ಮೆಕ್ಸಿಕೋ ಸಿನಿಮೋತ್ಸವದಲ್ಲಿ ಸದ್ದು ಮಾಡಲಿದೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ‘ಡೊಳ್ಳು’ ಸಿನಿಮಾ-sandalwood news national award winning film dollu at the mexico film festival starring bbk 10 winner karthik mahesh mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮೆಕ್ಸಿಕೋ ಸಿನಿಮೋತ್ಸವದಲ್ಲಿ ಸದ್ದು ಮಾಡಲಿದೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ‘ಡೊಳ್ಳು’ ಸಿನಿಮಾ

ಮೆಕ್ಸಿಕೋ ಸಿನಿಮೋತ್ಸವದಲ್ಲಿ ಸದ್ದು ಮಾಡಲಿದೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ‘ಡೊಳ್ಳು’ ಸಿನಿಮಾ

ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ಡೊಳ್ಳು ಸಿನಿಮಾ ಈಗಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಒಟಿಟಿಯಲ್ಲೂ ಪ್ರಸಾರ ಕಂಡಿದೆ. ಈಗ ಇದೇ ಸಿನಿಮಾ ಮೆಕ್ಸಿಕೋ ಸಿನಿಮೋತ್ಸವಕ್ಕೂ ಲಗ್ಗೆ ಇಟ್ಟಿದೆ. ಪವನ್‌ ಒಡೆಯರ್‌ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಾಗರ್‌ ಪುರಾಣಿಕ್‌ ನಿರ್ದೇಶನ ಮಾಡಿದ್ದಾರೆ.

ಮೆಕ್ಸಿಕೋ ಸಿನಿಮೋತ್ಸವದಲ್ಲಿ ಸದ್ದು ಮಾಡಲಿದೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ‘ಡೊಳ್ಳು’ ಸಿನಿಮಾ
ಮೆಕ್ಸಿಕೋ ಸಿನಿಮೋತ್ಸವದಲ್ಲಿ ಸದ್ದು ಮಾಡಲಿದೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ನಟನೆಯ ‘ಡೊಳ್ಳು’ ಸಿನಿಮಾ

Karthik Mahesh: ರಾಷ್ಟ್ರಪ್ರಶಸ್ತಿ ಸೇರಿ ಸಾಕಷ್ಟು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಇದೀಗ, ಮತ್ತೊಂದು ಸಿನಿಮೋತ್ಸವದತ್ತ ಮುಖ ಮಾಡಿದೆ. ಪವನ್‌ ಒಡೆಯರ್‌ ನಿರ್ಮಾಣ ಮಾಡಿರುವ ಡೊಳ್ಳು ಚಿತ್ರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರ ಚಿತ್ರಮಂದಿರದಲ್ಲಿ ತೆರೆಕಂಡು, ಒಟಿಟಿಯಲ್ಲೂ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಇದೇ ಚಿತ್ರ ಮತ್ತೆ ಸುದ್ದಿಯ ಜತೆಗೆ ಆಗಮಿಸಿದೆ. ಅಂದರೆ, ಮೆಕ್ಸಿಕೋ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ 'ಡೊಳ್ಳು' ಈಗಾಗಲೇ ಪ್ರಪಂಚ ಪರ್ಯಟನೆ ಮಾಡಿ ಬಂದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ. ಇದೀಗ ಈ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ.

ಡೊಳ್ಳು ಚಿತ್ರ ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಆಸ್ಕರ್ ಗೆದ್ದಿರುವ ರಾಜಮೌಳಿ ನಿರ್ದೇಶನದ RRR, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತಾನಾಜಿ ಚಿತ್ರಗಳ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಡೊಳ್ಳು ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಖುಷಿ ಜೊತೆಗೆ ಹೆಮ್ಮೆಯ ವಿಷಯ ಎಂಬುದು ಚಿತ್ರತಂಡದ ಮಾತು.

‘ಡೊಳ್ಳು’ ಸಿನಿಮಾ ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತಮುತ್ತ ಹಾಗೂ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿ ಇರಿಸಿ ಹೆಣೆದ ಕಥೆ. ಸಾಗರ್ ಪುರಾಣಿಕ್ ನಿರ್ದೇಶನ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್‌ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com/entertainment

mysore-dasara_Entry_Point