Dr Rajkumar Birthday: ಅಣ್ಣಾವ್ರ ಬರ್ತ್‌ಡೇ ನಿಮಿತ್ತ ಇಂದು ಮೈ ನೇಮ್‌ ಇಸ್‌ ರಾಜ್‌ ವಿಶೇಷ ಗೀತ ನಮನ ಕಾರ್ಯಕ್ರಮ-sandalwood news my name is raj special tribute from atreya team on the occasion of dr rajkumars birthday mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Birthday: ಅಣ್ಣಾವ್ರ ಬರ್ತ್‌ಡೇ ನಿಮಿತ್ತ ಇಂದು ಮೈ ನೇಮ್‌ ಇಸ್‌ ರಾಜ್‌ ವಿಶೇಷ ಗೀತ ನಮನ ಕಾರ್ಯಕ್ರಮ

Dr Rajkumar Birthday: ಅಣ್ಣಾವ್ರ ಬರ್ತ್‌ಡೇ ನಿಮಿತ್ತ ಇಂದು ಮೈ ನೇಮ್‌ ಇಸ್‌ ರಾಜ್‌ ವಿಶೇಷ ಗೀತ ನಮನ ಕಾರ್ಯಕ್ರಮ

ಡಾ. ರಾಜ್‌ಕುಮಾರ್‌ 95ನೇ ಜಯಂತ್ಯೋತ್ಸವದ ಪ್ರಯುಕ್ತ ಟೀಮ್‌ ಅತ್ರೇಯ ತಂಡದಿಂದ ವಿಶೇಷ ಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈ ನೇಮ್‌ ಇಸ್‌ ರಾಜ್‌ ಹೆಸರಿನಲ್ಲಿ ಅಣ್ಣಾವ್ರ ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

Dr Rajkumar Birthday: ಅಣ್ಣಾವ್ರ ಬರ್ತ್‌ಡೇ ನಿಮಿತ್ತ ಇಂದು ಮೈ ನೇಮ್‌ ಇಸ್‌ ರಾಜ್‌ ವಿಶೇಷ ಗೀತ ನಮನ ಕಾರ್ಯಕ್ರಮ
Dr Rajkumar Birthday: ಅಣ್ಣಾವ್ರ ಬರ್ತ್‌ಡೇ ನಿಮಿತ್ತ ಇಂದು ಮೈ ನೇಮ್‌ ಇಸ್‌ ರಾಜ್‌ ವಿಶೇಷ ಗೀತ ನಮನ ಕಾರ್ಯಕ್ರಮ

My Name is Raj: ಇಂದು (ಏ 24) ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ 95 ನೇ ಹುಟ್ಟುಹಬ್ಬ. ಈ ನಿಮಿತ್ತ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ ವೇಳೆಗೆ ಮೈ ನೇಮ್ ಇಸ್ ರಾಜ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ಮತ್ತು ಟೀಮ್ ಆತ್ರೇಯ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ರಾಜ್ ಗೀತ ನಮನ ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ಡಾ. ರಾಜ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.

"ನಾನು ಹಾಗೂ ನನ್ನ ಕುಟುಂಬದವರು ಡಾ. ರಾಜಕುಮಾರ್ ಅವರ ಅಭಿಮಾನಿಗಳು. ಅವರ ಜನ್ಮದಿನದಂದೇ ಏನಾದರೂ ಸಮಾರಂಭ ಆಯೋಜಿಸಬೇಕೆಂದು ಟೀಮ್ ಆತ್ರೇಯ ತಂಡದ ಜತೆಗೆ ಪ್ರತಿ ವರ್ಷ ಮೈ ನೇಮ್ ಇಸ್ ರಾಜ್ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತ ಬರುತ್ತಿದ್ದೇವೆ. ಇದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಈ ಬಾರಿ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಜೊತೆಯಾಗಿದೆ. ಏಪ್ರಿಲ್ 24 ರ ಸಂಜೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ "ಮೈ ನೇಮ್ ಇಸ್ ರಾಜ್" ಕಾರ್ಯಕ್ರಮ ನಡೆಯಲಿದೆ. "ಸರಿಗಮಪ" ಖ್ಯಾತಿಯ ಚನ್ನಪ್ಪ ಹುದ್ದರ್ , ಪೃಥ್ವಿ ಭಟ್, ಮೈತ್ರಿ ಅಯ್ಯರ್ ಸೇರಿದಂತೆ ಹೆಸರಾಂತ ಗಾಯಕರು ಅಂದು ಹಾಡಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹತ್ತಾರು ವಾದ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿರುತ್ತಾರೆ. ಡಾ. ರಾಜಕುಮಾರ್ ಸಿನಿಮಾ, ಧ್ವನಿಸುರುಳಿ ಸೇರಿದಂತೆ 5000ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಡಾ. ರಾಜ್, ಕೇವಲ ಹಾಡುಗಾರರಷ್ಟೇ ಆಗಿರಲಿಲ್ಲ. ಕೆಲವು ವಾದ್ಯಗಳನ್ನು ನುಡಿಸುತ್ತಿದ್ದರು. ಅವರು ನಟನಷ್ಟೇ ಅಲ್ಲ ಸರಸ್ವತಿ ಪುತ್ರರೂ ಹೌದು. ಅವರು ಹಾಡಿರುವ ಮಾಣಿಕ್ಯ ವೀಣಾ, ಮೇಘ ಬಂತು ಮೇಘ, ನಾದಮಯ ಮುಂತಾದ ಹಾಡುಗಳೇ ಸಾಕ್ಷಿ. ಈ ಸಲ ಡಾ ರಾಜ್ ಗೀತ ನಮನ ಹೆಸರಲ್ಲಿ ಅಣ್ಣಾವ್ರು ಹಾಡಿರುವ ಹಾಡುಗಳನ್ನು ಪ್ರಸ್ತುತ ಪಡಿಸುತ್ತ, ವರನಟನಲ್ಲಿನ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಗೌರವಿಸಿ, ಈ ವಿಶೇಷ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸುತಿದ್ದೇವೆ ಎಂದರು ಟೀಮ್ ಆತ್ರೇಯ ಪರವಾಗಿ ಮನೋಜವಂ ಆತ್ರೇಯ ತಿಳಿಸಿದರು.

ಸ್ವಾಮಿ ವಿವೇಕಾನಂದ ಟ್ರಸ್ಟ್ ನ ಪಾಟೀಲ್ ಮಾತನಾಡಿ, ನಾನೂ ಸಹ ಪ್ರತಿ ವರ್ಷ ಮೈ ನೇಮ್ ಇಸ್ ರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ. ಈ ಸಲವೂ ಮನೋಜವಂ ಅವರ ಜತೆಯಲ್ಲಿದ್ದೇವೆ. ಡಾ. ರಾಜ್ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಸಾಕಷ್ಟು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಟಿಕೇಟ್‌ಗಳು ಬುಕ್ ಮೈ ಶೋ ನಲ್ಲಿ ಲಭ್ಯವಿದೆ. ನಮ್ಮ ಸಮಾರಂಭಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ಟೀಂ ಆತ್ರೇಯ ತಂಡದ ಶರಣ್, ವೇದಾಂತ್ ನರಸಿಂಹ, ಮನೋಜ್ ಹೊಸಮನಿ, ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

mysore-dasara_Entry_Point