Hamsalekha: ಬುಲ್‌ಶಿಟ್‌ ಪದ ಪ್ರಯೋಗ, ಪತ್ರದ ಮೂಲಕ ಈ ಸಮುದಾಯದ ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ
ಕನ್ನಡ ಸುದ್ದಿ  /  ಮನರಂಜನೆ  /  Hamsalekha: ಬುಲ್‌ಶಿಟ್‌ ಪದ ಪ್ರಯೋಗ, ಪತ್ರದ ಮೂಲಕ ಈ ಸಮುದಾಯದ ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ

Hamsalekha: ಬುಲ್‌ಶಿಟ್‌ ಪದ ಪ್ರಯೋಗ, ಪತ್ರದ ಮೂಲಕ ಈ ಸಮುದಾಯದ ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ

ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಜೈನ ಸಮುದಾಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಬುಲ್‌ಶಿಟ್‌ ಪದ ಪ್ರಯೋಗ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅದು ವಿವಾದದ ಕಿಡಿ ಹೊತ್ತಿಸುತ್ತಿದ್ದಂತೆ, ಪತ್ರದ ಮೂಲಕ ಕ್ಷಮೆ ಕೇಳಿದ್ದಾರೆ ನಾದಬ್ರಹ್ಮ ಹಂಸಲೇಖ.

Hamsalekha: ಬುಲ್‌ಶಿಟ್‌ ಪದ ಪ್ರಯೋಗ, ಪತ್ರದ ಮೂಲಕ ಈ ಸಮುದಾಯದ ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ
Hamsalekha: ಬುಲ್‌ಶಿಟ್‌ ಪದ ಪ್ರಯೋಗ, ಪತ್ರದ ಮೂಲಕ ಈ ಸಮುದಾಯದ ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ

Hamsalekha derogatory statement: ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ತಮ್ಮ ಹಾಡುಗಳಿಂದಲೇ ನಾಡಿನ ಜನಮನದಲ್ಲಿ ಇಂದಿಗೂ ಸ್ಥಾನ ಉಳಿಸಿಕೊಂಡಿದ್ದಾರೆ. ಸಂಗೀತದ ಜತೆಗೆ ಅವರ ಸಾಹಿತ್ಯಕ್ಕೂ ಮನಸೋಲದವರಿಲ್ಲ. ಕನ್ನಡ ಸಿನಿಮಾ ಸಂಗೀತ ಕ್ಷೇತ್ರದ ಈ ದಿಗ್ಗಜ ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗುವುದುಂಟು. ಇದೀಗ ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಜೈನ ಸಮುದಾಯದ ಬಗ್ಗೆ ಬುಲ್‌ಶಿಟ್‌ ಪದ ಪ್ರಯೋಗ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅದು ವಿವಾದದ ಕಿಡಿ ಹೊತ್ತಿಸುತ್ತಿದ್ದಂತೆ, ಕ್ಷಮೆ ಕೇಳಿದ್ದಾರೆ ಹಂಸಲೇಖ.

ವಿಡಿಯೋ ಮೂಲಕ ಕ್ಷಮೆಯಾಚನೆ..

ಮಹಾನೀಯರೇ.. ದಯಮಾಡಿ ಕ್ಷಮಿಸಿ.. ದಯಮಾಡಿ ಕ್ಷಮಿಸಿ.. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಅಂತ ಯೋಚನೆ ಮಾಡಿದವನಲ್ಲ. ಮತ್ತೆ ಆ ಪದವನ್ನ ಬಳಸಬೇಕು ಅಂದುಕೊಳ್ಳಲಿಲ್ಲ. ಅಲ್ಲಿ ವಾತಾವರಣದಲ್ಲಿ ತುಂಬಾ ಒತ್ತಡಗಳಿಂದ, ನನ್ನನ್ನ ಎಳೆದಾಡುತ್ತಿದ್ದರು. ನಾನೇನೋ ಗದರಲು ಹೋಗಿ.. ಆಮೇಲೆ ಈ ಕಡೆ ಬಂದೆ. ಹಾಗಾಗಿ ಆ ಮಾತು ಅಲ್ಲಿ ಬಂದಿದ್ದು ತಪ್ಪಾಯ್ತು. ದಯವಿಟ್ಟು ಇನ್ಯಾವತ್ತೂ ಆ ರೀತಿಯ ತಪ್ಪುಗಳನ್ನ ಮಾಡೋದಿಲ್ಲ"

"ಆಮೇಲೆ ನಾನು ಪಂಪನ ದಾಸಾನುದಾಸ. ಕನ್ನಡವನ್ನ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿರೋನು ನಾನು. ಆದ್ದರಿಂದ ದಯಮಾಡಿ ಇದನ್ನ ಬೆಳೆಸಬೇಡಿ. ಇನ್ಯಾವ ರೀತಿ ಕ್ಷಮೆ ಕೇಳಬೇಕು. ನಾನು ಹೇಳಬೇಕಾಗಿದ್ದನ್ನ ಪತ್ರದ ಮುಖಾಂತರವೂ ಕ್ಷಮೆ ಕೇಳಿದ್ದೇನೆ. ದಯವಿಟ್ಟು ಈ ವಿಷಯವನ್ನ ಇಲ್ಲಿಗೆ ಮುಕ್ತಾಯ ಮಾಡಿ, ನಮಸ್ಕಾರ" ಎಂದು ವಿಡಿಯೋ ಮೂಲಕವೂ ಕ್ಷಮೆ ಕೋರಿ ಪತ್ರವೊಂದರ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪತ್ರದಲ್ಲಿ ಹಂಸಲೇಖ ಹೇಳಿದ್ದೇನು?

“ಕ್ಷಮೆಯಿರಲಿ.. ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ ಮತ್ತು ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸಮುದಾಯಕ್ಕೆ ಶಿರಬಾಗಿ ಕ್ಷಮೆ ಕೋರುತ್ತೇನೆ”

"ಪ್ರಿಯ ಮಾಧ್ಯಮಗಳೇ, ದಯಮಾಡಿ. ನಾನು ದುಡುಕಿ ಮಾತಾಡಿದ ಆ "BULLSHIT" ಪದವನ್ನು DELETE ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ. ಆ 'ಮಾತು' ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ."

ಸಿಟ್ಟು ಒಂದು ಬುಲ್ಶಿಟ್ಟು

"ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ. channel ನವರು Individual byte ಗಳಿಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರಬಂದೆ. ನನ್ನ ಸಹಾಯಕ, ನನ್ನನ್ನ ಹೊಗಳಿದ - ‘ಸಿಟ್ಟು ತಡೆಯಲಾಗಲಿಲ್ಲ ಆದರೂ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್" - ಎಂದ. ಆಗ ನಾನು ಆತನಿಗೆ "ಸಿಟ್ಟು, ಹೋಗಿ ಬರೋ ಬುಲೆಟ್ಟು " ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು ಸಿಟ್ಟು ಒಂದು ಬುಲ್ಶಿಟ್ಟು" ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಟ್ಟು ಕ್ಷಮಿಸಿ" ಎಂದಿದ್ದಾರೆ.

Whats_app_banner