ಮಾರಿಗೋಲ್ಡ್ ಟ್ರೇಲರ್‌ ಬಿಡುಗಡೆ: ಕಾಗೆ ಕಾಗೆ ಕೌವ ಎಂದು ರಗಡ್‌ ಲುಕ್‌ನಲ್ಲಿ ಗಮನಸೆಳೆದ ದೂದ್‌ಪೇಡ ದಿಗಂತ್‌-sandalwood news marigold kannada movie trailer released april 5 movie release date pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಾರಿಗೋಲ್ಡ್ ಟ್ರೇಲರ್‌ ಬಿಡುಗಡೆ: ಕಾಗೆ ಕಾಗೆ ಕೌವ ಎಂದು ರಗಡ್‌ ಲುಕ್‌ನಲ್ಲಿ ಗಮನಸೆಳೆದ ದೂದ್‌ಪೇಡ ದಿಗಂತ್‌

ಮಾರಿಗೋಲ್ಡ್ ಟ್ರೇಲರ್‌ ಬಿಡುಗಡೆ: ಕಾಗೆ ಕಾಗೆ ಕೌವ ಎಂದು ರಗಡ್‌ ಲುಕ್‌ನಲ್ಲಿ ಗಮನಸೆಳೆದ ದೂದ್‌ಪೇಡ ದಿಗಂತ್‌

ಮಾರಿಗೋಲ್ಡ್‌ ಕನ್ನಡ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಏಪ್ರಿಲ್‌ 5ರಂದು ರಿಲೀಸ್‌ ಆಗಿದೆ. ಮಾರಿಗೋಲ್ಡ್‌ ಟ್ರೇಲರ್‌ ರೋಚಕವಾಗಿದ್ದು, ದಿಗಂತ್‌ ವಿಭಿನ್ನ ನಟನೆಯಿಂದ ಗಮನ ಸೆಳೆಯುತ್ತಾರೆ.

ಮಾರಿಗೋಲ್ಡ್ ಟ್ರೈಲರ್‌ ಬಿಡುಗಡೆ: ರಗಡ್‌ ಲುಕ್‌ನಲ್ಲಿ ಗಮನಸೆಳೆದ ದಿಗಂತ್‌
ಮಾರಿಗೋಲ್ಡ್ ಟ್ರೈಲರ್‌ ಬಿಡುಗಡೆ: ರಗಡ್‌ ಲುಕ್‌ನಲ್ಲಿ ಗಮನಸೆಳೆದ ದಿಗಂತ್‌

ಬೆಂಗಳೂರು: ದೂದ್‌ಪೇಡ ದಿಗಂತ್‌, ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಇಲ್ಲಿವರೆಗೆ ಲವ್‌ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ದಿಗಂತ್‌ ಆಕ್ಷನ್‌ಗೂ ಸೈ ಎಂದಿದ್ದಾರೆ. ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಇಟ್ಟುಕೊಂಡು ನಿರ್ಮಾಪಕ ರಘುವರ್ಧನ್ ಅವರು “ಮಾರಿಗೋಲ್ಡ್” ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಬಿಡುಗಡೆಗೆ ಸಿದ್ದವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ.

ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಹಾಗೂ ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್‌, ಸಂಗೀತಾ, ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಹೀಗೆ 4 ಪಾತ್ರಗಳ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

``ಮಾರಿಗೋಲ್ಡ್'' ಆಕ್ಷನ್, ಥ್ರಿಲ್ಲರ್ ಜಾನರ್ ಚಿತ್ರ. ಬೆಂಗಳೂರು, ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ನಿರ್ಮಾಪಕ ರಘುವರ್ಧನ್ ಮಾಹಿತ ನೀಡಿದ್ದಾರೆ. ಈ ಚಿತ್ರ ಆಗಲು ನಿರ್ಮಾಪಕ ರಘುನಂದನ್, ದಿಗಂತ್ ಹಾಗೂ ವಿಜಯ್ ಭರಮಸಾಗರ ಕಾರಣ. ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ ಕಲಾವಿದರೇ ಇದರಲ್ಲಿದ್ದರಿಂದ ಎಲ್ಲೂ ತೊಂದರೆಯಾಗಲಿಲ್ಲ ಎಂದು ರಾಘವೇಂದ್ರ ಎಂ. ನಾಯ್ಕ್ ಹೇಳಿದ್ದಾರೆ.

ನನ್ನ ನಟನೆ ನನಗೆ ಖುಷಿ ನೀಡಿತು ಎಂದ ದಿಗಂತ್‌

"ರಘು ಜೊತೆ ನಾನು ಇನ್ನಷ್ಟು ವರ್ಷಗಳ ಹಿಂದೆಯೇ ಕೆಲಸ ಮಾಡಬೇಕಿತ್ತು. ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ಹೊಗೆ ಧೂಳಿನಲ್ಲಿ ಶೂಟಿಂಗ್‌ ಮಾಡಿದ್ದೇವೆ. ಕೆಲವೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದ ಬಳಿಕ ಯಾಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎನ್ನುವ ಸಂಗತಿ ಅರಿವಾಯಿತು. ಈ ಸಿನಿಮಾದಲ್ಲಿ ನಾನೇನಾ ಆಕ್ಟ್ ಮಾಡಿರುವುದು ಅನ್ನಿಸಿತು. ನನ್ನ ಬೆನ್ನು ನಾನೇ ತಟ್ಟಿಕೊಂಡು ಖುಷಿ ಪಟ್ಟೆ . ನಿರ್ಮಾಪಕರು ತುಂಬಾ ತಿಳಿದುಕೊಂಡಿದ್ದಾರೆ. ಅವರೇ ನಿರ್ದೇಶಕರಾಗಿದ್ದರೂ ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ. ವೀರಸಮರ್ಥ ಒಳ್ಳೇ ಸಾಂಗ್ ಕೊಟ್ಟಿದ್ದಾರೆ" ಎಂದು ನಟ ದಿಗಂತ್‌ ಹೇಳಿದ್ದಾರೆ.

ದಿಗಂತ್‌ ಮೇಲೆ ಕ್ರಶ್‌

ಶಾಲೆಯಲ್ಲಿ ಇರುವಾಗ ದಿಗಂತ್ ಮೇಲೆ ಕ್ರಷ್ ಆಗಿತ್ತು. ಅವರ ಜೊತೆ ಫೋಟೋ ತೆಗೆಸಿಕೊಂಡರೆ ಸಾಕು ಅನ್ನಿಸಿತ್ತು. ಈಗ ಅವರ ಜೊತೆ ನಟಿಸಿದ್ದ ಖುಷಿ ಆಗಿದೆ. ಅವರ ಜೊತೆ ಲವ್ ಸ್ಟೋರಿ ಚಿತ್ರ ಮಾಡುವ ಆಸೆ ಇತ್ತು ಆದರೆ ಆಕ್ಷನ್ ಸಿನಿಮಾ ಸಿಕ್ಕಿತ್ತು. ದಿಗಂತ್ ಜೊತೆ ನಟಿಸುತ್ತಿರುವುದಕ್ಕೆ ಖುಷಿ ಇದೆ ಎಂದು ಬಿಗ್‌ಬಾಸ್‌ ಕನ್ನಡ ಖ್ಯಾತಿಯ ಸಂಗೀತಾ ಶೃಂಗೇರಿ ಹೇಳಿದ್ದಾರೆ. ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಾವಿದರಾದ ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಗಣೇಶ್ ರಾವ್ ಕೇಸರ್ ಕರ್, ವಜ್ರಾಂಗ್ ಶೆಟ್ಟಿ, ಮಹಂತೇಶ್ ಹಿರೇಮಠ್ ,ಸಂಗೀತ ನಿರ್ದೇಶಕ ವೀರ್ ಸಮರ್ಥ, ಸಂಭಾಷಣೆಕಾರ ರಘು ನಿಡವಳ್ಳಿ, ಸಾಹಿತಿ ಕವಿರಾಜ್, ಛಾಯಾಗ್ರಾಹಕ ಕೆಎಸ್ ಚಂದ್ರಶೇಖರ್ ಮುಂತಾದವರು ಮಾರಿಗೋಲ್ಡ್‌ ಸಿನಿಮಾದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.