ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣನ ಆಗಮನ ಫಿಕ್ಸ್‌-sandalwood news narthan directs shiva rajkumar starrer bhairathi ranagal movie title track released mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣನ ಆಗಮನ ಫಿಕ್ಸ್‌

ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣನ ಆಗಮನ ಫಿಕ್ಸ್‌

ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ ಆಗಸ್ಟ್‌ 10ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಇತಿಹಾಸವೇ ನಿಬ್ಬೆರಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು.. ಎಂಬ ಕಥಾನಾಯಕನನ್ನು ಗುಣಗಾನ ಮಾಡುವ ಸಾಲುಗಳಿವೆ.

ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣ
ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣ

Bhairathi Ranagal Title Track: ಶಿವರಾಜ್‌ಕುಮಾರ್‌ ಮತ್ತು ನರ್ತನ್‌ ಕಾಂಬಿನೇಷನ್‌ನ ಎರಡನೇ ಸಿನಿಮಾ ಭೈರತಿ ರಣಗಲ್‌ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಮಫ್ತಿ ಸಿನಿಮಾದ ಪ್ರೀಕ್ವೆಲ್‌ ಎಂಬ ಕಾರಣಕ್ಕೆ ಮತ್ತು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂಬ ಕಾರಣಕ್ಕೂ ಕುತೂಹಲ ಕೆರಳಿಸಿದೆ. ಇತ್ತೀಗಷ್ಟೇ ಶಿವಣ್ಣ ಬರ್ತ್‌ಡೇ ಪ್ರಯುಕ್ತ ಬಿಡುಗಡೆಯಾದ ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿತ್ತು. ಇದೀಗ ಬಿಡುಗಡೆ ಸನಿಹ ಬರ್ತಿದ್ದಂತೆ, ಶೀರ್ಷಿಕೆ ಗೀತೆಯ ಮೂಲಕ ಆಗಮಿಸಿದ್ದಾನೆ ಭೈರತಿ ರಣಗಲ್.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ ಆಗಸ್ಟ್‌ 10ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಇತಿಹಾಸವೇ ನಿಬ್ಬೆರಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು.. ಎಂಬ ಕಥಾನಾಯಕನನ್ನು ಗುಣಗಾನ ಮಾಡುವ ಸಾಲುಗಳಿವೆ. ಸಂತೋಷ್‌ ವೆಂಕಿ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಕಿನ್ನಾಳ್ ರಾಜ್ ಬರೆದಿರುವ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಸ್ರೂರ್‌ ಅವರ ಸಂಗೀತ, ಈ ಹಾಡನ್ನು ಮತ್ತೊಂದು ಹಂತಕ್ಕೆ ಮೇಲೊಯ್ದಿದೆ.

ಇನ್ನು ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್‌ನಲ್ಲಿ ಬಂದಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಭೈರತಿ ರಣಗಲ್ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದೆ.

ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ‌ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ಭೈರತಿ ರಣಗಲ್ ಚಿತ್ರಕ್ಕಿದೆ.