Nenapirali Prem: ವರಸೆ ಬದಲಿಸಿದ ನೆನಪಿರಲಿ ಪ್ರೇಮ್! ರೋಸ್ ಬದಲು ಗನ್ ಹಿಡಿದು ಪೊಲೀಸ್ ಆದ ಲವ್ಲಿ ಸ್ಟಾರ್
ನೆನಪಿರಲಿ ಪ್ರೇಮ್ ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈಗ ಬರ್ತ್‌ಡೇ ದಿನವೇ ಅವರ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಪ್ರೇಮಕಥೆಯ ಮೂಲಕ ಬರ್ತಿದ್ದ ಅವರೀಗ ಮಾಸ್ ಮತ್ತು ರಗಡ್ ಅವತಾರದಲ್ಲಿ ಎದುರಾಗಲಿದ್ದಾರೆ. ಅದೂ ಖಾಕಿ ಧರಿಸಿ ಎಂಬುದು ವಿಶೇಷ.

Nenapirali Prem: ಅಪ್ಪ ಐ ಲವ್ ಯೂ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ರಗಡ್ ಅವತಾರ ತಾಳಿದ್ದಾರೆ. ಇತ್ತೀಚೆಗಷ್ಟೇ ಪ್ರೇಮ್ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಇಡೀ ಚಿತ್ರತಂಡ ಭಾಗಿಯಾಗಿ ತಾಯಿಯ ಆಶೀರ್ವಾದ ಪಡೆದುಕೊಂಡರು.
ಇದು ಪ್ರೇಮ್ 2.0
ಇಂದು ನಾನು ಹುಟ್ಟಿದ ದಿನ. ಈ ದಿನ ಮುಹೂರ್ತ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. 2.0 ರೀಬ್ರ್ಯಾಂಡಿಂಗ್ ಅಂತಾ ನನ್ನ ಸ್ನೇಹಿತರು ಕೇಳಿದರು. ಈ ಮೊದಲು ಆಕ್ಷನ್ ಸಿನಿಮಾ ಮಾಡಿದ್ದೇವು. ಆದರೆ ಬಹಳಷ್ಟು ಗ್ಯಾಪ್ ಆಗಿತ್ತು. ಲವ್ ಬ್ರ್ಯಾಂಡ್ ಆಗಿದ್ದರಿಂದ ಈಗ ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರು ಬಂದರು. ಹೀಗಾಗಿ ಈ ಚಿತ್ರ ಒಪ್ಪಿಕೊಂಡೆ. ಸಿನಿಮಾದಲ್ಲಿ ಸ್ಟ್ರೀಕ್ಟ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ಸ್ಕ್ರೀಪ್ಟ್ ರೆಡಿಯಾಗ್ತಿದೆ. ಕ್ಲೈಮ್ಯಾಕ್ಸ್ ಚರ್ಚೆ ಹಂತದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಕಾಸ್ಟ್ ಡಿಸೈಡ್ ಆಗಿಲ್ಲ. ಮುಂದಿನ ದಿನಗಳಲ್ಲಿ ಮುಹೂರ್ತ ಮಾಡಬೇಕು ಎಂದುಕೊಂಡಿದ್ದೇವು. ಆದರೆ ನಿಮ್ಮ ಬರ್ತ್ ಡೇ ಒಳ್ಳೆ ಸಂದರ್ಭ ಅಂತಾ ನಿರ್ದೇಶಕರು ಹೇಳಿದ್ದರು. ಹೀಗಾಗಿ ಈ ದಿನ ಮುಹೂರ್ತ ಮಾಡಿದ್ದೇವೆ ಎಂದರು ಪ್ರೇಮ್.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ
ತೇಜೇಶ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದೆ. ಟೈಟಲ್ ಚರ್ಚೆಯಲ್ಲಿದೆ. ಕಥೆಗೆ ಪ್ರೇಮ್ ಸರ್ ಸೂಟ್ ಆಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದೇವೆ. ರಂಗಾಯಣ ರಘು ಸರ್ ಚಿತ್ರದ ಭಾಗವಾಗಿದ್ದಾರೆ. ಈ ತಿಂಗಳಾತ್ಯಂಕ್ಕೆ ಶೂಟಿಂಗ್‌ಗೆ ಹೊರಡಲಿದ್ದೇವೆ ಎಂದು ಮಾಹಿತಿ ನೀಡಿದರು.
11 ವರ್ಷಗಳ ಬಳಿಕ ಖಾಕಿ ತೊಟ್ಟ ಪ್ರೇಮ್
ನೆನಪಿರಲಿ ಪ್ರೇಮ್ ಮತ್ತೆ ಪೊಲೀಸ್ ಪಾತ್ರ ಮಾಡಿದ್ದಾರೆ. 11 ವರ್ಷದ ಹಿಂದೆ ಪೊಲೀಸ್ ರೋಲ್ ಮಾಡಿದ್ದರು. ಶತ್ರು ಅನ್ನೋ ಈ ಚಿತ್ರದಲ್ಲಿ ಪೊಲೀಸ್ ಖದರ್‌ನಲ್ಲಿ ಪವರ್ ತೋರಿಸಿದ್ದರು. ಆದರೆ ಪ್ರೇಮ್ ಈ ಸಲ ಬೇರೆ ರೀತಿಯ ಪೊಲೀಸ್ ಪಾತ್ರ ಮಾಡಲಿದ್ದಾರೆ. ರಫ್ ಆ್ಯಂಡ್ ಟಫ್ ಅಲ್ಲದೇ, ರಗಡ್ ಲುಕ್ ಇರೋ ಪೊಲೀಸ್ ರೀತಿನೂ ಕಾಣಿಸುತ್ತಿದ್ದಾರೆ. ಕೈಯಲ್ಲಿ ಸಿಂಗಲ್ ಬ್ಯಾರಲ್ ಗನ್ ಕೂಡ ಇದೆ. ಅದನ್ನ ಸ್ಟೈಲ್ ಆಗಿಯೂ ಪ್ರೇಮ್ ಹಿಡಿದು ಕೊಂಡು, ದೊಂಬಿ ಮಾಡೋರ ಕಡೆಗೆ ಮುಖ ಮಾಡಿ ನಿಂತಿದ್ದಾರೆ.
ಯುವ ಪ್ರತಿಭೆ ತೇಜಸ್ ಬಿ.ಕೆ ಕಥೆ ಚಿತ್ರಕಥೆ ಬರೆದು ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ. ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ. ಮುಹೂರ್ತ ನೆರವೇರಿಸಿರುವ ಚಿತ್ರತಂಡ ಈ ತಿಂಗಳ್ಯಾಂತಕ್ಕೆ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.
