RCB ಕಪ್ ಗೆಲ್ಲಲೇಬೇಕು ಇದು ‘ಮರ್ಯಾದೆ ಪ್ರಶ್ನೆ’; ಕಿಂಗ್ ಕೊಹ್ಲಿ ತಂಡಕ್ಕೆ ಚಿಯರ್ಸ್ ಎಂದ ಚಂದನವನದ ಸೆಲೆಬ್ರಿಟೀಸ್
ಸಕ್ಕತ್ ಸ್ಟುಡಿಯೋ ಕಡೆಯಿಂದ “ಆರ್‌ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆ..” ಎಂಬ ಹಾಡಿಗೆ ಕೀರ್ತಿ ನಾರಾಯಣ್ ಪದ ಪೊಣಿಸಿದ್ದು, ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಹಾಡಿಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಾಥ್ ನೀಡಿದ್ದಾರೆ.
Royal Challengers Bengaluru: WPL ಮುಗಿಯುತ್ತಿದ್ದಂತೆ ಈಗ ಐಪಿಎಲ್ ಜ್ವರ ಏರುತ್ತಿದೆ. ಹೆಣ್ಮಕ್ಳು ಸ್ಟ್ರಾಂಗ್ ಗುರು ಅಂತಾ ನಮ್ಮ ಆರ್‌ಸಿಬಿ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಈಗ ಕಿಂಗ್ ಕೊಹ್ಲಿ ಬಳಗ ಕಪ್ ಎತ್ತಲು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಚಿಯರ್ಸ್ ಹೇಳಿದ್ದಾರೆ. ಅದೂ ಹಾಡಿನ ಮೂಲಕ.
ಸಕ್ಕತ್ ಸ್ಟುಡಿಯೋನ ಸ್ಪೆಷಲ್ ಕೊಡುಗೆಯಾಗಿರುವ ಆರ್‌ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆ ಎಂಬ ಹಾಡಿಗೆ ಕೀರ್ತಿ ನಾರಾಯಣ್ ಪದ ಪೊಣಿಸಿದ್ದು, ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ ಮತ್ತು ರಘು ಗೌಡ ಮತ್ತು ಅನೇಕರು ಕಲ್ಯಾಣ್ ಟ್ಯೂನ್‌ಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ಆರ್ ಸಿಬಿ ಪುರುಷ ತಂಡಕ್ಕೆ ಹೊಸ ಹುರುಪು ತುಂಬಲಿರುವ ಈ ಸಿಂಗಿಂಗ್ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸುತ್ತಿದೆ.
ಈ ಹಾಡಿಗೆ ಹೆಜ್ಜೆ ಹಾಕಿರುವ ಶೈನ್ ಶೆಟ್ಟಿ ಹೇಳುವುದು ಹೀಗೆ, ಕ್ರಿಕೆಟ್ ಕೇವಲ ಒಂದು ಆಟವಲ್ಲ; ಇದೊಂದು ಭಾವನೆ. ಕನ್ನಡಿಗರನ್ನು ಸೆಳೆಯುವ ಬಾವನೆ. ಈಗಾಗಲೇ ನಮ್ಮ ವುಮೆನ್ ಟೀಮ್ ಒಳ್ಳೇ ಫಾರ್ಮ್‌ನಲ್ಲಿ ಕಪ್ ಗೆದ್ದು ಬೀಗಿದ್ದಾರೆ. ಈಗ ಆರ್‌ಸಿಬಿ ಮೆನ್ಸ್ ತಂಡಕ್ಕೆ ಇದೀಗ ಬಲ ತುಂಬುವ ಕೆಲಸ ಆಗಬೇಕಿದೆ. ಈ ಹಾಡಿನ ಮೂಲಕ ನಮ್ಮ ತಂಡಕ್ಕೆ ಚಿಯರ್ ಮಾಡುತ್ತಿದ್ದೇವೆ" ಎಂದಿದ್ದಾರೆ ಶೈನ್ ಶೆಟ್ಟಿ.
ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ನಮ್ಮ ತಂಡಕ್ಕೀಗ ಪಾಸಿಟಿವ್ ವೈಬ್ಸ್ ಸಂದಾಯ ಮಾಡುವ ಕೆಲಸ ಆಗಬೇಕಿದೆ. ನಾವು ಕಲಾವಿದರಾಗಿ, ಪಾಸಿಟಿವ್ ಹರಡಲು ನಮ್ಮ ಕೈಲಾದ ಕೆಲಸವನ್ನು ಮಾಡುತ್ತಿದ್ದೇವೆ. ಈ ಸಲ ನಮ್ಮ ಆರ್‌ಸಿಬಿ ಪುರುಷರ ತಂಡ ಕಪ್ ಗೆದ್ದೇ ಗೆಲ್ಲಲಿದೆ ಎಂಬುದು ನಟಿ ಸಾನ್ಯಾ ಅಯ್ಯರ್ ಮಾತು.
ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದರು. ಕ್ರೀಡೆಗಳು ಸಮುದಾಯಗಳನ್ನು ಹೇಗೆ ಒಗ್ಗೂಡಿಸುತ್ತವೆ ಎಂಬುದನ್ನು ನೋಡುವುದು ನಂಬಲಾಗದ ಸಂಗತಿ. ಈ ಹಾಡು ಸ್ಯಾಂಡಲ್ ವುಡ್ ಮತ್ತು ಕ್ರಿಕೆಟ್ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಬೆಂಗಳೂರು ತಂಡದ ಹಿಂದೆ ಇನ್ನೂ ಹೆಚ್ಚಿನ ಉತ್ಸಾಹದಿಂದ ನಿಲ್ಲಲು ಅಭಿಮಾನಿಗಳನ್ನು ಪ್ರೇರೇಪಿಸುತ್ತದೆ ಎಂದು ನಾನು ನಂಬುತ್ತೇನೆ "ಎಂದು ಅವರು ಹೇಳಿದರು. ನೃತ್ಯಕ್ಕೆ ಹೆಸರುವಾಸಿಯಾದ ಕಿಶನ್ ಬೆಳಗಲಿ, ನೃತ್ಯ ಸಂಯೋಜಕ ಸುಚಿನ್ ನ ಹುಕ್ ಸ್ಟೆಪ್ ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ.
ಮರ್ಯಾದೆ ಪಶ್ನೆ ಚಿತ್ರವನ್ನು ನಿರ್ಮಿಸಿರುವ ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದ್ದು, ಈ ಹಾಡಿಗೂ ಸಿನಿಮಾಗೂ ಸಂಬಂಧವಿಲ್ಲ. ಆದರೆ, ಇದೇ ಹಾಡಿನಲ್ಲಿ ಮರ್ಯಾದೆ ಪ್ರಶ್ನೆ ಅನ್ನೋ ಪದ ಬಳಕೆಯಾಗಿದೆ. ಸಿನಿಮಾ ಪ್ರಮೋಷನ್‌ಗಿಂತ ನಮ್ಮ ಆರ್‌ಸಿಬಿ ತಂಡ ಈ ಬಾರಿಯಾದರೂ ಕಪ್ ಜಯಿಸಲಿ ಎಂಬುದಷ್ಟೇ ನಮ್ಮ ಬಯಕೆ ಎಂಬುದು ಈ ಹಾಡುನ್ನು ಸಿದ್ಧಮಾಡಿದ ಸಕತ್ ಸ್ಟುಡಿಯೋದ ಮಾತು.