ಕನ್ನಡ ಸುದ್ದಿ  /  Entertainment  /  Sandalwood News Movie Therapy Top 10 Kannada Comfort Movies To Relieve Stress Comedy Sentiment Stress Buster Movies Pcp

Movie Therapy: ಈ 10 ಕನ್ನಡ ಸಿನಿಮಾಗಳನ್ನು ನೋಡಿದ್ರೆ ಚಿಂತೆಯೆಲ್ಲ ಮಾಯ; ನಿಮಗೆ ಖುಷಿ ಕೊಟ್ಟ ಚಲನಚಿತ್ರ ಯಾವುದು ನೆನಪಿಸಿಕೊಳ್ಳಿ

Movie Therapy: ಸಿನಿಮಾ ನೋಡಿದ್ರೆ ಮನಸ್ಸಿಗೆ ಶಾಂತಿ, ಸಮಧಾನ, ಉತ್ಸಾಹ, ಉಲ್ಲಾಸ ದೊರಕುತ್ತ? ಕೆಲವೊಂದು ಹೊಡಿಬಡಿ ಸಿನಿಮಾಗಳನ್ನು ನೋಡಿದಾಗ ತಲೆ ಕೆಟ್ಟುಹೋಗಬಹುದು. ಕೆಲವೊಂದು ಸಿನಿಮಾಗಳು ಮನಸ್ಸಿಗೆ ಮುದ ನೀಡುತ್ತವೆ.

ಮನಸ್ಸಿಗೆ ಮುದ ನೀಡುವ ಕನ್ನಡ ಸಿನಿಮಾಗಳು
ಮನಸ್ಸಿಗೆ ಮುದ ನೀಡುವ ಕನ್ನಡ ಸಿನಿಮಾಗಳು

ಒಳ್ಳೆಯ ಸಿನಿಮಾಗಳಿಗೆ ಮನಸ್ಸಿಗೆ ಚೈತನ್ಯ, ಶಾಂತಿ, ಸಮಧಾನ, ಉಲ್ಲಾಸ, ಉತ್ಸಾಹ ನೀಡುವ ಶಕ್ತಿ ಇರುತ್ತದೆ. ಕೆಲವು ಸಿನಿಮಾಗಳು ನಮಗೆ ಭಾವನಾತ್ಮಕ ಮತ್ತು ಮಾನಸಿಕ ಹಿತಾನುಭವ ನೀಡುತ್ತವೆ. ಕೆಲವೊಬ್ಬರು ನಟಿನಟರ ನಟನೆ, ಸಿನಿಮಾದ ಕಥೆ ಇತ್ಯಾದಿಗಳು ಮನಸ್ಸಿಗೆ ಥೆರಪಿ ರೀತಿ ಇರುತ್ತದೆ. ಕನ್ನಡದಲ್ಲಿ ಈ ರೀತಿಯ ಹಲವು ಚಲನಚಿತ್ರಗಳು ಇವೆ. ಇವುಗಳಲ್ಲಿ ಹತ್ತು ಚಲನಚಿತ್ರಗಳನ್ನು ಹೆಕ್ಕೋದು ನಿಜಕ್ಕೂ ಕಷ್ಟ. ಹಳೆಯ ಮತ್ತು ಹೊಸ ಚಲನಚಿತ್ರಗಳಲ್ಲಿ ಮೂವಿ ಥೆರಪಿ ಪರಿಕಲ್ಪನೆಗೆ ಸೂಕ್ತವಾದ ಹತ್ತು ಚಲನಚಿತ್ರಗಳ ವಿವರ ಇಲ್ಲಿದೆ. ಇದು ಅಂತಿಮವಲ್ಲ. ನಿಮಗೆ ಇಷ್ಟವಾದ, ನಿಮಗೆ ಹಿತಾನುಭವ ನೀಡಿದ ಸಿನಿಮಾವನ್ನು ನೀವು ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.

ರಾಮಾ ಶಾಮಾ ಭಾಮಾ

ಕನ್ನಡದ ಈ ಚಿತ್ರ ನೋಡಿದರೆ ಖುಷಿ ಪಡದೆ ಇರಲು ಸಾಧ್ಯವೇ. ಈ ಚಿತ್ರದಲ್ಲಿ ಕಮಲಹಾಸನ್‌, ರಮೇಶ್‌ ಅರವಿಂದ್‌ ಮುಂತಾದವರು ಸಾಕಷ್ಟು ಮನರಂಜನೆ ನೀಡುತ್ತಾರೆ. ಈ ಚಿತ್ರ ತೆರೆಕಂಡು ಹಲವು ವರ್ಷಗಳು ಕಳೆದರೂ ಈಗಲೂ ನೋಡಿದರೆ ಬೋರ್‌ ಆಗದು.

ಗೌರಿ ಗಣೇಶ

ಫಣಿ ರಾಮಚಂದ್ರ ನಿರ್ದೇಶಣದ ಗೌರಿ ಗಣೇಶ ಎಂಬ ಚಿತ್ರ ನೋಡಿದರೆ ಹೊಟ್ಟೆತುಂಬಾ ನಗು ಖಾತ್ರಿ. ಅನಂತ್‌ ನಾಗ್‌ ಮತ್ತು ಬಾಲ ಕಲಾವಿದ ಆನಂದ್‌ ಕಾಂಬಿನೇಷನ್‌ನಲ್ಲಿ ಈ ಚಿತ್ರ ಸಖತ್‌ ಖುಷಿ ನೀಡುತ್ತದೆ.

ಅಮೃತವರ್ಷಿಣಿ

ರಮೇಶ್‌ ಅರವಿಂದ್‌ ನಟನೆಯ ಕೆಲವು ಹಳೆಯ ಚಿತ್ರಗಳು ನಿಜಕ್ಕೂ ಮನಸ್ಸಿಗೆ ಥೆರಪಿ ನೀಡುವಂತವು. ಅವುಗಳಲ್ಲಿ ಅಮೃತ ವರ್ಷಿಣಿ, ಅಮೆರಿಕಾ ಅಮೆರಿಕಾ, ನಿನ್ನೇ ಪ್ರೀತಿಸುವೆ, ಪಂಚಮವೇದ, ಕುಶಲವೇ ಕ್ಷೇಮವೇ, ಓ ಮಲ್ಲಿಗೆ ಮುಂತಾದ ಚಿತ್ರಗಳು ಖುಷಿ ನೀಡುತ್ತವೆ.

ಒಂದು ಮೊಟ್ಟೆಯ ಕಥೆ

ರಾಜ್‌ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಒಂದು ಮೊಟ್ಟೆಯ ಕಥೆ ಸಾಕಷ್ಟು ಜನಪ್ರಿಯತೆ ಪಡೆಯಿತು. ಬೋಳುತಲೆಯ ಗೋಳಿನ ಕಥೆಯನ್ನು ಹೊಂದಿರುವ ಈ ಸಿನಿಮಾ ನೋಡುಗರಿಗೆ ಸ್ಟ್ರೆಸ್‌ ಬಸ್ಟರ್‌ ಕೂಡ ಹೌದು.

ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌

ಸಾದ್‌ ಖಾನ್‌ ನಿರ್ದೇಶನದ ಹಂಬಲ್‌ ಪೊಲಿಟಿಷಿಯ್ನ್‌ ನಾಗರಾಜ್‌ ಸಿನಿಮಾವನ್ನೂ ಸ್ಟ್ರೆಸ್‌ ಬಸ್ಟರ್‌ ಸಿನಿಮಾಗಳ ಪಟ್ಟಿಗೆ ಸೇರಿಸಬಹುದು. ಡ್ಯಾನಿಶ್‌ ಸೇಟ್‌ ಅವರು ಈ ಚಿತ್ರದಲ್ಲಿ ರಾಜಕಾರಣಿಯಾಗಿ ನಮ್ಮನ್ನು ನಕ್ಕು ನಗಿಸುತ್ತಾರೆ. ಇದನ್ನು ಓದಿ: ನಾನು ಹರೆಯದಲ್ಲಿದ್ದಾಗ ಹೊಸ ನಗರದಲ್ಲಿ ತುಂಬಾ ಕಷ್ಟಪಟ್ಟಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ದೀಪಿಕಾ ಪಡುಕೋಣೆ

ರಾಮಾ ರಾಮಾ ರೇ

ರಾಮಾ ರಾಮಾ ರೇ ಎಂಬ 2016ರ ಚಿತ್ರವೂ ಮನಸ್ಸಿಗೆ ಮುದ ನೀಡುವಂತಹ ಸಿನಿಮಾ. ಈ ಚಿತ್ರದಲ್ಲಿ ಕಾಮಿಡಿಗಿಂತ ಭಾವನಾತ್ಮಕ ಸನ್ನಿವೇಶಗಳು ಸಾಕಷ್ಟು ಇವೆ. ಈ ಚಿತ್ರದ ಹಾಡುಗಳು, ಸಂಗೀತ ಕಾಡುವಂತೆ ಇದೆ.

ಮುಂಗಾರು ಮಳೆ

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ನಿಜಕ್ಕೂ ಮನಸ್ಸಿಗೆ ಖುಷಿ ನೀಡುವಂತಹ, ಮೂವಿ ಥೆರಪಿಗೆ ಸೂಕ್ತವಾಗುವಂತಹ ಸಿನಿಮಾ. ಆ ಚಿತ್ರದಲ್ಲಿ ಗಣೇಶ್‌ ಮಾತುಗಳು, ಹಾಸ್ಯ, ಭಾವನಾತ್ಮಕತೆ ನಮ್ಮ ಮನಸ್ಸಿಗೆ ಹೊಸ ಅನುಭವ ನೀಡುತ್ತದೆ.

ಕೆಂಡ ಸಂಪಿಗೆ

ಮನಸ್ಸಿಗೆ ಥೆರಪಿಯಂತೆ ಕಾಡಿದ ಚಿತ್ರ ಕೆಂಡಸಂಪಿಗೆ. ಈ ಚಿತ್ರದಲ್ಲಿ ಖುಷಿ, ನೋವು, ನಲಿವು ಎಲ್ಲವೂ ಇದ್ದು, ಪ್ರೇಕ್ಷಕರಿಗೆ ಹಿತಾನುಭವ ನೀಡಿದ್ದು ಸುಳ್ಳಲ್ಲ. ಇದನ್ನು ಓದಿದ್ದಿರಾ?: ಕಾಂತಾರ ಪ್ರಿಕ್ವೇಲ್‌ನಲ್ಲಿ ರಿಷಬ್‌ ಶೆಟ್ಟಿ ಗಡ್ಡದಾರಿ; ಪಂಜುರ್ಲಿ ದೈವ ರಾಜನ ಮಡಿಲಿಗೆ ಬಿದ್ದ ಬಳಿಕದ ಕಥೆಯ ಊಹಾಪೋಹ

ಕಸ್ತೂರಿ ನಿವಾಸ

ಡಾ. ರಾಜ್‌ಕುಮಾರ್‌ ನಟನೆಯ ಬಹುತೇಕ ಚಿತ್ರಗಳು ಸ್ಟ್ರೆಸ್‌ ಬಸ್ಟರ್‌ಗಳು. ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ರೆ ಮನಸ್ಸಿಗೆ ಆನಂದ, ಉಲ್ಲಾಸ, ಸಂತೋಷ, ಭಾವನಾತ್ಮಕತೆ ಖಾತ್ರಿ. ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಹಲವು ಚಿತ್ರಗಳು ನಿಜಕ್ಕೂ ಮೂವಿ ಥೆರಪಿ ಕಾನ್ಸೆಪ್ಟ್‌ಗೆ ಸೂಕ್ತವಾಗಿವೆ.

ಸ.ಹಿ.ಪ್ರಾ. ಶಾಲೆ ಕಾಸರಗೋಡು

ರಿಷಬ್‌ ಶೆಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವೂ ಮನಸ್ಸಿಗೆ ಆನಂದ, ಸಡಗರ, ಭಾವನಾತ್ಮಕತೆ ಎಲ್ಲವನ್ನೂ ಉಂಟು ಮಾಡುವ ಶಕ್ತಿಯನ್ನು ಹೊಂದಿದೆ. ಇದನ್ನು ಓದಿ: ಸಪ್ತ ಸಾಗರದಾಚೆ ಎಲ್ಲೋ-2 ಬಿಡುಗಡೆ; ಟಿಕೆಟ್‌ ದರ ಇಷ್ಟೊಂದು ದುಬಾರಿಯಾ; ಸಿನಿಪ್ರೇಕ್ಷಕರಿಂದ ಟಿಕೆಟ್‌ ಖರೀದಿಗೆ ಹೆಚ್ಚಿದ ಧಾವಂತ

777 ಚಾರ್ಲಿ

ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿಯೂ ಸ್ಟ್ರೆಸ್‌ ಬಸ್ಟರ್‌ ಸಿನಿಮಾವಾಗಿದೆ. ನಾಯಿಯೊಂದಿಗಿನ ಒಡನಾಟ, ಪ್ರೀತಿ ಹೃದಯವನ್ನು ತಟ್ಟುತ್ತದೆ. ಇವು ಉದಾಹರಣೆಯಾಗಿ ನೀಡಿರುವ ಹತ್ತು ಮೂವಿ ಥೆರಪಿ ಸಿನಿಮಾಗಳು. ನಿಮ್ಮ ಪಾಲಿಗೆ ಇನ್ನೂ ಹಲವು ಸಿನಿಮಾಗಳು ಸ್ಟ್ರೆಸ್‌ ಬಸ್ಟರ್‌ ಸಿನಿಮಾಗಳಂತೆ ಕಾಣಿಸಬಹುದು.