ಲಿಪ್‌ಲಾಕ್‌ ಚಿತ್ರಕ್ಕೆ ಮುಹೂರ್ತ; ಇದು ಆ ಥರದ ಸಿನಿಮಾ ಅಲ್ಲವೇ ಅಲ್ಲ ಎಂದು ಮೊದಲೇ ಸ್ಪಷ್ಟನೆ ನೀಡಿದ ನಿರ್ದೇಶಕ ಮುತ್ತುರಾಜ್-sandalwood news liplock kannada movie lauched with grand pooja entertainment news in kannada mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಲಿಪ್‌ಲಾಕ್‌ ಚಿತ್ರಕ್ಕೆ ಮುಹೂರ್ತ; ಇದು ಆ ಥರದ ಸಿನಿಮಾ ಅಲ್ಲವೇ ಅಲ್ಲ ಎಂದು ಮೊದಲೇ ಸ್ಪಷ್ಟನೆ ನೀಡಿದ ನಿರ್ದೇಶಕ ಮುತ್ತುರಾಜ್

ಲಿಪ್‌ಲಾಕ್‌ ಚಿತ್ರಕ್ಕೆ ಮುಹೂರ್ತ; ಇದು ಆ ಥರದ ಸಿನಿಮಾ ಅಲ್ಲವೇ ಅಲ್ಲ ಎಂದು ಮೊದಲೇ ಸ್ಪಷ್ಟನೆ ನೀಡಿದ ನಿರ್ದೇಶಕ ಮುತ್ತುರಾಜ್

ಈ ಹಿಂದೆ ಯಂಗ್‌ ಮ್ಯಾನ್‌ ಸಿನಿಮಾ ನಿರ್ದೇಶನ ಮಾಡಿದ್ದ ಮುತ್ತುರಾಜ್‌ ಇದೀಗ ಲಿಪ್‌ಲಾಕ್‌ ಮಾಡುತ್ತಿದ್ದಾರೆ. ಅಂದರೆ, ಸದ್ದಿಲ್ಲದೆ, ಲಿಪ್‌ಲಾಕ್‌ ಹೆಸರಿನ ಸಿನಿಮಾ ಕೈಗೆತ್ತಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತವೂ ನೆರವೇರಿದೆ.

Liplock Kannada Movie: ಒಂದೇ ಟೇಕ್‌ನಲ್ಲಿ ಚಿತ್ರೀಕರಣವಾಗಿದ್ದ ಯಂಗ್ ಮ್ಯಾನ್ ಚಿತ್ರದ ನಿರ್ದೇಶಕ ಮುತ್ತುರಾಜ್ ನಿರ್ದೇಶನದ ಮುಂದಿನ ಚಿತ್ರ ಲಿಪ್ ಲಾಕ್. ಇತ್ತೀಚೆಗೆ ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಹೋದರಿ ಸ್ಪೂರ್ತಿ ಕೃಷ್ಣಮೂರ್ತಿ ಆರಂಭ ಫಲಕ ತೋರಿದರು. ನಿರ್ದೇಶಕರ ಪುತ್ರ ಲಿಖಿತ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಎಲ್ಲರೂ ಅಂದುಕೊಂಡಿರುವ "ಲಿಪ್ ಲಾಕ್" ಬೇರೆ. ಆದರೆ ಲಿಪ್ ಲಾಕ್ ನಿಜವಾದ ಅರ್ಥ ಬೇರೆ ಎಂದು ತಿಳಿಸುವ ನಿರ್ದೇಶಕ ಮುತ್ತುರಾಜ್, ಇದೊಂದು ಪರಿಶುದ್ಧ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ‌. ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರು.

ನಾಯಕಿಯರಾಗಿ ದೀಪ ಜಗದೀಶ್, ಸೃಷ್ಟಿ, ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ‌ ಎಂದರು.

ನಿರ್ಮಾಪಕನಾಗಿ ಇದು ಮೊದಲ ಚಿತ್ರ . ಹೇಮಂತ್ ಸಿನಿಮಾಸ್ ಹಾಗೂ ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ ಎಂದರು ಹೇಮಂತ್ ಕೃಷ್ಣಮೂರ್ತಿ. ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‌ ಎಂದರು ನಟ ಕರಣ್ ಆರ್ಯನ್.

ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. "ಬ್ಯಾಡ್ ಮ್ಯಾನರ್ಸ್" ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು ಪದ್ಮಾವತಿ ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್. ನಟಿಯರಾದ ದೀಪ ಜಗದೀಶ್, ಸೃಷ್ಟಿ ಹಾಗೂ ನಿಹಾರಿಕಾ ಚಿತ್ರದ ಕುರಿತು ಮಾತನಾಡಿದರು.