ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌; ನನ್ನಿಂದ ವಂಚನೆ ನಡೆದಿಲ್ಲ ಎಂದ ಮಾರ್ಟಿನ್‌ ಸಿನಿಮಾದ ನಿರ್ದೇಶಕರು
ಕನ್ನಡ ಸುದ್ದಿ  /  ಮನರಂಜನೆ  /  ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌; ನನ್ನಿಂದ ವಂಚನೆ ನಡೆದಿಲ್ಲ ಎಂದ ಮಾರ್ಟಿನ್‌ ಸಿನಿಮಾದ ನಿರ್ದೇಶಕರು

ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌; ನನ್ನಿಂದ ವಂಚನೆ ನಡೆದಿಲ್ಲ ಎಂದ ಮಾರ್ಟಿನ್‌ ಸಿನಿಮಾದ ನಿರ್ದೇಶಕರು

Martin Movie Director AP Arjun: ವಿಎಫ್‌ಎಕ್ಸ್‌ ವಂಚನೆ ಕುರಿತಂತೆ ತನ್ನ ಮೇಲೆ ಬಂದ ಆರೋಪಗಳಿಗೆ ಮಾರ್ಟಿನ್‌ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಗೆ ತಮ್ಮ ಲಾಯರ್‌ ಜತೆಗೆ ಇವರು ಆಗಮಿಸಿದ್ದರು.

ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌
ವಿಎಫ್‌ಎಕ್ಸ್‌ ಕಮಿಷನ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಪಿ ಅರ್ಜುನ್‌

ಬೆಂಗಳೂರು: ವಿಎಫ್‌ಎಕ್ಸ್‌ ವಂಚನೆ ಕುರಿತಂತೆ ತನ್ನ ಮೇಲೆ ಬಂದ ಆರೋಪಗಳಿಗೆ ಮಾರ್ಟಿನ್‌ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಗೆ ತಮ್ಮ ಲಾಯರ್‌ ಜತೆಗೆ ಇವರು ಆಗಮಿಸಿದ್ದರು.

ಪೊಲೀಸ್‌ ಸ್ಟೇಷನ್‌ಗೆ ಕರೆದು ವಿಚಾರಣೆ

"ಪೊಲೀಸ್‌ ಸ್ಟೇಷನ್‌ಗೆ ಕರೆದಿರುವ ಉದ್ದೇಶ ಏನೆಂದ್ರೆ ನಮ್ಮ ಸಿನಿಮಾದಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಾಕ್ಕಿಕೊಂಡಿದ್ದಾನೆ. ನಮ್ಮನ್ನು ಕರೆದು ಇವರು ಹೇಗೆ ಸಂಬಂಧ ಏನು ಎತ್ತ ಇತ್ಯಾದಿಗಳನ್ನು ಪ್ರಶ್ನಿಸಿದ್ದಾರೆ. ಕೆಲಸದ ವಿಚಾರದಲ್ಲಿ ವಿಚಾರಿಸಿದ್ರು. ದುಡ್ಡಿನ ವಿಚಾರಗಳು ಪ್ರೊಡ್ಯುಸರ್‌ ಮತ್ತು ಸತ್ಯ ರೆಡ್ಡಿಯವರಿಗೆ ಸಂಬಂಧಪಟ್ಟದ್ದು. ಅದರ ನಡುವೆ ನಮ್ಮನ್ನು ಕರೆದು ವಿಚಾರ ಮಾಡಿದ್ದು ಯಾವಾಗಿನಿಂದ ಪರಿಚಯ, ಹೇಗೆ ಪರಿಚಯ ಇತ್ಯಾದಿ ವಿಚಾರಗಳ ಕುರಿತು. ನಮ್ಮ ಟೀಮ್‌ನಿಂದ ಸುಮಾರು 2 ಕೋಟಿ ತೆಗೆದುಕೊಂಡಿದ್ದಾನೆ. ರಾಕ್‌ಲೈನ್‌ ಸರ್‌ ಸಿನಿಮಾದ್ದು 50 ಲಕ್ಷ ತೆಗೆದುಕೊಂಡಿದ್ದಾನೆ. ಮನು ಅಂತ ವೃಷಭ ಸಿನಿಮಾದಲ್ಲಿ ಒಂದೂವರೆ ಕೋಟಿ ಫ್ರಾಡ್‌ ಮಾಡಿದ್ದಾನೆ ಆ ವ್ಯಕ್ತಿ. ನಮ್ಮ ಸಿನಿಮಾ ಟೀಮ್‌ಗೆ 4-5 ಜನರಿಗೆ ಹಣ ಕೊಟ್ಟಿದ್ದಾನೆ ಎಂದು ಅವನು ಎಲ್ಲರ ಬಳಿಯೂ ಹೇಳಿಕೊಂಡು ಬಂದಿದ್ದಾನೆ. ಇದು ಸುಳ್ಳು ಆರೋಪ ಎಂದು ಸ್ಟೇಷನ್‌ನಲ್ಲೇ ಎಲ್ಲಾ ಎನ್‌ಕ್ವಯರಿ ಮಾಡಿ ಇದಕ್ಕೂ ನಿಮಗೂ ಯಾವುದೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದೀಗ ನಾವು ಅಡ್ವೋಕೇಟ್‌ ಮುಖಾಂತರ ಮೀಡಿಯಾ ಮುಂದೆ ಬಂದು ಮಾತನಾಡುತ್ತಿದ್ದೇವೆ" ಎಂದು ನಿರ್ದೇಶಕ ಎಪಿ ಅರ್ಜುನ್‌ ಸ್ಪಷ್ಟಪಡಿಸಿದ್ದಾರೆ.

ಹಣ ನೀಡಿದ್ದಕ್ಕೆ ಆತ ಒಂದಾದ್ರೂ ಪ್ರೂಫ್‌ ನೀಡಲಿ

"ಯಾರು ಯಾರಿಗೆ ಆತ ಹಣ ನೀಡಿದ್ದಾನೆ ಎಂದಿದ್ದಾನೋ ಅವರೆಲ್ಲರನ್ನೂ ಕರೆದು ಎನ್‌ಕ್ವಯರಿ ಮಾಡಿದ್ದಾರೆ. ಯಾರಾದರೂ ಹಣ ಪಡೆದವರು ಕೂಡ ನಮಗೆ ಇಂತಿಷ್ಟು ಕೊಟ್ಟಿದ್ದಾರೆ ಎಂದು ಒಪ್ಪಿಕೊಂಡು ಇಂತಿಷ್ಟು ಹಣದ ಚೆಕ್‌ ನೀಡಿ ಅದನ್ನೂ ಕ್ಲೀಯರೂ ಮಾಡಿಸಿಕೊಂಡಿದ್ದಾರೆ. ನನ್ನ ಮೇಲೆ ಈಗ ಯಾಕೆ ಆರೋಪ ಮಾಡ್ತಾರೆ ಎಂದು ತಿಳಿಯುತ್ತಿಲ್ಲ. ಹಣ ಕೊಟ್ಟಿದ್ದಾರೆ ಅನ್ನೋರು ಏನಾದರೂ ಪ್ರೂಫ್‌ ನೀಡಬೇಕು ಅಲ್ವ. ಅದು ಹತ್ತು ರೂಪಾಯಿ ಅಲ್ಲ. ಒಂದು ಲಕ್ಷ ರೂಪಾಯಿ ಅಲ್ಲ. ಆರೋಪ ಮಾಡ್ತಾ ಇರೋದು ಐವತ್ತು ಲಕ್ಷ ರೂಪಾಯಿ, ಎಪತ್ತೈದು ಲಕ್ಷ, ಒಂದು ಕೋಟಿ ಎಂದೆಲ್ಲ ಅಂತ. ಅದಕ್ಕೆ ಏನಾದರೂ ಪ್ರೂಫ್‌ ಅವರು ನೀಡಬೇಕಲ್ವ. ಒಂದು ಮೆಸೆಜೋ, ಫೋನ್‌ ಕಾಲ್‌ ಡಿಟೈಲ್‌ ಅಥವಾ ಎಲ್ಲಿ ಹಣ ಡ್ರಾ ಮಾಡಿದ್ದಾನೆ ಎನ್ನುವುದಕ್ಕೆ ಸಾಕ್ಷಿಯಾದರೂ ನೀಡಬೇಕಲ್ವ. ಎಲ್ಲಿ ಕೊಟ್ಟಿದ್ದಾನೆ, ಯಾರ ಹತ್ರ ಕೊಟ್ಟಿದ್ದಾನೆ.. ಆತ ಒಂದಾದೂ ಪ್ರೂಫ್‌ ನೀಡಬೇಕಲ್ವೆ. ಆತ ನನ್ನ ಮೇಲೆ ಮಾತ್ರ ಆರೋಪ ಮಾಡಿದ್ದಲ್ಲ. ಎಲ್ಲರ ಮೇಲೂ ಆರೋಪ ಮಾಡಿದ್ದಾನೆ. ಸತ್ಯ ರೆಡ್ಡಿ ಎಲ್ಲರ ಮೇಲೂ ಆರೋಪ ಮಾಡಿದ್ದಾರೆ" ಎಂದು ಎಪಿ ಅರ್ಜುನ್‌ ಪ್ರಶ್ನಿಸಿದ್ದಾರೆ.

Whats_app_banner