ಕನ್ನಡ ಸುದ್ದಿ  /  Entertainment  /  Sandalwood News Modern Raita Shashi And Paavana Gowda Starrer Mehabooba Movie Trailer Released By Hasiru Sene Mnk

Mehabooba Trailer: ಹಸಿರು ಸೇನೆಯ ಅನ್ನದಾತರಿಂದ ‘ಮೆಹಬೂಬ’ ಸಿನಿಮಾ ಟ್ರೇಲರ್‌ ಬಿಡುಗಡೆ; 15ಕ್ಕೆ ಚಿತ್ರ ರಿಲೀಸ್

ಮಾಡರ್ನ್‌ ರೈತ ಶಶಿ ಹಾಗೂ ಪಾವನಾ ನಟನೆಯ ಮೆಹಬೂಬಾ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಎರಡು ಹಾಡುಗಳಿಂದ ಸದ್ದು ಮಾಡಿರೋ ಈ ಸಿನಿಮಾ. ಹಲವು ವಿಶೇಷ ಮತ್ತು ವಿಶಿಷ್ಠ ವಿಚಾರಗಳಿಂದ ತುಂಬಿದೆ. ಇದೇ ಮಾರ್ಚ್ 15ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದ್ದು, ಈಗ ಟ್ರೇಲರ್‌ ಬಿಡುಗಡೆಯಾಗಿದೆ.

Mehabooba Trailer: ಹಸಿರು ಸೇನೆಯ ಅನ್ನದಾತರಿಂದ ಶಶಿ ನಟನೆಯ ‘ಮೆಹಬೂಬ’ ಸಿನಿಮಾ ಟ್ರೇಲರ್‌ ಬಿಡುಗಡೆ
Mehabooba Trailer: ಹಸಿರು ಸೇನೆಯ ಅನ್ನದಾತರಿಂದ ಶಶಿ ನಟನೆಯ ‘ಮೆಹಬೂಬ’ ಸಿನಿಮಾ ಟ್ರೇಲರ್‌ ಬಿಡುಗಡೆ

Mehabooba Trailer: ಬಿಗ್‌ಬಾಸ್‌ ವಿಜೇತ, ಮಾರ್ಡನ್ ರೈತ ಶಶಿ ಮೆಹಬೂಬಾ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ಅವರ ಚೊಚ್ಚಲ ಕನಸು ಪ್ರೇಕ್ಷಕರ ಮಡಿಲು ಸೇರೋದಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ಮಾರ್ಚ್ 15ಕ್ಕೆ ಮೆಹಬೂಬಾ ಸಿನಿಮಾ ರಿಲೀಸ್‌ ಆಗಲಿದೆ. ಅದಕ್ಕೂ ಮೊದಲು ಈ ಸಿನಿಮಾದ ಟ್ರೇಲರ್ ರಿಲೀಸ್‌ ಆಗಿದೆ.

ಶಶಿ ಹೊಸ ಪ್ರಯತ್ನಕ್ಕೆ ದೇಶದ ಬೆನ್ನೆಲುಬು ರೈತರು ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ರಿಲೀಸ್ ಮಾಡಿದ ಹಸಿರು ಸೇನೆಯ ಅನ್ನದಾತರು ಶಶಿ ಕೆಲಸಕ್ಕೆ ಜೊತೆಯಾಗಿ ನಿಂತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಮೆಹಬೂಬಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅನ್ನದಾತರು ಆಗಮಿಸಿದ್ದರು. ಶಶಿ ಅವರಿಗೆ ದೃಷ್ಟಿ ತೆಗೆದು ಟ್ರೇಲರ್ ರಿಲೀಸ್ ಮಾಡಿದರು.

ನೀವೇ ನನ್ನ ಫಸ್ಟ್‌ ಸರ್ಕಲ್‌

ನಟ ಶಶಿ ಮಾತನಾಡಿ, ನನ್ನ ರೈತಾಪಿ ವರ್ಗದವರು, ಬಿಗ್ ಬಾಸ್‌ನಲ್ಲಿ ನನ್ನನ್ನು ನೋಡಿದವರು. ನಾನು ಯಾರಿಗೆ ಪರಿಚಯ ಇದ್ದೇನೆ. ನೀವು ನನ್ನ ಫಸ್ಟ್ ಸರ್ಕಲ್ ಆಗಿರುತ್ತೀರಾ. ನೀವು ನನ್ನ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ಚೆನ್ನಾಗಿದೆ ಎಂದು ಬೇರೆಯವರಿಗೆ ಹೇಳಿದರೆ ಸಾಮಾನ್ಯ ಪ್ರೇಕ್ಷಕರ ಬಂದು ನೋಡುತ್ತಾರೆ. ನೀವು ಬಂದು ನೋಡಿಲ್ಲ ಎಂದರೆ ಒಳ್ಳೊಳ್ಳೆ ಸಿನಿಮಾಗಳು ನಿಲ್ಲುವುದು ಕಷ್ಟವಾಗುತ್ತದೆ. ನಾನು ಈ ಚಿತ್ರದಲ್ಲಿ ಒಬ್ನೇ ಹೊಸಬ. ಎಲ್ಲರೂ ಘಟಾನುಘಟಿಗಳು ಇದ್ದಾರೆ. ನಾವು ಚಿತ್ರ ಮಾಡಿರುವುದು ಎಂಟು ಕೋಟಿ ಜನರಿಗೆ. ಇವರಿಗೆ ಹೊಸಬರ ಕನೆಕ್ಟ್ ಆಗಬೇಕು ಎಂದರೆ ಕಂಟೆಂಟ್ ಮೂಲಕ‌‌ ಕನೆಕ್ಟ್ ಆಗಬೇಕು. ನಾನು ಸಿನಿಮಾ ಹೀರೋ ಆಗಲ್ಲ. ಕಂಟೆಂಟ್ ಹೀರೋ ಎಂದರು.

ಬಳಿಕ ಮಾತನಾಡಿದ ನಿರ್ದೇಶಕ ಅನೂಪ್ ಆಂಟೋನಿ, ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಲಿ. ಇದೇ 15ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಸ್ವಲ್ಪ ಭಯ ಇದೆ. ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ ಎಂದರು.

ಸರ್ವಧರ್ಮ ಸಾಮರಸ್ಯ ಸಾರುವ ಮೆಹಬೂಬಾ ಸಿನಿಮಾದಲ್ಲಿ ಶಶಿಗೆ ನಾಯಕಿಯಾಗಿ ಪಾವನ ಗೌಡ ಮಿಂಚಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಮೆಹಬೂಬಾ’ ಚಿತ್ರವನ್ನು ಶಶಿ ನಿರ್ಮಾಣ ಮಾಡಿದ್ದಾರೆ. ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ.

ಮ್ಯಾಥ್ಯೂಸ್‌ ಮನು ಅವರು ‘ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಿರುವ ಮೆಹಬೂಬಾ ಸಿನಿಮಾ ಮಾರ್ಚ್ 15ಕ್ಕೆ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

IPL_Entry_Point