ಕನ್ನಡ ಸುದ್ದಿ  /  ಮನರಂಜನೆ  /  Prem New Movie: ಲವ್ಲಿ ಸ್ಟಾರ್‌ ಹೊಸ ಸಿನಿಮಾ ಶೂಟಿಂಗ್‌ ಮುಕ್ತಾಯ; ಪ್ರೇಮ್‌ ಜೊತೆಯಾದ ಟಗರು ಹುಡುಗಿ ಮಾನ್ವಿತಾ ಕಾಮತ್‌

Prem New Movie: ಲವ್ಲಿ ಸ್ಟಾರ್‌ ಹೊಸ ಸಿನಿಮಾ ಶೂಟಿಂಗ್‌ ಮುಕ್ತಾಯ; ಪ್ರೇಮ್‌ ಜೊತೆಯಾದ ಟಗರು ಹುಡುಗಿ ಮಾನ್ವಿತಾ ಕಾಮತ್‌

ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ. ಪ್ರೇಮ್ ಹಾಗೂ ಮಾನ್ವಿತ್ ಕಾಮತ್ ಜೊತೆಗೆ ತಬಲಾ ನಾಣಿ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೊಸ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌, ಮಾನ್ವಿತಾ ಕಾಮತ್‌ ಹಾಗೂ ನಿರ್ದೇಶಕ ಅಥರ್ವ ಆರ್ಯ
ಹೊಸ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌, ಮಾನ್ವಿತಾ ಕಾಮತ್‌ ಹಾಗೂ ನಿರ್ದೇಶಕ ಅಥರ್ವ ಆರ್ಯ

ಪ್ರೇಮಂ ಪೂಜ್ಯಂ ನಂತರ ಲವ್ಲಿ ಸ್ಟಾರ್‌ ಪ್ರೇಮ್‌ ನಟಿಸಿರುವ ಹೊಸ ಸಿನಿಮಾ ಶೂಟಿಂಗ್‌ ಮುಗಿದಿದ್ದು ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಆರಂಭಿಸಿದೆ. ಇದು ಪ್ರೇಮ್‌ ಅವರ 26ನೇ ಸಿನಿಮಾವಾಗಿದ್ದು ಪ್ರೇಮ್‌ ಜೊತೆಗೆ ಟಗರು ಖ್ಯಾತಿಯ ಮಾನ್ವಿತಾ ಕಾಮತ್‌ ನಟಿಸಿದ್ದಾರೆ. ಇದು ಪ್ರೇಮ್‌ ಹಾಗೂ ಮಾನ್ವಿತಾ ಜೊತೆಗೆ ಅಭಿನಯಿಸಿರುವ ಮೊದಲ ಸಿನಿಮಾ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ರೇಮ್‌ ಹೊಸ ಚಿತ್ರವನ್ನು ಅಥರ್ವ್‌ ಆರ್ಯ ನಿರ್ದೇಶಿಸಿದ್ಧಾರೆ. ಅಥರ್ವ್ ಇದಕ್ಕೂ ಮುನ್ನ ಜೂಟಾಟ, ಗುಬ್ಬಚ್ಚಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ. ಪ್ರೇಮ್ ಹಾಗೂ ಮಾನ್ವಿತ್ ಕಾಮತ್ ಜೊತೆಗೆ ತಬಲಾ ನಾಣಿ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗಿತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

KRS ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ತಬಲಾನಾಣಿ ಹಾಗೂ ಸ್ನೇಹಿತರ ಜೊತೆಗೂಡಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ತಂದೆಯ ಮಹತ್ವ ಸಾರುವ, ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದು ಈ ಚಿತ್ರದ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಇದರ ಜೊತೆಗೆ ಪ್ರೇಮ್‌ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಶೂಟಿಂಗ್‌ ಜೂನ್‌ನಿಂದ ಆರಂಭವಾಗಲಿದೆಯಂತೆ ಇಷ್ಟು ದಿನಗಳ ಕಾಲ ತಮ್ಮ ಸಿನಿಮಾಗಳಲ್ಲಿ ಲವರ್‌ ಬಾಯ್‌ ಆಗಿ ಗುರುತಿಸಿಕೊಂಡಿದ್ದ ಪ್ರೇಮ್‌, ಮುಂದಿನ ಚಿತ್ರದಲ್ಲಿ ಫುಲ್‌ ಆಕ್ಷನ್‌ ಮಾಡಲಿದ್ದಾರಂತೆ. ಪ್ರೇಮ್‌ ಆಕ್ಷನ್‌ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಅವರ ಲುಕ್‌ ಕೂಡಾ ಬದಲಾಗಲಿದೆಯಂತೆ.

ಪ್ರೊಡಕ್ಷನ್ ನಂಬರ್ 1 ಸಿನಿಮಾಗೆ ನಾಗಾರ್ಜುನ್ ಆರ್‌. ಡಿ ಛಾಯಾಗ್ರಹಣ, ವೇದಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ. ನಾಗೇಂದ್ರ ಪ್ರಸಾದ್, ಕವಿರಾಜ್, ಕೆ. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ.

IPL_Entry_Point