ದರ್ಶನ್‌ಗೆ 300 ಪದಗಳ ಪ್ರಬಂಧ ಬರೆಸಿ ಬಿಟ್ಟುಬಿಡಿ, ಜೈಲಲ್ಲಿ ಪ್ರಜ್ವಲ್ ಜತೆ ದರ್ಶನ್; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆ
Darshan Arrest: ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಬಂಧನಕ್ಕೆ ಸಂಬಂಧಪಟ್ಟಂತೆ ಹಲವು ಟ್ರೋಲ್‌ಗಳು ವೈರಲ್ ಆಗುತ್ತಿವೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ, ಇತ್ತೀಚೆಗೆ ಕಾಟೇರ ಸಿನಿಮಾದ ಮೂಲಕ ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ದರ್ಶನ್ ಇಂದು ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ವಿಚಾರಣೆ ನಡೆಯುತ್ತಿದೆ. ಇದೇ ಸಮಯದಲ್ಲಿ ದರ್ಶನ್ ಅಭಿಮಾನಿಗಳು, ಡಿಬಾಸ್ ಇಷ್ಟಪಡದೆ ಇರುವವರು ಸೋಷಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಪೋಸ್ಟ್‌ಗಳನ್ನು ಹಾಕುತ್ತ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಕೆಲವೊಂದು ಟ್ರೋಲ್‌ಗಳು, ಮೀಮ್ಸ್‌ಗಳು ವೈರಲ್ ಆಗುತ್ತಿವೆ.
ಪ್ರಬಂಧ ಬರೆಸಿ ಬಿಟ್ಟುಬಿಡಿ
ಪುಣೆಯಲ್ಲಿ ಇತ್ತೀಚೆಗೆ ದುಬಾರಿ ಕಾರು ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಅಪ್ರಾಪ್ತ ವ್ಯಕ್ತಿಗೆ ಕೋರ್ಟ್ ಪ್ರಬಂಧ ಬರೆಯುವ ಶಿಕ್ಷೆ ನೀಡಿತ್ತು. ಇದೀಗ ದರ್ಶನ್ ಬಂಧನದ ಸಮಯದಲ್ಲೂ ಟ್ವಿಟ್ಟರ್‌ನಲ್ಲಿ ಇದೇ ರೀತಿಯ ಟ್ರೋಲ್ ಆಗುತ್ತಿದೆ. "ದರ್ಶನ್‌ಗೆ ಜಲಗಾರದ ಕುರಿತು 300 ಪದಗಳ ಪ್ರಬಂಧ ಬರೆಸಿ ಬಿಟ್ಟುಬಿಡಿ" ಎಂದು ಕೆಲವು ಟ್ರೋಲ್ ಪೇಜ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ. "ಆದರೆ, ಅವರಿಗೆ 300 ಪದದ ಪ್ರಬಂಧ ಬರೆಯಲು ಕಷ್ಟವಾಗಬಹುದು" ಎಂದೆಲ್ಲ ಕಾಮೆಂಟ್‌ಗಳನ್ನು ಮಾಡಲಾಗಿದೆ.
ಇದನ್ನು ಓದಿ: ದರ್ಶನ್ ಬಂಧನಕ್ಕೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳು
ಸುದೀಪ್ ಹೀಗೆ ನ್ಯೂಸ್ ನೋಡ್ತಾ ಇರ್ಬೋದು!
ಕೆಲವರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ "ಸುದೀಪ್ ಈಗ ಈ ರೀತಿ ನ್ಯೂಸ್ ನೋಡುತ್ತಿರಬಹುದು" ಎಂಬರ್ಥದ ವಿಡಿಯೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಿದ್ದಾರೆ.
ಪರಪ್ಪನ ಅಗ್ರಹಾರಕ್ಕೆ ಪ್ರವೇಶ
ಅನಾಥರು ಸಿನಿಮಾದ ದೃಶ್ಯವೊಂದನ್ನು ಹಂಚಿಕೊಂಡು ಕೆಲವರು ದರ್ಶನ್ ಪರಪ್ಪನ ಅಗ್ರಹಾರಕ್ಕೆ ಈ ರೇಂಜ್‌ನಲ್ಲಿ ಎಂಟ್ರಿ ನೀಡಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಡಿ ಬಾಸ್ ತನ್ನ ಹಳೆಯ ಸೆಲ್‌ಮೇಟ್‌ಗಳನ್ನು ಭೇಟಿಯಾಗುವುದು
ದರ್ಶನ್ ಜೈಲಿನಲ್ಲಿ ಹಳೆಯ ಸೆಲ್ ಮೇಟ್‌ಗಳನ್ನು ಭೇಟಿಯಾಗುವುದು ಎಂಬರ್ಥದ ವಿಡಿಯೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.
ಇಂದ್ರಜಿತ್ ಲಂಕೇಶ್ ಮನೆಯಲ್ಲಿ ಇವತ್ತು ಪಾರ್ಟಿ ಈ ರೀತಿ ಇರಬಹುದು ಎಂದು ಕೆಲವರು ಟ್ರೋಲ್ ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ದರ್ಶನ್‌ಗೆ ತನ್ನ ಸೆಲ್‌ಮೇಟ್‌ಗಳನ್ನು ಪರಿಚಯ ಮಾಡುವುದು ಎಂಬರ್ಥದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಹೀಗೆ ದರ್ಶನ್ ಬಂಧನದ ಬಳಿಕ ಟ್ವಿಟ್ಟರ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಟ್ರೋಲ್‌ಗಳು ಹರಿದಾಡುತ್ತಿವೆ. ಸೋಷಿಯಲ್ ಮೀಡಿಯಾದ ಈ ಟ್ರೋಲಿಗರು ಯಾವ ಯಾವ ವಿಷಯವನ್ನು ಯಾವ ವಿಷಯಕ್ಕೆ ಲಿಂಕ್ ಮಾಡುತ್ತಿದ್ದಾರೆ. ಇನ್ನೊಂದೆಡೆ ದರ್ಶನ್‌ನ ಕಟ್ಟಾ ಅಭಿಮಾನಿಗಳು ಡಿಬಾಸ್ ಪರವಾಗಿ ತೋಚಿದಂತೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಪುನೀತ್ ರಾಜ್‌ಕುಮಾರ್, ಸುದೀಪ್, ಕುಮಾರಸ್ವಾಮಿ ಮುಂತಾದವರನ್ನೂ ಈ ಘಟನೆಗೆ ಹೋಲಿಸಿಕೊಂಡು ಏನೇನೋ ಕಾಮೆಂಟ್ ಮಾಡುತ್ತಿದ್ದಾರೆ.

ವಿಭಾಗ