Friday Release: ಶಿವರಾತ್ರಿಗೆ ಯಾವ ಸಿನಿಮಾ ನೋಡ್ತಿರಾ? ಕರಟಕ ದಮನಕದಿಂದ ಸೈತಾನ್‌ವರೆಗೆ ಚಿತ್ರಮಂದಿರಗಳಲ್ಲಿ 27 ಸಿನಿಮಾಗಳು ಬಿಡುಗಡೆ-sandalwood news march 8 movie release karataka dhamanaka ranganayaka saithan bhima blink shivaratri movies pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Friday Release: ಶಿವರಾತ್ರಿಗೆ ಯಾವ ಸಿನಿಮಾ ನೋಡ್ತಿರಾ? ಕರಟಕ ದಮನಕದಿಂದ ಸೈತಾನ್‌ವರೆಗೆ ಚಿತ್ರಮಂದಿರಗಳಲ್ಲಿ 27 ಸಿನಿಮಾಗಳು ಬಿಡುಗಡೆ

Friday Release: ಶಿವರಾತ್ರಿಗೆ ಯಾವ ಸಿನಿಮಾ ನೋಡ್ತಿರಾ? ಕರಟಕ ದಮನಕದಿಂದ ಸೈತಾನ್‌ವರೆಗೆ ಚಿತ್ರಮಂದಿರಗಳಲ್ಲಿ 27 ಸಿನಿಮಾಗಳು ಬಿಡುಗಡೆ

March 8 Movie release: ಶಿವರಾತ್ರಿ ಹಬ್ಬದ ಸಮಯದಲ್ಲಿ ಅಂದರೆ ಮಾರ್ಚ್‌ 8ರಂದು ಹಲವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಕರಟಕ ದಮನಕ, ರಂಗನಾಯಕ, ಜೋಗ್‌ 101 , ಬ್ಲಿಂಕ್‌, ಕೈಲಾಸ, ಕೊಲೆಯಾದವನೇ ಕೊಲೆಗಾರ ಸೇರಿದಂತೆ ಹಲವು ಸಿನಿಮಾ ರಿಲೀಸ್‌ ಆಗಲಿವೆ.

ಕರಟಕ ದಮನಕದಿಂದ ಸೈತಾನ್‌ವರೆಗೆ ಚಿತ್ರಮಂದಿರಗಳಲ್ಲಿ 27 ಸಿನಿಮಾಗಳು ಬಿಡುಗಡೆ
ಕರಟಕ ದಮನಕದಿಂದ ಸೈತಾನ್‌ವರೆಗೆ ಚಿತ್ರಮಂದಿರಗಳಲ್ಲಿ 27 ಸಿನಿಮಾಗಳು ಬಿಡುಗಡೆ

ಶಿವರಾತ್ರಿ ಹಬ್ಬದ ಸಮಯದಲ್ಲಿ ಹಲವು ಪ್ರಮುಖ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳು ತೆರೆಕಾಣಲಿವೆ. ಶಿವರಾತ್ರಿ ಹಬ್ಬದ ವೀಕೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಶಿವರಾಜ್‌ಕುಮಾರ್‌, ಪ್ರಭುದೇವ್‌, ಜಗ್ಗೇಶ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಪ್ರಮುಖ ನಟರ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಇದೇ ಸಮಯದಲ್ಲಿ ಹೊಸಬರ ಕೆಲವು ಚಿತ್ರಗಳೂ ರಿಲೀಸ್‌ ಆಗುತ್ತಿವೆ.

ಈ ವಾರ ತೆರೆ ಕಾಣಲಿರುವ ಸಿನಿಮಾಗಳು

ರಂಗನಾಯಕ

ನವರಸ ನಾಯಕ ಜಗ್ಗೇಶ್‌ ಅಭಿನಯದ ರಂಗನಾಯಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಜಗ್ಗೇಶ್‌- ಗುರುಪ್ರಸಾದ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಸಿನಿಮಾ ಸಿದ್ಧವಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮಠ, ಎದ್ದೇಳು ಮಂಜುನಾಥ ಬಳಿಕ ಜಗ್ಗೇಶ್‌ ಇದೀಗ ಗುರುಪ್ರಸಾದ್‌ ನಿರ್ದೇಶನದ ರಂಗನಾಯಕ ಸಿನಿಮಾದಲ್ಲಿ ನಟಿಸಿದ್ದಾರೆ.

ಕರಟಕ ದಮನಕ

ಕರಟಕ ದಮನಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಜತೆಯಾಗಿ ನಟಿಸುತ್ತಿದ್ದಾರೆ. ಒಬ್ಬರು ಕರಟಕ,ಇನ್ನೊಬ್ಬರು ದಮನಕ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಜತೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.

ಬ್ಲಿಂಕ್‌

ಬ್ಲಿಂಕ್‌ ಎಂಬ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ 'ಬ್ಲಿಂಕ್', ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾ ಎನ್ನಲಾಗಿದೆ. ಬ್ಲಿಂಕ್ ಸಿನಿಮಾಗೆ ರವಿಚಂದ್ರ ಎಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಅವನ ಸುತ್ತ ಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. ಸೈಂಟಿಫಿಕ್‌ ಫಿಕ್ಷನ್‌ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್' ಚಿತ್ರಕ್ಕೆ ನಾಯಕನಾಗಿ ದಿಯಾ ಹಾಗೂ ತೆಲುಗಿನ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ಇದ್ದಾರೆ. ಇವರೊಂದಿಗೆ ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಹಾಗೂ ಇನ್ನಿತರರು ನಟಿಸಿದ್ದಾರೆ.

ಜೋಗ್‌ 101

ವಿಜಯ್‌ ರಾಘವೇಂದ್ರ ಅಭಿನಯದ ಜೋಗ್‌ 101 ಸಿನಿಮಾವು ಈ ವಾರ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಜಯ್‌ ರಾಘವೇಂದ್ರರಿಗೆ ನಾಯಕಿಯಾಗಿ ತೇಜಸ್ವಿನಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅವಿನಾಶ್ ಆರ್ ಬಾಸೂತ್ಕರ್, ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ನೃತ್ಯ ನಿರ್ದೇಶಕ ಕಲೈ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ. ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ "ಜೋಗ್ 101" ಚಿತ್ರದ ತಾರಾಬಳಗದಲ್ಲಿದ್ದಾರೆ.

ಕೊಲೆಯಾದವನೇ ಕೊಲೆಗಾರ

ಸಿದ್ದು, ಕಿರಣ್‌ ಸೋಮಣ್ಣ, ಬಾಲಾ ರಾಜವಾಡಿ, ಮಲ್ಲಿಕಾರ್ಜುನಾ, ಚಂದ್ರಿಕಾ ನಾಗೇಶ್‌ ಮುಂತಾದವರು ನಟಿಸಿರುವ ಕೊಲೆಯಾದವನೇ ಕೊಲೆಗಾರ ಎಂಬ ಸಿನಿಮಾವೂ ಈ ವಾರ ರಿಲೀಸ್‌ ಆಗುತ್ತಿದೆ.

ಕೈಲಾಸ ಕಾಸಿದ್ರೆ

ಮಾರ್ಚ್ 8ರಂದು ಕೈಲಾಸ ಕಾಸಿದ್ರೆ ಎಂಬ ಸಿನಿಮಾವೂ ಬಿಡುಗಡೆಯಾಗುತ್ತಿದೆ. ಹಿಂದೆ ತಾರಕಾಸುರ ಚಿತ್ರದ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಚಿತ್ರದಲ್ಲಿ ಲವರ್‌ ಬಾಯ್‌ ಆಗಿ ಕಾಣಿಸಿದ್ದಾರೆ.

ಮನದರಸಿ

ರೂಪೇಶ್‌ ಜಿ ರಾಜ್‌, ಸುಹಾನ ಎಸ್‌ ಗೌಡ, ಪ್ರೀತು ಪೂಜಾ, ಮಜಭಾರತದ ಬಸವರಾಜ ನಟನೆಯ ಮನದರಸಿ ಎಂಬ ಸಿನಿಮಾ ಬಿಡುಗಡೆಯಾಗಲಿದೆ.

ತೆಲುಗು ಸಿನಿಮಾಗಳು

ಗಾಮಿ

ಭೀಮಾ

ಪ್ರೇಮಲು

ಆರ್‌ಗಂಗಾ (ರಾಜು ಗಿ ಅಮ್ಮಯ್ಯಿ- ನಾಯುಡು ಗರಿ ಅಬ್ಬಾಯಿ)

ತಮಿಳು ಸಿನಿಮಾಗಳು

ಗಾರ್ಡಿಯನ್‌

ಜೆ ಬೇಬಿ

ನಲ್ಲ ಪೆರಾಯಿ ವಾಂಗಾ ವೇದಮ್‌ ಪಿಲೈಗಳೇ

ಅರಿಮಪಟ್ಟಿ ಶಕ್ತಿವೇಲು

ಸಿಂಗಾಪೆನ್ನೈ

ಉನವರಗಲ್‌ ತೊಂದರ್‌ಕಡೈ

ಮಲಯಾಳಂ ಸಿನಿಮಾ

ಒರು ಸರ್ಕಾರ್‌ ಉಲ್ಪನಂ

ಇಥುವರೆ

ಅಗಥೋಕೊಲಾಜಿಕಲ್‌

ಮಾನಸ ವಾಚ

ಎಕ್ಸಿಟ್‌

ಹಿಂದಿ ಸಿನಿಮಾಗಳು

ಸೈತಾನ್‌ (ಅಜಯ್‌ ದೇವಗನ್‌ ಸಿನಿಮಾ)

ಪ್ರೇಮ ಭರ್‌ ಇಸ್ಕ್‌

ದಕೆಟ್‌ ಆಫ್‌ ಧೋಲಾಪುರ್‌

ಆಲ್ಬಾ ಬೀಟಾ ಗಾಮಾ

ತೇರ ಕ್ಯಾ ಹೋಗ ಲವ್ಲಿ