು, ತಮಿಳು ಜನತೆ ಕೂಡಾ ರಿಷಬ್‌ ಶೆಟ್ಟಿ ಸಿನಿಮಾವನ್ನು ಮೆಚ್ಚಿದ್ದಾರೆ. ಇತ್ತೀಚೆಗೆ ರಿಷಬ್‌ ಶೆಟ್ಟಿ ತಮ್ಮ ಪತ್ನಿಯೊಂದಿಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್‌ ಶೆಟ್ಟಿ

'ಕಾಂತಾರ' ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಸೈಮಾ ಪ್ರಶಸ್ತಿ ದೊರೆತಿದೆ. ದುಬೈ ಏರ್‌ಪೋರ್ಟ್‌ನಲ್ಲಿ ರಿಷಬ್‌ ಶೆಟ್ಟಿ ಇಳಿಯುತ್ತಿದ್ದಂತೆ ಅಲ್ಲಿನ ಕನ್ನಡಿಗರು ಅವರನ್ನು ಮಾತನಾಡಿಸಲು ಕಾಯುತ್ತಿದ್ದರು. ದೂರದಿಂದಲೇ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು. ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ಖುಷ್ಬೂ ಕೂಡಾ ರಿಷಬ್‌ ಶೆಟ್ಟಿ ದಂಪತಿಯನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತೆಗೆಸಿದ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಖುಷ್ಬೂ ದಕ್ಷಿಣ ಭಾರತದ ಈ ಪ್ರತಿಭೆಯನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯ್ತು ಎಂದು ಬರೆದುಕೊಂಡಿದ್ದಾರೆ.

ಖುಷ್ಬೂ ಪೋಸ್ಟ್‌ಗೆ ಮೆಚ್ಚುಗೆ

ಖುಷ್ಬೂ ಅವರ ಈ ಪೋಸ್ಟ್‌ಗೆ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖುಷ್ಬೂ ಎಷ್ಟೇ ದೊಡ್ಡ ಸ್ಟಾರ್‌ ನಟಿ ಆದರೂ ತಮಗಿಂತ ಕಿರಿಯ ರಿಷಬ್‌ ಶೆಟ್ಟಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೂ ಅಲ್ಲದೆ ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿರುವುದು ಕರ್ನಾಟಕದ ಅಭಿಮಾನಿಗಳಿಗೆ ಕೂಡಾ ಖುಷಿ ಆಗಿದೆ. ಖುಷ್ಪೂ ಈಗ ಸಿನಿಮಾಗಳಿಗಿಂತ ಹೆಚ್ಛಾಗಿ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ.

ಕಾಂತಾರ ಪ್ರೀಕ್ವೆಲ್‌ ಕೆಲಸಗಳಲ್ಲಿ ಬ್ಯುಸಿ

ಇತ್ತ ರಿಷಬ್‌ ಶೆಟ್ಟಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿ ಇದ್ದಾರೆ. ಬಹುತೇಕ ಸ್ಕ್ರಿಪ್ಟ್‌ ಕೆಲಸ ಮುಗಿದಿದ್ದು ಆದಷ್ಟು ಬೇಗ ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣ ಶುರುವಾಗಲಿದೆ. ಪ್ರೀಕ್ವೆಲ್‌ನಲ್ಲಿ ಯಾರೆಲ್ಲಾ ನಟ ನಟಿಯರು ಇರುತ್ತಾರೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಮನರಂಜನೆ ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.