ಕನ್ನಡ ಸುದ್ದಿ  /  ಮನರಂಜನೆ  /  Friday Release: ಗ್ಯಾಂಗ್ಸ್‌ ಆಫ್‌ ಗೋದಾವರಿ, ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ, ನಿರ್ಮುಕ್ತ ಸೇರಿದಂತೆ ಈ ಶುಕ್ರವಾರ 15+ ಸಿನಿಮಾ ರಿಲೀಸ್‌

Friday Release: ಗ್ಯಾಂಗ್ಸ್‌ ಆಫ್‌ ಗೋದಾವರಿ, ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ, ನಿರ್ಮುಕ್ತ ಸೇರಿದಂತೆ ಈ ಶುಕ್ರವಾರ 15+ ಸಿನಿಮಾ ರಿಲೀಸ್‌

Friday Release Movies: ಚಿತ್ರಮಂದಿರಗಳಲ್ಲಿ ಈ ಶುಕ್ರವಾರ ಮೇ 31ರಂದು ಕೆಲವೇ ಕೆಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗ್ಯಾಂಗ್ಸ್‌ ಆಫ್‌ ಗೋದಾವರಿ, ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಮುಂತಾದ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. ಕನ್ನಡದಲ್ಲಿ ನಿರ್ಮುಕ್ತ ಎಂಬ ಒಂದು ಸಿನಿಮಾ ರಿಲೀಸ್‌ ಆಗಲಿದೆ.

Friday Release: ಗ್ಯಾಂಗ್ಸ್‌ ಆಫ್‌ ಗೋದಾವರಿ, ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ, ನಿರ್ಮುಕ್ತ ಸೇರಿದಂತೆ ಈ ಶುಕ್ರವಾರ 15+ ಸಿನಿಮಾಗಳ ಬಿಡುಗಡೆ
Friday Release: ಗ್ಯಾಂಗ್ಸ್‌ ಆಫ್‌ ಗೋದಾವರಿ, ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ, ನಿರ್ಮುಕ್ತ ಸೇರಿದಂತೆ ಈ ಶುಕ್ರವಾರ 15+ ಸಿನಿಮಾಗಳ ಬಿಡುಗಡೆ

ಬೆಂಗಳೂರು: ಮೇ 31ರಂದು ಸ್ಯಾಂಡಲ್‌ವುಡ್‌ನಲ್ಲಿ ನಿರ್ಮುಕ್ತ ಎಂಬ ಒಂದು ಸಿನಿಮಾ ಮಾತ್ರ ರಿಲೀಸ್‌ ಆಗುತ್ತಿದೆ. ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಸಮಯವಾಗಿರುವುದರಿಂದ ಯಾವುದೇ ದೊಡ್ಡ ಸಿನಿಮಾಗಳು ಈ ವಾರ ರಿಲೀಸ್‌ ಆಗುತ್ತಿಲ್ಲ. ಆದರೆ, ಟಾಲಿವುಡ್‌ನಲ್ಲಿ ನೇಹಾ ಶೆಟ್ಟಿ, ಅಂಜಲಿ, ವಿಶ್ವಾಕ್‌ ಸೇನ್‌ ನಟಿಸಿರುವ ಗ್ಯಾಂಗ್ಸ್‌ ಆಫ್‌ ಗೋದಾವರಿ ಎಂಬ ಸಿನಿಮಾ ತುಸು ನಿರೀಕ್ಷೆ ಹುಟ್ಟಿಸಿದೆ. ಇದೇ ಸಮಯದಲ್ಲಿ ಹಾಲಿವುಡ್‌ನಲ್ಲಿ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸ್ಪೋರ್ಟ್ಸ್‌ ಡ್ರಾಮಾ. ಇನ್ನುಳಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಚಿತ್ರರಂಗಗಳಲ್ಲಿ ಕೆಲವೊಂದು ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ನಿರ್ಮುಕ್ತ: ಮೇ 31ರಂದು ಬಿಡುಗಡೆಯಾಗುವ ಸಿನಿಮಾ

ಈ ವಾರ ನಿರ್ಮುಕ್ತ ಹೆಸರಿನ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ರಮ್ಯಾ ಶ್ರೀನಿವಾಸ್‌ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ರೆಬೆಲ್‌ ಸ್ಟಾರ್‌ ಅವರ ತಂಗಿ ರಂಜನಿ ಪುತ್ರ ಅಭಿಷೇಕ್‌ ಸಿಕೆ ನಾಯಕ ನಟಿಸಿದ್ದಾರೆ. ನವ್ಯಾ ಪೂಜಾರಿ ನಾಯಕಿಯಾಗಿರುವ ಈ ಸಿನಿಮಾವು ಮೆಡಿಕಲ್‌ ಕಾಲೇಜಿನಲ್ಲಿ ನಡೆಯುವ ಕಥೆಯನ್ನು ಹೊಂದಿದೆಯಂತೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾನಕದ ಈ ಸಿನಿಮಾಕ್ಕೆ ಸಾಮ್ರಾಟ್‌ ಸಂಗೀತ, ವಿನೋದ್‌ ಛಾಯಾಗ್ರಹಣವಿದೆ.

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ (ಹಿಂದಿ)

ಈ ವಾರ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬಾಲಿವುಡ್‌ ಚಿತ್ರವಿದು. ಮುಖ್ಯ ಪಾತ್ರಗಳಲ್ಲಿ ಜಾನ್ವಿ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ನಟಿಸಿದ್ದಾರೆ. ಶರಣ್ ಶರ್ಮಾ ನಿರ್ದೇಶನದ, ಮಿಸ್ಟರ್ & ಮಿಸೆಸ್ ಮಾಹಿ ಸಿನಿಮಾವನ್ನು ಅಪೂರ್ವ ಮೆಹ್ತಾ, ಹಿರೂ ಯಶ್ ಜೋಹರ್ ಮತ್ತು ಕರಣ್ ಜೋಹರ್ ನಿರ್ಮಿಸಿದ್ದಾರೆ. ಸುಮಾರು 40 ಕೋಟಿ ಬಜೆಟ್‌ನಲ್ಲಿ ಮಿಸ್ಟರ್ ಅಂಡ್ ಮಿಸಸ್ ಮಾಹಿ ಸಿನಿಮಾವನ್ನು ನಿರ್ಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಗ್ಯಾಂಗ್ಸ್‌ ಆಫ್‌ ಗೋದಾವರಿ (ತೆಲುಗು)

ಈ ಶುಕ್ರವಾರ ಟಾಲಿವುಡ್‌ನಲ್ಲಿ ಗ್ಯಾಂಗ್ಸ್‌ ಆಫ್‌ ಗೋದಾವರಿ ಎಂಬ ಚಿತ್ರ ಬಿಡುಗಡೆಯಾಗಲಿದೆ ಕೃಷ್ಣ ಚೈತನ್ಯ ನಿರ್ದೇಶಣದ ಈ ಸಿನಿಮಾವನ್ನು ಸೂರ್ಯದೇವರ ನಾಗವಂಶಿ ಮತ್ತು ಸಾಯ್‌ ಸೌಂದರ್ಯ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ವೇಶಾಕ್‌ ಸೇನ್‌, ಅಂಜಲಿ, ನೇಹಾ ಶೆಟ್ಟಿ, ನಾಸಾರ್‌ ನಟಿಸಿದ್ದಾರೆ. ಕನ್ನಡ ನಟ ಪಿ ಸಾಯ್‌ ಕುಮಾರ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ವಾರ ಬಿಡುಗಡೆಯಾಗುವ ಇನ್ನಿತರ ಸಿನಿಮಾಗಳು

ಸವಿ (ಅನಿಲ್‌ ಕಪೂರ್‌) (ಭಾಷೆ: ಹಿಂದಿ)

ಹಿಟ್‌ ಲಿಸ್ಟ್‌ (ತಮಿಳು)

ಗರುಡನ್‌ (ತಮಿಳು)

ದಿ ಅಕಾಲಿ (ತಮಿಳು)

ಬುಜ್ಜಿ ಅಟ್‌ ಅನುಪಟ್ಟಿ (ತಮಿಳು)

ಕುಟುಂಬ ಸ್ತ್ರೀಯುಂ ಕುಂಜದುಂ (ಮಲಯಾಳಂ)

ಇಷ್ಟ ರಾಗಂ (ಮಲಯಾಳಂ)

ಸ್ವಕಾರ್ಯಂ ಸಂಭವ ಬಹುಲಂ (ಮಲಯಾಳಂ)

ಕುಂಡಲ ಪುರಾಣಂ (ಮಲಯಾಳಂ)

ಆಂಡ್ರೂ ದಿ ಮ್ಯಾನ್‌ (ಮಲಯಾಳಂ)

ದಿ ಮಿಸ್ಟೇಕರ್‌ ವೂ (ಮಲಯಾಳಂ)

ಹೋಯ್‌ ಮಹಾರಾಜ (ಮರಾಠಿ)

ಟಿ20 ವರ್ಲ್ಡ್‌ಕಪ್ 2024