Friday Release: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ; ರವಿಚಂದ್ರನ್ ದಿಗಂತ್ ನಟನೆಯ ದಿ ಜಡ್ಜ್‌ಮೆಂಟ್ ಜತೆಗೆ 14 ಸಿನಿಮಾಗಳು ರಿಲೀಸ್
May 24 Movies Release: ಈ ಶುಕ್ರವಾರ ಮೇ 24ರಂದು ಹಲವು ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ. ರವಿಚಂದ್ರನ್, ದಿಗಂತ್, ಮೇಘನಾ ಗಾಂವ್ಕರ್ ನಟನೆಯ ದಿ ಜಡ್ಜ್‌ಮೆಂಟ್ ನಿರೀಕ್ಷೆ ಹೆಚ್ಚಿಸಿದೆ. ರಾಜ್ ಬಿ ಶೆಟ್ಟಿ ನಟನೆಯ ಟರ್ಬೊ ಸಿನಿಮಾವು ಮಾಲಿವುಡ್‌ನಲ್ಲಿ ರಿಲೀಸ್ ಆಗಿದೆ.

ಬೆಂಗಳೂರು: ಈ ವಾರ ಎಲ್ಲೆಡೆ ಐಪಿಎಲ್ ಕ್ರೇಜ್. ಇದೇ ಸಮಯದಲ್ಲಿ ಹಲವು ಹೊಸ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್, ಮೇಘ ಗಾಂವ್ಕರ್, ದಿಗಂತ್ ನಟನೆಯ ದಿ ಜಡ್ಜ್ ಮೆಂಟ್ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ದಿ ಜಡ್ಜ್‌ಮೆಂಟ್ ಚಿತ್ರದ ಜತೆಗೆ ಮೂರನೇ ಕೃಷ್ಣಪ್ಪ ಎಂಬ ಸಿನಿಮಾವೂ ಬಿಡುಗಡೆಯಾಗುತ್ತಿದೆ. ಈಗಾಗಲೇ ರಾಜ್ ಬಿ ಶೆಟ್ಟಿ ನಟನೆಯ, ಮಮ್ಮುಟ್ಟಿ ಸಿನಿಮಾ ಟರ್ಬೊ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಈ ವೀಕೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಬಯಸುವವರಿಗೆ ಹಲವು ಆಯ್ಕೆಗಳು ಇವೆ.
ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು
ದಿ ಜಡ್ಜ್‌ಮೆಂಟ್
ವಿ. ರವಿಚಂದ್ರನ್, ರಂಗಾಯಣ ರಘು, ಧನ್ಯಾ ರಾಮ್ ಕುಮಾರ್, ದಿಗಂತ್, ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಸೇರಿದಂತೆ ಹಲವು ಜನರು ನಟಿಸಿರುವ ದಿ ಜಡ್ಜ್‌ಮೆಂಟ್ ಸಿನಿಮಾ ಈ ವಾರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ದಿ ಜಡ್ಜ್‌ಮೆಂಟ್ ಸಿನಿಮಾಕ್ಕೆ ಗುರುರಾಜ್ ಕುಲಕರ್ಣಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಕೋರ್ಟ್ ಡ್ರಾಮ.
ಮೂರನೇ ಕೃಷ್ಣಪ್ಪ
ರಂಗಾಯಣ ರಘು ನಟನೆಯ ಇನ್ನೊಂದು ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ಸಂಪತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೋಲಾರ ಭಾಗದ ಭಾಷೆಯ ಸೊಗಡು ಇರುವ ಈ ಚಿತ್ರವೂ ನಿರೀಕ್ಷೆ ಹುಟ್ಟುಹಾಕಿದೆ. ಶ್ರೀಪ್ರಿಯ, ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಕ್ಕೆ ನವೀನ್ ನಾರಾಯಣ ಆಕ್ಷನ್ ಕಟ್ ಹೇಳಿದ್ದಾರೆ.
3ದೇವಿ
ಶುಭಾ ಪೂಂಜಾ ನಟನೆಯ 3ದೇವಿ ಎಂಬ ಕನ್ನಡ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಶುಭಾ ಪೂಂಜಾ, ಸಂದ್ಯಾ, ಜ್ಯೋತ್ಸ್ನಾ ನಟನೆಯ ಈ ಚಿತ್ರಕ್ಕೆ ಅಶ್ವಿನ್ ಮ್ಯಾಥ್ಯೂ ಆಕ್ಷನ್ ಕಟ್ ಹೇಳಿದ್ದಾರೆ.
ಎವಿಡೆನ್ಸ್
ಈ ವಾರ ಎವಿಡೆನ್ಸ್ ಎಂಬ ಚಿತ್ರ ರಿಲೀಸ್ ಆಗುತ್ತಿದೆ. ರೋಬೋ ಗಣೇಶ್, ಮಾನಸ ಜೋಶಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಸಿಪಿ ಪ್ರವೀಣ್ ನಿರ್ದೇಶನವಿದೆ.
ಈ ವಾರ ಬಿಡುಗಡೆಯಾಗುತ್ತಿರುವ ಮಲಯಾಳಂ ಸಿನಿಮಾಗಳು
- ಟರ್ಬೊ
ಮಮ್ಮುಟ್ಟಿ ಕಂಪನಿಯು ನಿರ್ಮಿಸಿರುವ ಈ ಸಿನಿಮಾದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಮುಂತಾದವರು ನಟಿಸಿದ್ದಾರೆ. ಇಂದು (ಗುರುವಾರ) ಬಿಡುಗಡೆಯಾದ ಈ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
- ಮಂದಾಕಿನಿ
- ಇಷ್ಟರಾಗಂ
ಟರ್ಬೊ ಜತೆಗೆ ಮಲಯಾಳಂನಲ್ಲಿ ಈ ವಾರ ಮಂದಾಕಿನಿ ಮತ್ತು ಇಷ್ಟರಾಗಂ ಎಂಬ ಸಿನಿಮಾಗಳು ರಿಲೀಸ್ ಆಗುತ್ತಿವೆ.
ಮೇ 24ರಂದು ಬಿಡುಗಡೆಯಾಗುವ ತೆಲುಗು ಸಿನಿಮಾಗಳು
ಸಿಲ್ಕ್ ಸಾರಿ
ತಮಿಳು ಮತ್ತು ತೆಲುಗಿನಲ್ಲಿ ಈ ವಾರ ಸಿಲ್ಕ್ ಸಾರಿ ಎಂಬ ಸಿನಿಮಾ ರಿಲೀಸ್ ಆಗುತ್ತಿದೆ.
ಸಿಡಿ (ಕ್ರಿಮಿನಲ್ ಆರ್ ಡೆವಿಲ್) ಎಂಬ ಸಿನಿಮಾವೂ ಟಾಲಿವುಡ್‌ನಲ್ಲಿ ರಿಲೀಸ್ ಆಗುತ್ತಿದೆ.
ಈ ವಾರ ಬಿಡುಗಡೆಯಾಗುವ ತಮಿಳು ಸಿನಿಮಾಗಳು
ದಂಡುಪಾಳ್ಯಂ
ಕನ್ನಡದಲ್ಲಿ ಈ ಹಿಂದೆ ಬಿಡುಗಡೆಯಾಗಿ ಯಶಸ್ಸು ಪಡೆದ ದಂಡುಪಾಳ್ಯ ಸಿನಿಮಾವೀಗ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಇದು ಡಬ್ಬಿಂಗ್ ಸಿನಿಮಾವಲ್ಲ. ತಮಿಳಿನ ದಂಡುಪಾಳ್ಯ ಸಿನಿಮಾದಲ್ಲಿ ಸೋನಿಯಾ ಅಗರ್‌ವಾಲ್, ವನಿತ ವಿಜಯಕುಮಾರ್, ಟೈಗರ್ ವೆಂಕಟ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಕೆಟಿ ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ.
ತಮಿಳಿನಲ್ಲಿ ಸಿಡಿ ಸಿನಿಮಾವೂ ರಿಲೀಸ್ ಆಗುತ್ತಿದೆ.
ಮೇ 24ರಂದು ಬಿಡುಗಡೆಯಾಗುವ ಹಿಂದಿ ಸಿನಿಮಾಗಳು
ಈ ವಾರ ಹಿಂದಿಯಲ್ಲಿ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಬಾರಹಾ ಎಕ್ಸ್ ಬಾರಹಾ ಮತ್ತು ದಿ ಹೆಸ್ಟ್ ಎಂಬ ಸಿನಿಮಾಗಳು ಹಿಂದಿಯಲ್ಲಿ ರಿಲೀಸ್ ಆಗುತ್ತಿವೆ.

ವಿಭಾಗ