Martin Movie Trailer: ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ; ಅಭಿಮಾನಿಗಳಲ್ಲಿ ಧ್ರುವ ಸರ್ಜಾ ನಟನೆಯ ಸಿನಿಮಾದ ನಿರೀಕ್ಷೆ ದುಪ್ಪಟ್ಟು
Martin Movie Trailer: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಟ್ರೇಲರ್ ತೋರಿಸಿದ ಚಿತ್ರತಂಡ ಇದೀಗ ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾದ ನಿರೀಕ್ಷೆ ಹಲವು ಪಟ್ಟು ಹೆಚ್ಚಾಗಿದೆ.
Martin Movie Trailer Review: ಆಕ್ಷನ್ ಪ್ರಿನ್ಸ್ ನಟನೆಯ ಮಾರ್ಟಿನ್ ಸಿನಿಮಾವು ಈ ವರ್ಷದ ಬಹುನಿರಿಕ್ಷಿತ ಕನ್ನಡ ಸಿನಿಮಾ ಎಂದರೆ ತಪ್ಪಾಗದು. ಬಹುಕೋಟಿ ವೆಚ್ಚದ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಆಕ್ಷನ್ ಲುಕ್‌ಗೆ ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಟ್ರೇಲರ್ ತೋರಿಸಿದ ಚಿತ್ರತಂಡ ಇದೀಗ ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾದ ನಿರೀಕ್ಷೆ ಹಲವು ಪಟ್ಟು ಹೆಚ್ಚಾಗಿದೆ. ಸಿನಿಮಾದ ಟೀಸರ್‌ನ ಮುಂದುವರೆದ ಭಾಗ ಎನ್ನುವಂತೆ ಮಾರ್ಟಿನ್ ಸಿನಿಮಾದ ಟ್ರೇಲರ್ ಕಾಣಿಸುತ್ತದೆ. ಈ ಟ್ರೇಲರ್‌ನಲ್ಲಿ ಯಾವುದೇ ಡೈಲಾಗ್ ಇಲ್ಲ. ಬರೀ ಆಕ್ಷನ್ ದೃಶ್ಯಗಳ ತುಣುಕುಗಳೇ ಹೆಚ್ಚಿದೆ.
ಮಾರ್ಟಿನ್ ಸಿನಿಮಾದ ಟ್ರೇಲರ್ ನೋಡಿ
ಹೇಗಿದೆ ಮಾರ್ಟಿನ್ ಟ್ರೇಲರ್?
ಈ ಟ್ರೇಲರ್ ಈ ಹಿಂದಿನ ಟೀಸರ್ ಅಂಶಗಳ ಮುಂದುವರೆದ ಭಾಗದಂತೆ ಕಂಡುಬಂದಿದೆ. ಪಾಕಿಸ್ತಾನದ ಸೈನಿಕರು ಈತನಿಗಾಗಿ ಹುಡುಕುತ್ತ ಇದ್ದಾರೆ. ಈ ಬಾರಿ ಹಲವು ಹೆಲಿಕಾಪ್ಟರ್‌ಗಳು, ಹೊಡೆದಾಟಗಳ ದೃಶ್ಯಗಳು ಕಾಣಿಸಿವೆ. ಜತೆಗೆ, ಧ್ರುವ ಸರ್ಜಾ ಅವರ ರಗಡ್ ಬಾಡಿ ಕಾಣಿಸಿದೆ. ಜತೆಗೆ, ಟ್ಯಾಟೂ ಕೂಡ ಪ್ರಮುಖ ಆಕರ್ಷಣೆಯಂತೆ ಕಂಡಿದೆ. ಈ ಟ್ರೇಲರ್ ಹೇಗಿದೆ ಎನ್ನುವುದಕ್ಕೆ ಅಭಿಮಾನಿಗಳು ಹದಿನೈದು ನಿಮಿಷದಲ್ಲೇ ಏಳುನೂರಕ್ಕೂ ಹೆಚ್ಚು ಕಾಮೆಂಟ್ ಮಾಡಿದ್ದಾರೆ. ""ಒರಿಜಿನಲ್ ಡಿಬಾಸ್ ಧ್ರುವ ಸರ್ಜಾ ಬಾಸ್" "ನಟ, ಆಕ್ಷನ್ ಫ್ರಿನ್ಸ್, ಡ್ಯಾನ್ಸರ್, ಇಂಟರ್‌ನ್ಯಾಷನಲ್ ಸ್ಟಾರ್, ಕ್ರೇಜ್ ಕಾ ಬಾಪ್, ಮೋಟಿವೇಟರ್, ಸ್ಟೈಲಿಶ್" "ಒನ್ ಮ್ಯಾನ್ ಆರ್ಮಿ ಆಕ್ಷನ್ ಸಖತ್ ಇದೆ" "ಅದ್ಭುತ ಟ್ರೇಲರ್, ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾವಾಗೋದು ಗ್ಯಾರಂಟಿ" ಎಂದೆಲ್ಲ ಅಭಿಮಾನಿಗಳು ಟ್ರೇಲರ್ ಅನ್ನು ಹಾಡಿ ಹೊಗಳಿದ್ದಾರೆ.
ಒಂದಿಷ್ಟು ಅಭಿಮಾನಿಗಳು ನಿನ್ನೆಯೇ ಮಾರ್ಟಿನ್ ಸಿನಿಮಾದ ಟ್ರೇಲರ್ ನೋಡಿದ್ದರು. ಅಂದರೆ, ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಮಾರ್ಟಿನ್ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಸಿನಿಮಾಕ್ಕೆ ಹೌಸ್ ಫುಲ್ ಆಗುವಂತೆ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಮಾರ್ಟಿನ್ ಸಿನಿಮಾದ ಟ್ರೇಲರ್ ಕಣ್ತುಂಬಿಕೊಂಡಿದ್ದರು. ಧ್ರುವ ಸರ್ಜಾ ಅವರ ಮಾಸ್ ಲುಕ್‌ಗೆ ಫಿದಾ ಆಗಿದ್ದರು. ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾವಾಗಿರುವ ಕಾರಣ ಮಾರ್ಟಿನ್ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿರುವುದು ಟ್ರೇಲರ್‌ನಲ್ಲಿ ಕಾಣಿಸುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಾರ್ಟಿನ್ ಸಿನಿಮಾ ಬಿಡುಗಡೆ ಯಾವಾಗ?
ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ದೇಶ-ವಿದೇಶಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಇಂದು ಚಿತ್ರತಂಡವು ಒಟ್ಟು ಹದಿಮೂರು ಭಾಷೆಗಳಲ್ಲಿ ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಜತೆಗೆ ಬಂಗಾಳಿ, ಕೊರಿಯಾ, ಅರೇಬಿಕ್, ರಷ್ಯನ್, ಚೈನೀಸ್, ಇಂಗ್ಲೀಷ್ ಸೇರಿ ಹಲವು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಮಾಡಿದೆ. ಇಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ವಿಭಾಗ