ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಮಗಧೀರ ವಿಲನ್‌ ದೇವ್‌ಗಿಲ್‌; ಕನ್ನಡದಲ್ಲೂ ಬರಲಿದೆ ಅಹೋ ವಿಕ್ರಮಾರ್ಕ ಸಿನಿಮಾ-sandalwood news magadheera movie villain dev gill starrer aho vikramaarka movie new single meenakshi out mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಮಗಧೀರ ವಿಲನ್‌ ದೇವ್‌ಗಿಲ್‌; ಕನ್ನಡದಲ್ಲೂ ಬರಲಿದೆ ಅಹೋ ವಿಕ್ರಮಾರ್ಕ ಸಿನಿಮಾ

ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಮಗಧೀರ ವಿಲನ್‌ ದೇವ್‌ಗಿಲ್‌; ಕನ್ನಡದಲ್ಲೂ ಬರಲಿದೆ ಅಹೋ ವಿಕ್ರಮಾರ್ಕ ಸಿನಿಮಾ

ಟಾಲಿವುಡ್‌ನ ಸೂಪರ್ ಹಿಟ್ ಮಗಧೀರ ಚಿತ್ರದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಅಹೋ ವಿಕ್ರಮಾರ್ಕ' ಸಿನಿಮಾದಲ್ಲಿ ದೇವ್ನಾ ಯಕನಟನಾಗಿ ನಟಿಸುತ್ತಿದ್ದು, ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.

ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಮಗಧೀರ ವಿಲನ್‌ ದೇವ್‌ಗಿಲ್‌; ಕನ್ನಡದಲ್ಲೂ ಬರಲಿದೆ ಅಹೋ ವಿಕ್ರಮಾರ್ಕ ಸಿನಿಮಾ
ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಮಗಧೀರ ವಿಲನ್‌ ದೇವ್‌ಗಿಲ್‌; ಕನ್ನಡದಲ್ಲೂ ಬರಲಿದೆ ಅಹೋ ವಿಕ್ರಮಾರ್ಕ ಸಿನಿಮಾ

Aho Vikramaarka movie Song: ಮಗಧೀರ ಚಿತ್ರದಲ್ಲಿನ ಖಳ ಪಾತ್ರದ ಮೂಲಕ ಹೆಚ್ಚು ಪ್ರಚಲಿತ ಪಡೆದ ನಟ ದೇವಗಿಲ್, ಇದೀಗ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಹೋ ವಿಕ್ರಮಾರ್ಕ ಎಂಬ ಸಿನಿಮಾ ಮಾಡಿರುವ ದೇವ್ ಗಿಲ್, ಇದೀಗ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಆಗಸ್ಟ್ 30 ರಂದು, ಬಿಡುಗಡೆ ಆಗಲಿರುವ ಅಹೋ ವಿಕ್ರಮಾರ್ಕ ಸಿನಿಮಾ ತೆಲುಗು ಮಾತ್ರವಲ್ಲದೆ, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ದೇವ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೂ ಈ ತಂಡ ಬಂದು, ಸಿನಿಮಾ ಬಗ್ಗೆ ಮಾಹಿತಿ ನೀಡಿತು.

ರಾಜಮೌಳಿ ಶಿಷ್ಯನ ಸಿನಿಮಾ

ದೇವ್ ಗಿಲ್ ಅಹೋ ವಿಕ್ರಮಾರ್ಕ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಲೇ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ರಾಜಮೌಳಿ ಶಿಷ್ಯ ಪೇಟಾ ತ್ರಿಕೋಟಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ ಸೂಪರ್ ಹಿಟ್ ಮಗಧೀರ ಸಿನಿಮಾದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಇದೀಗ ಈ ಚಿತ್ರದ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿಯವರೆಗೂ ನೆಗೆಟಿವ್ ಶೇಡ್‌ನಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದ ದೇವ್‌ಗೆ ಈ ಸಿನಿಮಾ ನಾಯಕನಾಗಿ ಕೈ ಹಿಡಿಯುತ್ತಾ ಎಂಬುದು ಇದೇ ಆಗಸ್ಟ್ 30 ರಂದು ಗೊತ್ತಾಗಲಿದೆ.

ಮೀನಾಕ್ಷಿ ಹಾಡು ಬಿಡುಗಡೆ..

ಕನ್ನಡದಲ್ಲಿಯೂ ರಿಲೀಸ್ ಆಗಲಿರುವ ಅಹೋ ವಿಕ್ರಮಾರ್ಕ ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ನಗರ ಊರ್ವಶಿ ಚಿತ್ರ ಮಂದಿರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮೀನಾಕ್ಷಿ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು.

ದೇವಗಿಲ್ ಮಾತನಾಡಿ, ಮೊದಲಿನಿಂದಲೂ ನಮ್ಮ ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದೀರಾ. ಈಗ ಅಹೋ ವಿಕ್ರಮಾರ್ಕ ಚಿತ್ರಕ್ಕೂ ನಿಮ್ಮ ಆಶೀರ್ವಾದ ಇರಲಿ ಎಂದರು. ಮೀನಾಕ್ಷಿ ಹಾಡಿನಲ್ಲಿ ನಟ ದೇವಗಿಲ್ ನಾಯಕಿ ಚಿತ್ರ ಶುಕ್ಲಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಮನೀಶ್ ದಿನಕರ್ ಧ್ವನಿಯಾಗಿದ್ದಾರೆ.

ರವಿ ಬಸ್ರೂರ್ ಸಂಗೀತ ನೀಡಿದ ಚಿತ್ರ

ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ದೇವ್ ಗಿಲ್ ಸ್ಕ್ರೀನ್ ನಲ್ಲಿ ನೋಡಿದಾಗ ಭಯವಾಗುತ್ತಿತ್ತು. ನಮ್ಮ ಮನೆಗೆ ಬಂದಾಗ ಅವರ ಸರಳತೆ ಹಾಗೂ ವಿನಯತೆ ನನಗೆ ಇಷ್ಟವಾಯ್ತು. ಒಂದು ಸಿನಿಮಾದಿಂದ 3 ರಿಂದ 4ವರೆ ಸಾವಿರ ಕುಟುಂಬ ಬದುಕುತ್ತಾರೆ. ಅವರು ಬಂದು ನಾವು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದೇವೆ. ನಿಮ್ಮ ಸಪೋರ್ಟ್ ಬೇಕು ಎಂದಾಗ ಇದರಿಂದ ಒಂದಷ್ಟು ಜನ ಬದುಕುತ್ತಾರೆ ಇದಕ್ಕೆ ದಾರಿಯಾಗಲು ನಾನು ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದೇನೆ. ಸಿನಿಮಾ ಮೇಲೆ ಅವರಿಗೆ ತುಂಬಾನೇ ಪ್ರೀತಿ ಇದೆ. ಥಿಯೇಟರ್‌ನಲ್ಲಿ ಅಹೋ ವಿಕ್ರಮಾರ್ಕ್ ಚಿತ್ರ ಬೇರೆ ರೀತಿಯ ಅನುಭವ ನೀಡಲಿದೆ ಎಂದರು.

ಹೋ ವಿಕ್ರಮಾರ್ಕ ಸಿನಿಮಾಗೆ ನಿರ್ದೇಶಕ ತ್ರಿಕೋಟಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ರವೀಣ್ ತಾರ್ಡೆ, ತೇಜಸ್ವಿನಿ ಪಂಡಿತ್, ಪೋಸಾನಿ ಮುರಳಿ ಕೃಷ್ಣ, ಬಿಟ್ಟಿರಿ ಸತ್ತಿ, ಸಯಾಜಿ ಶಿಂಧೆ, ಕಾಲಕೇಯ ಪ್ರಭಾಕರ್, ವಿಕ್ರಮ್ ಶರ್ಮಾ ತಾರಾಬಳಗದಲ್ಲಿದಲ್ಲಿದ್ದಾರೆ.ಆರತಿ ದೇವಿಂದರ್ ಗಿಲ್, ಮೀಹಿರ್ ಕುಲಕರ್ಣಿ, ಅಶ್ವಿನಿ ಕುಮಾರ್ ಮಿಶ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.