Friday Release: ಈ ಶುಕ್ರವಾರ ಕನ್ನಡದ 4 ಸೇರಿದಂತೆ 13 ಸಿನಿಮಾಗಳು ಬಿಡುಗಡೆ; ಕ್ರೀಂನಿಂದ ಆಪರೇಷನ್ ವ್ಯಾಲೆಂಟಿನ್‌ವರೆಗೆ ಇಲ್ಲಿದೆ ವಿವರ
Movies Release March 1, 2024: ಈ ಶುಕ್ರವಾರ ಹಲವು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಾಯಳಂ ಸಿನಿಮಾಗಳು ಬಿಡುಗಡೆಯಾಗಲಿವೆ, ಕನ್ನಡದಲ್ಲಿ ಕ್ರೀಂ, ಪುರುಷೋತ್ತಮನ ಪ್ರಸಂಗ, ನಮೋ ಭಾರತ್ ಮುಂತಾದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

ಬೆಂಗಳೂರು: ಈ ವಾರಾಂತ್ಯದಲ್ಲಿ ಸಿನಿಮಾ ಥಿಯೇಟರ್‌ಗೆ ಹೋಗಿ ನೋಡಲು ಯಾವುದಾದರೂ ಒಳ್ಳೆಯ ಸಿನಿಮಾವಿದೆಯೇ ಎಂದು ಕಾಯುತ್ತಿರುವವರಿಗೆ ನಿರಾಶೆಯಾಗದು. ಈ ವಾರ ಕನ್ನಡದಲ್ಲಿ ಕನ್ನಡದಲ್ಲಿ ಕ್ರೀಂ, ಪುರುಷೋತ್ತಮನ ಪ್ರಸಂಗ, ನಮೋ ಭಾರತ್ ಮತ್ತು ಜುಗಲ್‌ಬಂದಿ ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗಲಿವೆ. ಆಪರೇಷನ್ ವ್ಯಾಲೆಂಟಿನ್ ಇತ್ಯಾದಿ ಹಲವು ಸಿನಿಮಾಗಳು ಭಾರತದ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಈ ಶುಕ್ರವಾರ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ಕ್ರೀಂ
ಸಂಯುಕ್ತ ಹೆಗಡೆ ನಟನೆಯ ಕ್ರೀಂ ಚಿತ್ರ ಈ ಶುಕ್ರವಾರ ಮಾರ್ಚ್ 1ರಂದು ಬಿಡುಗಡೆಯಾಗಲಿದೆ. "ಕಿರಿಕ್ ಪಾರ್ಟಿ" ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಸಂಯುಕ್ತ ಹೆಗಡೆ ಪ್ರಮುಖಪಾತ್ರದಲ್ಲಿ ನಟಿಸಿರುವ "ಕ್ರೀಂ" ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ. ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಕ್ರಿಂ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಅರುಣ್ ಸಾಗರ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪುರುಷೋತ್ತಮನ ಪ್ರಸಂಗ
ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವಿ ರವಿಕುಮಾರ್ ನಿರ್ಮಾಣದ ಪುರುಷೋತ್ತಮನ ಪ್ರಸಂಗ ಈ ಶುಕ್ರವಾರ ಬಿಡುಗಡೆಯಾಗಲಿದೆ. ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಜಯ್ ಪೃಥ್ವಿ ನಾಯಕಾಗಿ, ರಿಷಿಕಾ ನಾಯ್ಕ, ದೀಪಿಕಾ ದಿನೇಶ್ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಶೋಭರಾಜ್, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಸಾಯಿಕೃಷ್ಣ ಕುಡ್ಲ ಮುಂತಾದವರಿದ್ದಾರೆ.
ನಮೋ ಭಾರತ್
ಮೇಶ್ ಎಸ್. ಪರವಿನಾಯ್ಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಿರ್ಮಿಸಿರುವ ನಮೋ ಭಾರತ್ ಸಿನಿಮಾ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಇವರೇ ನಾಯಕ.
ಜುಗಲ್‌ಬಂದಿ
ನಿರ್ದೇಶಕ ದಿವಾಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಜುಗಲ್‌ಬಂದಿ ಸಿನಿಮಾವು ಮಾರ್ಚ್ 1ರಂದು ಬಿಡುಗಡೆ ಆಗಲಿದೆ. ಕಾಂತಾರ ಸಿನಿಮಾದಲ್ಲಿ ಅಮ್ಮನ ಪಾತ್ರ ಮಾಡಿದ್ದ ಮಾನಸಿ ಸುಧೀರ್ ಜುಗಲ್‌ಬಂದಿ ಸಿನಿಮಾದಲ್ಲಿಯೂ ತಾಯಿ ಪಾತ್ರ ಮಾಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ 'ಜುಗಲ್ ಬಂದಿ' ಸಿನಿಮಾದಲ್ಲಿ ನಟಿಸಿದ್ದಾರೆ.
ಈ ವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು
- ಆಪರೇಷನ್ ವ್ಯಾಲೆಂಟಿನ್: ವರುಣ್ ತೇಜ್, ಮಾನುಷಿ ಚಿಲ್ಲರ್ ನಟಿಸಿದ ಬಹುನಿರೀಕ್ಷಿತ ಸಿನಿಮಾವಿದು.
- ಚಾರಿ 111: ವೆನೆಲಾ ಕಿಶೋರ್, ಮುರಳಿ ಶರ್ಮಾ, ಸಂಯಯಕ್ತ ವಿಶ್ವನಾಥನ್ ನಟಿಸಿದ ಸಿನಿಮಾ.
ಶುಕ್ರವಾರ ಬಿಡುಗಡೆಯಾಗುವ ತಮಿಳು ಸಿನಿಮಾಗಳು
ಪೊರ್ (ಪಿಒಆರ್): ಅರ್ಜುನ್ ದಾಸ್, ಕಾಲಿದಾಸ್ ಜಯರಾಮ್, ಸಂಚನ ನಟರಾಜನ್ ನಟನೆಯ ಸಿನಿಮಾ.
ಜೊಶುವಾ: ಇಮೈ ಪೊಲ್ ಕಾಖಾ
ಹಿಂದಿ ಸಿನಿಮಾಗಳು
- ಡ್ಯೂನ್: ಪಾರ್ಟ್ 2
- ಆಪರೇಷನ್ ವ್ಯಾಲೆಂಟಿನ್: ವರುಣ್ ತೇಜ್, ಮಾನುಷಿ ಚಿಲ್ಲರ್ ನಟಿಸಿದ ಈ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ.
- ಲಾಪಟಾ ಲೇಡಿಸ್
- ದಂಗೆ (Dange)
- ಕಾಜಝ್ 2: ಅನುಮಪ್ ಖೇರ್ ನಟನೆಯ ಸಿನಿಮಾ.
