ಕನ್ನಡ ಸುದ್ದಿ  /  Entertainment  /  Sandalwood News Matinee Kannada Movie Release On April 5 Sathish Ninasam Rachita Ram Nagabushan Shivraj Kr Pete Pcp

ಮ್ಯಾಟ್ನಿ ಸಿನಿಮಾ ಏಪ್ರಿಲ್ 5ಕ್ಕೆ ಬಿಡುಗಡೆ; ಡಿಂಪಲ್ ಕ್ವೀನ್ ರಚಿತಾ ರಾಮ್‌ ಸತೀಶ್ ನೀನಾಸಂ ಜತೆ ಸ್ನೇಹಿತರ ದಂಡು

Matinee Kannada Movie Release Date: ಈ ವಾರ ಮ್ಯಾಟ್ನಿ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಸತೀಶ್‌ ನೀನಾಸಂ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್‌ ನಟನೆಯ ಈ ಸಿನಿಮಾದಲ್ಲಿ ನಟ ನಾಗಭೂಷಣ್ ಶಿವರಾಜ ಕೆ ಆರ್ ಪೇಟೆ ಪೂರ್ಣ ಮತ್ತು ದಿಗಂತ್ ದಿವಾಕರ್ ನಟಿಸಿದ್ದಾರೆ.

ಮ್ಯಾಟ್ನಿ ಸಿನಿಮಾ ಏಪ್ರಿಲ್ 5ಕ್ಕೆ ಬಿಡುಗಡೆ
ಮ್ಯಾಟ್ನಿ ಸಿನಿಮಾ ಏಪ್ರಿಲ್ 5ಕ್ಕೆ ಬಿಡುಗಡೆ

ಬೆಂಗಳೂರು: ಈ ಶುಕ್ರವಾರ ಮ್ಯಾಟ್ನಿ ಎಂಬ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ ಆಗುತ್ತಿದೆ. ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಮ್ಯಾಟ್ನಿ ಸಿನಿಮಾ ಈಗಾಗಲೇ ಟ್ರೇಲರ್‌, ಹಾಡುಗಳ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮ್ಯಾಟ್ನಿ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದ್ದರು.

ಮ್ಯಾಟ್ನಿ ಸಿನಿಮಾದಲ್ಲಿ ಸ್ನೇಹಿತರ ದಂಡು

ಮ್ಯಾಟ್ನಿ ಕನ್ನಡ ಸಿನಿಮಾದಲ್ಲಿ ಸತೀಶ್ ನಿನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಮಾತ್ರವಲ್ಲದೆ ಇನ್ನೂ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಜಾನರ್‌ನದ್ದು. ಈ ಸಿನಿಮಾದಲ್ಲಿ ಸ್ನೇಹಿತರ ಸಮಾಗಮ ಕೂಡ ಆಗಿದೆ. ಸತೀಶ್ ಅವರ ಸ್ನೇಹಿತರಾಗಿ ನಟ ನಾಗಭೂಷಣ್, ಶಿವರಾಜ ಕೆ ಆರ್ ಪೇಟೆ, ಪೂರ್ಣ ಮತ್ತು ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ಇವರೆಲ್ಲ ಸ್ನೇಹಿತರು. ಸಿನಿಮಾದಲ್ಲೂ ಸ್ನೇಹಿತರಾಗಿಯೇ ನಟಿಸಿದ್ದಾರೆ.

ಮ್ಯಾಟ್ನಿ ಸಿನಿಮಾದಲ್ಲಿ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಭೂಷಣ್, ನೀನಾಸಮ್ ಸತೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಂದು ನಾಗಭೂಷಣ್‌ ಹೇಳಿದ್ದಾರೆ.

ಕಾಮಿಡಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಶಿವರಾಜ್ ಕೆಆರ್ ಪೇಟೆ ಮ್ಯಾಟ್ನಿಯಲ್ಲಿ ನವೀನ್ ಎನ್ನುವ ರಿಯಲ್ ಎಸ್ಟೆಟ್‌ ಉದ್ಯಮಿಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಶಿವರಾಜ್ ಕೆಆರ್ ಪೇಟೆ ಮತ್ತು ನೀನಾಸಮ್ ಅವರ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಕಾಮಿಡಿ ಶಿವರಾಜ್ ಕೆಆರ್ ಪೇಟೆ ಅವರಿಗೆ ಹೊಸದೇನಲ್ಲ, ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಹಾರರ್ ಕೂಡ ಇದ್ದು, ನಗು ಮತ್ತು ಭಯದಲ್ಲಿ ಪ್ರೇಕ್ಷಕರಿಗೆ ಜತೆಯಾಗಲಿದ್ದಾರೆ.

"ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದೊಳಗೆ ಹೋದರೆ ಈ ಬೇಸಿಗೆಯಲ್ಲೂ ಐಪಿಎಲ್ ಮರೆತು ತಂಪಾಗಿ ಸಿನಿಮಾ ನೋಡಿ, ಹೊರಬಂದ ಅನುಭವವಾಗುತ್ತೆ" ಎಂದು ಶಿವರಾಜ್‌ ಕೆಆರ್‌ ಪೇಟೆ ಹೇಳಿದ್ದಾರೆ. 'ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ನಾನು ಈ ಸಿನಿಮಾದಲ್ಲಿ ಆನಂದ ಎನ್ನುವ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಾವೆಲ್ಲರೂ ಈ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಫ್ರೆಂಡ್ಸ್ ಆಗಿದ್ದರಿಂದ ಈ ಸಿನಿಮಾದಲ್ಲಿ ನಟಿಸಲು ಮತ್ತಷ್ಟು ಸುಲಭವಾಯಿತು' ಎಂದು ನಟ ಪೂರ್ಣ ಹೇಳಿದ್ದಾರೆ.

ಮತ್ತೋರ್ವ ಸ್ನೇಹಿತನ‌ ಪಾತ್ರದಲ್ಲಿ ನಟ ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ದಿಗಂತ್ ಇದೇ ಮೊದಲ ಬಾರಿಗೆ ದೊಡ್ಡ ಪಾತ್ತದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಜಯದೇವ್ ಅಲಿಯಾಸ್ ಜೆಡಿ ಎನ್ನುವ ಪಾತ್ರದಲ್ಲಿ ದಿಗಂತ್‌ ದಿವಾಕರ್‌ ನಟಿಸಿದ್ದಾರೆ. "ಇದು ನನ್ನ ಮೊದಲ ಸಿನಿಮಾ. ಎಲ್ಲೂ ಕೂಡ ಫಸ್ಟ್ ಟೈಮ್ ಆಕ್ಟ್ ಮಾಡ್ತಾ ಇದಿನಿ ಅಂತ ಅನಿಸಿಲ್ಲ. ಎಲ್ಲರೂ ಫ್ರೆಂಡ್ಸ್ ಆಗಿರುವುದರಿಂದ ಶೂಟಿಂಗ್ ಸೆಟ್ ನಲ್ಲಿ ಕಷ್ಟ ಎನಿಸಿಲ್ಲ" ಎಂದು ದಿಗಂತ್‌ ಹೇಳಿದ್ದಾರೆ. ಏಪ್ರಿಲ್‌ 5ರಂದು ಮ್ಯಾಟ್ನಿ ಸಿನಿಮಾ ಬಿಡುಗಡೆಯಾಗುತ್ತಿದೆ.

IPL_Entry_Point