Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ-sandalwood news laughing buddha kannada movie trailer pot bellied police life comedy action film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

Laughing Buddha Kannada movie Trailer: ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾ ಇದೇ ಆಗಸ್ಟ್‌ 30ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

Laughing Buddha Kannada movie Trailer: ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
Laughing Buddha Kannada movie Trailer: ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

Laughing Buddha Kannada movie: ಲಾಫಿಂಗ್‌ ಬುದ್ಧ ಎಂಬ ಹೊಸ ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆಯಾಗಲಿದೆ. ಇದೀಗ ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ದೊಡ್ಡ ಹೊಟ್ಟೆಯ ಪೊಲೀಸಪ್ಪನ ನಗು ಮತ್ತು ಭಾವುಕ ಕತೆ ಇರುವ ಸೂಚನೆಯಿದೆ. ಮಲಯಾಳಂ ಭಾಷೆಯಲ್ಲಿ ಸಾಮಾನ್ಯವಾಗಿ ವಿಷಯಾಧರಿತ ಕಥೆಗಳ ಸಿನಿಮಾಗಳು ಜನಪ್ರಿಯತೆ ಪಡೆದಿವೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ಹೆಚ್ಚುತ್ತಿರುವುದಕ್ಕೆ ಲಾಫಿಂಗ್‌ ಬುದ್ಧ ಸಾಕ್ಷಿಯಾಗುವ ಸೂಚನೆ ಇದೆ. ಠಾಣೆಯೊಂದರಲ್ಲಿರುವ ಪೊಲೀಸ್‌ ತನ್ನ ದೊಡ್ಡ ದೇಹ, ಹೊಟ್ಟೆ ಹಸಿವು ಇತ್ಯಾದಿಗಳಿಂದ ತೊಂದರೆಗೀಡಾಗುವುದು, ಬಳಿಕ ದೊಡ್ಡ ಸಾಹಸ ಮಾಡುವುದು ಇತ್ಯಾದಿ ಕಥೆಯನ್ನು ಈ ಸಿನಿಮಾ ಹೊಂದಿರುವ ಸೂಚನೆಯಿದೆ. ಇದೇ ಸಮಯದಲ್ಲಿ ಕಾಮಿಡಿಯೂ ಸಾಕಷ್ಟು ಇರುವ ಸೂಚನೆ ಇದ್ದು, ಲಾಫಿಂಗ್‌ ಬುದ್ಧ ಸಿನಿಮಾದಲ್ಲಿ ನಗುವಿಗೆ ಬರವಿಲ್ಲ ಎನ್ನುವ ಸೂಚನೆಯನ್ನು ಟ್ರೇಲರ್‌ ನೀಡಿದೆ. ಲಾಫಿಂಗ್‌ ಬುದ್ಧ ಎನ್ನುವುದು ಭರತ್‌ ರಾಜ್‌ ನಿರ್ದೇಶನದ ಮತ್ತು ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಲಾಫಿಂಗ್‌ ಬುದ್ಧ ಟ್ರೇಲರ್‌ ವಿಮರ್ಶೆ

ಈ ಹಿಂದೆ ಬಿಡುಗಡೆಯಾದ ಲಾಫಿಂಗ್‌ ಬುದ್ಧ ಹಾಡಿನಲ್ಲಿ ಚಿತ್ರದ ನಾಯಕ ಗೋವರ್ಧನ್‌ ಲವ್‌ ಸ್ಟೋರಿ ಕುರಿತು ಸುಳಿವು ನೀಡಲಾಗಿತ್ತು. ಕೆ.ಕಲ್ಯಾಣ್ ಬರೆದಿರುವ "ಎಂಥಾ ಚಂದಾನೇ" ಹಾಡಿನಲ್ಲಿ ಸತ್ಯವತಿ(ತೇಜು ಬೆಳವಾಡಿ ) ಜತೆಗಿನ ಪ್ರೀತಿಯ ಕಥೆಯಿತ್ತು. ಇದೀಗ ಬಿಡುಗಡೆಯಾದ ಟ್ರೇಲರ್‌ನಲ್ಲಿ ಇವರಿಬ್ಬರ ಮದುವೆಯಾಗಿದೆ. "ಇಲ್ಲಿ ಒಬ್ಬನೇ ಎಂಟು ಜನರಿಗೆ ತದುಕಿದ್ದಾನೆ" ಎನ್ನುವ ಸಂಭಾಷನೆ ಮೂಲಕ ಟ್ರೇಲರ್‌ ಆರಂಭವಾಗುತ್ತದೆ. ಸಿನಿಮಾ ನಾಯಕನ ಸಾಹಸದ ಸೂಚನೆಯನ್ನು ಈ ಡೈಲಾಗ್‌ ನೀಡಿದೆ. ಇದಾದ ಬಳಿಕ ಪೊಲೀಸರ ಬದುಕಿನ ಕಥೆಗಳು ತೆರೆದುಕೊಳ್ಳುತ್ತವೆ. ಅಪರಾಧಿಯನ್ನು ಪತ್ತೆಹಚ್ಚುವ ಪೊಲೀಸ್‌, ಆರೋಪಿ ಜತೆ ಫೋಟೋ ತೆಗೆಸಿಕೊಳ್ಳುವ ಇತರರು, ಪೊಲೀಸರ ಕಷ್ಟದ ಡ್ಯೂಟಿ ಇತ್ಯಾದಿಗಳ ಸುಳಿವು ನೀಡಲಾಗಿದೆ. ಇದೇ ಸಮಯದಲ್ಲಿ ಈ ಗೋವರ್ಧನ್‌ನ ದೊಡ್ಡ ಹೊಟ್ಟೆಯೂ ಚಿತ್ರದ ಪ್ರಮುಖ ಅಂಶವಾಗಿರುವ ಸೂಚನೆ ನೀಡಿದೆ. ಪೊಲೀಸರು ಫಿಟ್‌ ಆಗಿರಬೇಕು, ಈ ರೀತಿ ಇರಬಾರದು, ಇಂತವರಿಂದ ಏನು ಸಾಧನೆ ಸಾಧ್ಯವಿಲ್ಲ ಎಂಬ ವಾದದ ನಡುವೆಯೇ ಲಾಫಿಂಗ್‌ ಬುದ್ಧದಲ್ಲಿ ಪ್ರಮೋದ್‌ ಶೆಟ್ಟಿ ದೊಡ್ಡಮಟ್ಟದ ಸಾಧನೆ ಮಾಡಿರುವ ಸೂಚನೆಯನ್ನು ಟ್ರೇಲರ್‌ನಲ್ಲಿ ನೀಡಲಾಗಿದೆ. ಟ್ರೇಲರ್‌ ಅಲ್ಲಲ್ಲಿ ನಗು ತರಿಸುತ್ತದೆ.

ಲಾಫಿಂಗ್‌ ಬುದ್ಧ ಆಗಸ್ಟ್‌ 30ರಂದು ಬಿಡುಗಡೆ

ಈ ಸಿನಿಮಾ ಇದೇ ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. "ನನ್ನ ಅಭಿನಯದ "ಹೀರೋ" ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಲಾಫಿಂಗ್‌ ಬುದ್ಧಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಂದು ಅವರು ಈ ಸಿನಿಮಾದ ಸ್ಟೋರಿ ಹೇಳಿದಾಗ ಮನಸ್ಸಿಗೆ ಇಷ್ಟವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಸಿನಿಮಾದ ನಾಯಕನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದ್ದೆ‌ವು. ಆಗಸ್ಟ್ 30 ರಂದು ಚಿತ್ರ ತೆರೆಗೆ ಬರಲಿದೆ‌" ಎಂದು ಇತ್ತೀಚೆಗೆ ಸಿನಿಮಾದ ನಿರ್ಮಾಪಕ ರಿಷಬ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಲಾಫಿಂಗ್‌ ಬುದ್ಧ ಪಾತ್ರವರ್ಗ

ಈ ಸಿನಿಮಾದ ಹೀರೋ ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪೇದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ, ಈ ಸಿನಿಮಾದಲ್ಲಿ ದಿಗಂತ್‌ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾಗುವ ತನಕ ಇವರ ಪಾತ್ರದ ವಿವರ ರಹಸ್ಯವಾಗಿರುತ್ತದೆ ಎಂದು ಚಿತ್ರತಂಡ ತಿಳಿಸಿದೆ. ತೇಜು ಬೆಳವಾಡಿ ಸತ್ಯವತಿ ಪಾತ್ರದಲ್ಲಿ ನಟಿಸಿದ್ದಾರೆ. ಅಂದರೆ, ಗೋವರ್ಧನನ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ‌ವಿದೆ.