ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಪಾಪಕರ್ಮ ಅವನ ಸುಡುತ್ತದೆ ಎಂದ ಜಗ್ಗೇಶ್‌; ಈ ಸಲ ದರ್ಶನ್‌ನ ಬಿಡಿಸಲು ಹೋಗಬೇಡಿ ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಪಾಪಕರ್ಮ ಅವನ ಸುಡುತ್ತದೆ ಎಂದ ಜಗ್ಗೇಶ್‌; ಈ ಸಲ ದರ್ಶನ್‌ನ ಬಿಡಿಸಲು ಹೋಗಬೇಡಿ ಅಂದ್ರು ಫ್ಯಾನ್ಸ್‌

ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಪಾಪಕರ್ಮ ಅವನ ಸುಡುತ್ತದೆ ಎಂದ ಜಗ್ಗೇಶ್‌; ಈ ಸಲ ದರ್ಶನ್‌ನ ಬಿಡಿಸಲು ಹೋಗಬೇಡಿ ಅಂದ್ರು ಫ್ಯಾನ್ಸ್‌

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಪಟ್ಟಂತೆ ನಟ ದರ್ಶನ್‌ ಅವರನ್ನು ಗಮನದಲ್ಲಿಟ್ಟುಕೊಂಡು ಕನ್ನಡದ ನವರಸ ನಾಯಕ ಜಗ್ಗೇಶ್‌ ಎಕ್ಸ್‌ನಲ್ಲಿ ಮಾರ್ಮಿಕ ಪೋಸ್ಟ್‌ ಟ್ವೀಟ್‌ ಮಾಡಿದ್ದಾರೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನ ಸುಡುತ್ತದೆ ಎಂದು ಅವರು ಹೇಳಿದ್ದಾರೆ.

ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಪಾಪಕರ್ಮ ಅವನ ಸುಡುತ್ತದೆ ಎಂದ ಜಗ್ಗೇಶ್‌
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ, ಪಾಪಕರ್ಮ ಅವನ ಸುಡುತ್ತದೆ ಎಂದ ಜಗ್ಗೇಶ್‌

ಬೆಂಗಳೂರು: ದರ್ಶನ್‌ ಬಂಧನದ ಸಮಯದಲ್ಲಿ (Renuka Swamy Chitradurga Murder Case ) ನವರಸ ನಾಯಕ ಕನ್ನಡ ನಟ ಜಗ್ಗೇಶ್‌ (Kannada Actor Jaggesh) ಮಾರ್ಮಿಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸರ್ವಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ, ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!, ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನ ಸುಡುತ್ತದೆ!, ಕಲಿಯುಗದಲ್ಲಿ ದೇವರು ಕಲ್ಲಲ್ಲಾ, ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು!, ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಎಂದು ಜಗ್ಗೇಶ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್‌ ಪರಿಸ್ಥಿತಿಯನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಜಗ್ಗೇಶ್‌- ದರ್ಶನ್‌ ಫ್ಯಾನ್ಸ್‌ ವಾರ್‌

ಕೆಲವು ತಿಂಗಳುಗಳ ಹಿಂದೆ ದರ್ಶನ್‌ ಮತ್ತು ಜಗ್ಗೇಶ್‌ ಅಭಿಮಾನಿಗಳ ನಡುವೆ ಫ್ಯಾನ್ಸ್‌ ವಾರ್‌ ನಡೆದಿತ್ತು. ದರ್ಶನ್‌ ಅಭಿಮಾನಿಗಳು ಜಗ್ಗೇಶ್‌ರನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದರು. ದರ್ಶನ್‌ ಬಗ್ಗೆ ಜಗ್ಗೇಶ್‌ ಹಗುರವಾಗಿ ಮಾತನಾಡಿದ್ದಾರೆ ಎಂದು ಆಡಿಯೋ ಕ್ಲಿಪ್‌ ಆಧರಿಸಿ ಫ್ಯಾನ್ಸ್‌ ಜಗ್ಗೇಶ್‌ ಮೇಲೆ ಮುಗಿಬಿದ್ದಿದ್ದರು. ಜಗ್ಗೇಶ್‌ ತೋತಾಪುರಿ ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ ಶೂಟಿಂಗ್‌ ಸೆಟ್‌ಗೆ ದರ್ಶನ್‌ ಫ್ಯಾನ್ಸ್‌ ಅಟ್ಯಾಕ್‌ ಮಾಡಿದ್ದರು. ದರ್ಶನ್‌ ಕುರಿತು ನೀಡಿರುವ ಹೇಳಿಕೆ ಬಗ್ಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ಸ್ವತಃ ದರ್ಶನ್‌ ತನ್ನ ಅಭಿಮಾನಿಗಳ ಪರವಾಗಿ ಜಗ್ಗೇಶ್‌ ಬಳಿ ಕ್ಷಮೆ ಕೇಳಿದ್ದರು. ಈ ಘಟನೆಯಿಂದ ಜಗ್ಗೇಶ್‌ ಸಾಕಷ್ಟ ನೊಂದಿದ್ದರು.

ಜಗ್ಗೇಶ್‌ ಟ್ವೀಟ್‌ ಸಾರ

ಸರ್ವಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ, ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!, ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನ ಸುಡುತ್ತದೆ!, ಕಲಿಯುಗದಲ್ಲಿ ದೇವರು ಕಲ್ಲಲ್ಲಾ, ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು!, ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ. ಅಂದರೆ, ಎಲ್ಲರ ಆತ್ಮವೂ ಬ್ರಹ್ಮ ಸ್ವರೂಪಿಯಾಗಿದೆ. ಎಲ್ಲಾ ಜೀವಿಗಳಲ್ಲಿ, ಜೀವಗಳಲ್ಲಿ ದೇವರು ಇದ್ದಾನೆ. ಈ ದೇವರು ಇರುವ ಜೀವವನ್ನು ಕೊಲ್ಲುವಂತಹ ಹಕ್ಕು ಮನುಷ್ಯರಿಗೆ ಇಲ್ಲ. ಈ ರೀತಿ ಮಾಡಿದರೆ ನಾವು ಮಾಡುವ ಕರ್ಮ ನಮ್ಮನ್ನು ಹಿಂಬಾಲಿಸುತ್ತದೆ. ನಾವು ಮಾಡುವ ಪಾಪಕರ್ಮಗಳು ನಮ್ಮನ್ನು ಸುಡುತ್ತದೆ. ಈ ಕಲಿಯುಗದಲ್ಲಿ ದೇವರು ಕಲ್ಲಾಗಿ ಇದ್ದಾನೆ ಎಂದು ಭಾವಿಸಬೇಕಿಲ್ಲ. ಈಗ ಯಾವುದೇ ಕರ್ಮಕ್ಕೂ ತಕ್ಷಣ ಫಲಿತಾಂಶ ದೊರಕುತ್ತದೆ. ಸನಾತನ ಕೃತಿಯು (ಭಗವದ್ಗೀತೆಯು) ಮನುಷ್ಯರಿಗೆ ರಾಮನಂತೆ ಇರಲು ಸೂಚಿಸುತ್ತದೆ. ರಾವಣನಾಗಬಾರದು. ಮದ ಇದ್ದರೆ ಕಾರುಣ್ಯದ ಅರಿವು ಇರುವುದಿಲ್ಲ ಎಂದು ಜಗ್ಗೇಶ್‌ ಹೇಳಿದ್ದಾರೆ.

ಜಗ್ಗೇಶ್‌ ಅಭಿಮಾನಿಗಳ ಪ್ರತಿಕ್ರಿಯೆ

ಜಗ್ಗೇಶ್‌ ಟ್ವೀಟ್‌ಗೆ ಅಭಿಮಾನಿಗಳು ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ಅವನ fans ಬಂದು ನಿಮ್ಮನ್ನ attack ಮಾಡಿದ್ದು ಈಗಲೂ ನೆನಪಿದೆ ಸರ್. ಕರ್ಮ ಯಾರನ್ನೂ ಬಿಡುವುದಿಲ್ಲ" ಎಂದು ಒಬ್ಬರು ಹೇಳಿದ್ದಾರೆ. "ಸತ್ಯವಾದ ಮಾತು ಜಗಣ್ಣ , ನೊಂದವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆಯೇ ?, ಮಗನನ್ನು ಕಳೆದುಕೊಂಡ ತಾಯಿಯು ಕೂಗಿಗೆ ನ್ಯಾಯ ಸಿಗುತ್ತದೆಯೇ ?, ಸಪ್ತಪದಿ ತುಳಿದು ವಿವಾಹ ವಾದ ಆ ಮಡದಿ ಈಗ ತುಂಬು ಗರ್ಭಿಣಿ ಆಕೆಗೆ ಮತ್ತು ಆ ಶಿಶುವಿಗೆ ನ್ಯಾಯ ಸಿಗುತ್ತದೆಯೇ ?, ಹೇಳಿ ಅಣ್ಣ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಸತ್ಯವಾದ ಮಾತು" "ಈ ಸಲ ನೀವು ಬಿಡಿಸಲು ಹೋಗಬೇಡಿ" ಎಂದೆಲ್ಲ ಸಾಕಷ್ಟು ಜಗ್ಗೇಶ್‌ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

Whats_app_banner