‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌
ಕನ್ನಡ ಸುದ್ದಿ  /  ಮನರಂಜನೆ  /  ‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌

‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌

ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ನಟಿ ಮೇಘನಾ ರಾಜ್‌ ಸರ್ಜಾ, ಪತಿ ಚಿರಂಜೀವಿ ಸರ್ಜಾ ಜತೆಗಿರುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಬರಹದೊಂದಿಗೆ ಶೇರ್‌ ಮಾಡಿದ್ದಾರೆ.

‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌
‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌

Meghana Raj Sarja: ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಅವರದ್ದು ಬಹು ವರ್ಷಗಳ ಪ್ರೀತಿ. ಆ ಪ್ರೀತಿಗೆ ಮದುವೆಯ ಮುದ್ರೆಯೂ ಬಿದ್ದಿತ್ತು. ಆದರೆ, ಆ ಖುಷಿ ಹೆಚ್ಚು ದಿನಗಳ ಕಾಲ ನಿಲ್ಲಲಿಲ್ಲ. ಮದುವೆಯಾಗಿ ಎರಡೇ ವರ್ಷಕ್ಕೆ ಚಿರು ಸರ್ಜಾ ನಿಧನರಾದರು. ಈಗ ಪತಿಯ ನೆನಪಿನಲ್ಲಿಯೇ ಮಗನ ಜತೆಗೆ ದಿನ ದೂಡುತ್ತಿದ್ದಾರೆ ಮೇಘನಾ. 7ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೂ ವಿಶೇಷ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಚಂದನವನದ ಚೆಂದದ ಜೋಡಿ ಮೇಘನಾ ರಾಜ್‌ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಕನ್ನಡದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಪ್ರೀತಿ ಫಲಿಸಿ, ಮದುವೆಯಲ್ಲಿ ಒಂದಾಗಿದ್ದರು. ಆದರೆ ಆ ಪ್ರೀತಿ ಮಾತ್ರ ಹೆಚ್ಚು ದಿನ ಉಳಿಯಲಿಲ್ಲ. ಅನಿರೀಕ್ಷಿತವಾಗಿ. ಸಣ್ಣ ಸುಳಿವನ್ನೂ ನೀಡದೇ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದರು.

ಈಗ ಇದೇ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜಕ್‌ ಸರ್ಜಾ, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ. ಅಂದರೆ, ಇಂದಿಗೆ (ಮೇ 2) ಚಿರು ಜತೆ ಮದುವೆ ಆಗಿ ಬರೋಬ್ಬರಿ ಏಳು ವರ್ಷಗಳು ಕಳೆದಿವೆ. 2018ರ ಮೇ 2ರಂದು ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿತ್ತು. ಸ್ಯಾಂಡಲ್‌ವುಡ್‌ ಕಲಾವಿದರು ಈ ಮದುವೆಗೆ ಸಾಕ್ಷಿಯಾಗಿದ್ದರು.

ಸೋಷಿಯಲ್‌ ಮೀಡಿಯಾ ಪೋಸ್ಟ್‌

ಈಗ ಆ ವಿವಾಹ ವಾರ್ಷಿಕೋತ್ಸವದ ನೆನಪಿನಲ್ಲಿ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮೇಘನಾ. ಮೇಣದ ಬತ್ತಿಯ ಬೆಳಕಲ್ಲಿ ಮೇಘನಾ ಮತ್ತು ಚಿರು ಕುಳಿತ ಭಂಗಿಯ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ, ಅಷ್ಟೇ ಭಾವುಕ ಕ್ಯಾಪ್ಷನ್‌ ನೀಡಿದ್ದಾರೆ. ನಟಿಯ ಪೋಸ್ಟ್‌ಗೆ ನೆಟ್ಟಿಗರು ಮನದುಂಬಿ ಹರಸಿದ್ದಾರೆ.

ನನ್ನ ಬೆಳಕು ನೀನು

ಮೇಣದ ಬತ್ತಿಯ ಬೆಳಕಿನಲ್ಲಿ ಒಂದು ಸುಮಧುರ ಗಳಿಗೆಯ ಕ್ಷಣದ ಫೋಟೋಗಳನ್ನು ಮೇಘನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ‘ನನ್ನ ಮಿಸ್ಟರ್‌ ರೈಟ್.‌ ಕರಾಳ ರಾತ್ರಿಯಲ್ಲೂ, ಸುರಂಗದಾಳದಲ್ಲೂ ಮಿನುಗುವ ಬೆಳಕು ನೀನು" ಎಂದು ಪೋಸ್ಟ್‌ ಮಾಡಿ, ಹ್ಯಾಪಿ ಆನಿವರ್ಸರಿ ಎಂದಿದ್ದಾರೆ. ಅಂದಹಾಗೆ 2020ರ ಜೂನ್‌ 7ರಂದು ನಟ ಚಿರಂಜೀವಿ ಸರ್ಜಾ ಹೃದಯ ಸ್ತಂಭನದಿಂದ ನಿಧನರಾದರು. ಚಿರು ನಿಧನದ ಬಳಿಕ ಅವನದೇ ರೂಪದಲ್ಲಿ ಮಗ ರಾಯನ್‌ ಆಗಮಿಸಿದ್ದಾನೆ.

ಚಿತ್ರರಂಗಕ್ಕೆ ಕಂಬ್ಯಾಕ್‌

ಚಿರು ನಿಧನದ ಬಳಿಕ ಒಂದಷ್ಟು ವರ್ಷ ಆಜ್ಞಾತಕ್ಕೆ ಜಾರಿದ ಮೇಘನಾ, ಆ ನೋವಿನಿಂದ ಹೊರಬಂದಿರಲಿಲ್ಲ. ಈ ವೇಳೆ ಮೇಘನಾಗೆ ಸಾಥ್‌ ನೀಡಿದವರೇ ಅವರ ಆಪ್ತ ಸ್ನೇಹಿತರು. ಸ್ನೇಹಿತ ಪನ್ನಗಾಭರಣ ಸ್ವತಃ ಮೇಘನಾಗಾಗಿ ತತ್ಸಮ ತದ್ಭವ ಸಿನಿಮಾ ನಿರ್ಮಾಣ ಮಾಡಿದರು. ಪ್ರಜ್ವಲ್‌ ದೇವರಾಜ್‌ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ಈಗ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ ಅಮರ್ಥ ಚಿತ್ರದಲ್ಲಿ ಅವರಿಗೆ ಜೋಡಿಯಾಗಿದ್ದಾರೆ. ವಿನಯ್ ಪ್ರೀತಂ ಮತ್ತು ಗುರು ಹೆಗ್ಡೆ ಈ ಚಿತ್ರದ ನಿರ್ದೇಶಕರು.

Whats_app_banner