Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

Lakshmi Baramma Serial Actress: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆಯಾಗಿ ಎಲ್ಲರ ಮನ ಗೆದ್ದ ನಟಿ ನೇಹಾ ಗೌಡ ಈಗ ತುಂಬು ಗರ್ಭಿಣಿ. ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ.

Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಹಲವು ಕಿರುತೆರೆ ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.
Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಹಲವು ಕಿರುತೆರೆ ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.

Actress Neha Gowda Pregency Photos: ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ ನೇಹಾ ಗೌಡರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಚೈತ್ರಾ ವಾಸುದೇವನ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೇಹಾ ಪತಿ ಚಂದನ್‌ ಜತೆ ಹಲವು ಕಿರುತೆರೆ ನಟಿಯರು ಪೋಸ್‌ ನೀಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಹಿರಿಯ ನಟಿ ತಾರಾ ಅನುರಾಧ, ಕವಿತಾ ಗೌಡ, ಅನುಪಮ ಗೌಡ, ಇಶಿತಾ ವರ್ಷ ಮುಂತಾದವರು ಫೋಟೋದಲ್ಲಿ ಗೊಂಬೆ ಜೊತೆ ಪೋಸ್‌ ನೀಡಿದ್ದಾರೆ.

ಸೀರಿಯಲ್‌ ನಟಿ ನೇಹಾ ಗೌಡ ಇದೇ ಆಗಸ್ಟ್‌ 18ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ. ನೇಹಾಳ ಬೇಬಿ ಬಂಪ್‌ಗೆ ನಿರೂಪಕಿ ಅನುಪಮಾ ಗೌಡ ಮುತ್ತಿಕ್ಕಿದ್ದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಹುಟ್ಟುಹಬ್ಬದ ದಿನ ತೆಗೆದ ಫೋಟೋವಾಗಿದೆ. ಇದೀಗ ಸೀಮಂತ ಸಂಭ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ನಟಿ ನೇಹಾ ಗೌಡಗೆ ಈಗ 34 ವರ್ಷ ವಯಸ್ಸಾಗಿದೆ. ಇದೇ ವರ್ಷ ಜೂನ್‌ ತಿಂಗಳಲ್ಲಿ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಫ್ಯಾನ್ಸ್‌ಗೆ ಮಾಹಿತಿ ನೀಡಿದ್ದರು. 2018ರಲ್ಲಿ ನೇಹಾ ಮತ್ತು ಚಂದನ್‌ ವಿವಾಹವಾಗಿದ್ದರು.

ಇದೀಗ ವೈರಲ್‌ ಆಗಿರುವ ಸೀಮಂತ ಸಂಭ್ರಮದ ಫೋಟೋದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ನೇಹಾ ಗೌಡ ಕಾಣಿಸಿಕೊಂಡಿದ್ದಾರೆ. ಜತೆಗೆ, ಚಂದನ್‌ ಗೌಡ ಅವರು ಪಂಚೆ ಉಟ್ಟುಕೊಂಡು ಪತ್ನಿಗೆ ಸಿಹಿ ಮುತ್ತು ನೀಡುವ ವಿಡಿಯೋ ಕ್ಲಿಪ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನಟಿ ನೇಹಾ ಗೌಡ ಪರಿಚಯ

ಕಿರುತೆರೆ ಪ್ರೇಕ್ಷಕರಿಗೆ ಇವರು ಗೊಂಬೆ ಎಂದೇ ಪರಿಚಯ. ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಎಲ್ಲರ ಮನ ಗೆದ್ದಿದ್ದರು. ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡ ಮತ್ತು ಚಂದನ್‌ ಗೌಡ 2018ರ ಫೆಬ್ರವರಿ 18ರಂದು ಮದುವೆಯಾಗಿದ್ದರು. ಇದೀಗ ಆರು ವರ್ಷಗಳ ಬಳಿಕ ಗುಡ್‌ ನ್ಯೂಸ್‌ ನೀಡಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಟಿ ಮಿಲನಾ ನಾಗರಾಜ್‌ ಬೇಬಿ ಬಂಪ್ಸ್‌ ಫೋಟೋಶೂಟ್‌ ಹಂಚಿಕೊಂಡಿದ್ದರು. ಡಾರ್ಲಿಂಗ್‌ ಕೃಷ್ಣನ ಮುದ್ದಿನ ಮಡದಿ ಸದ್ಯದಲ್ಲಿಯೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಕೂಡ ಇತ್ತೀಚೆಗೆ ಬೇಬಿ ಬಂಪ್ಸ್‌ ಫೋಟೋ ಹಂಚಿಕೊಂಡಿದ್ದಾರೆ. ರವಿ ವರ್ಮಾನ ಕುಂಚದ ಕಲೆಯೋ ಬಲೆಯೋ ಎಂಬ ಹಾಡಿನ ಹಿನ್ನೆಲೆಯೊಂದಿಗೆ ವಿನೂತನವಾಗಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ.

ಪ್ರಣೀತಾ ಸುಭಾಷ್‌ ಮತ್ತು ಅವಿವಾ ಬಿದ್ದಪ್ಪ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸೀಮಂತ ಕಾರ್ಯಕ್ರಮ ಎಂದರೇನು?

ಗರ್ಭಧಾರಣೆಯ 7 ಅಥವಾ 8ನೇ ತಿಂಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ಮಾಡಲಾಗುತ್ತದೆ. ಆಗ ತಾಯಿಯ ಹೊಟ್ಟೆಯಲ್ಲಿ ಮಗುವಿನ ದೇಹ ಪೂರ್ಣವಾಗಿ ಬೆಳವಣಿಗೆ ಆಗಿರುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಭ್ರೂಣಕ್ಕೆ ಸಂಸ್ಕಾರ ನೀಡಲು ಸೀಮಂತ ಮಾಡಲಾಗುತ್ತದೆ. ಇದೇ ಸಮಯದಲ್ಲಿ ತಾಯಿಗೆ ಸಾಕಷ್ಟು ಬಯಕೆಗಳು ಇರುತ್ತವೆ. ತಿಂಡಿ ತಿನಿಸು ಆಸೆಗಳನ್ನು ಈಡೇರಿಸುವ ಸಲುವಾಗಿ ಬಗೆಬಗೆಯ ತಿಂಡಿಗಳನ್ನು ಬಡಿಸಿ ಸೀಮಂತ ಮಾಡಲಾಗುತ್ತದೆ.

Whats_app_banner