ಕನ್ನಡ ಸುದ್ದಿ  /  ಮನರಂಜನೆ  /  ಕ್ಯಾನ್ಸರ್‌ ರೋಗಿಗಳಿಗಾಗಿ ನೀಳ ಕೇಶರಾಶಿಯನ್ನು ದಾನ ಮಾಡಿದ ನಟ ಪ್ರೇಮ್‌ ಪುತ್ರಿ ಅಮೃತಾ

ಕ್ಯಾನ್ಸರ್‌ ರೋಗಿಗಳಿಗಾಗಿ ನೀಳ ಕೇಶರಾಶಿಯನ್ನು ದಾನ ಮಾಡಿದ ನಟ ಪ್ರೇಮ್‌ ಪುತ್ರಿ ಅಮೃತಾ

ನನಗೆ ಉದ್ದ ತಲೆಗೂದಲು ಎಂದರೆ ಇಷ್ಟ. ಆದ್ದರಿಂದ ಒಮ್ಮೆಯೂ ಕತ್ತರಿಸಿರಲಿಲ್ಲ. ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಬೇಕೆಂದು ಮೊದಲಿನಿಂದಲೂ ಅಂದುಕೊಂಡಿದ್ದೆ, ಆದರೆ 'ಟಗರು ಪಲ್ಯ' ಸಿನಿಮಾದಲ್ಲಿ ಅವಕಾಶ ದೊರೆತ ಕಾರಣ ಕೂದಲು ಕತ್ತರಿಸಲು ಸಾಧ್ಯವಾಗಿರಲಿಲ್ಲ. ಈಗ ಅಂದುಕೊಂಡಿದ್ದನ್ನು ಮಾಡಿದ್ದೇನೆ.

ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಪ್ರೇಮ್‌ ಪುತ್ರಿ ಅಮೃತಾ
ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಪ್ರೇಮ್‌ ಪುತ್ರಿ ಅಮೃತಾ (PC: Amrutha Prem Instagram)

ನೆನಪಿರಲಿ ಪುತ್ರಿ ಪ್ರೇಮ್‌ ಪುತ್ರಿ ಅಮೃತಾ, 'ಟಗರು ಪಲ್ಯ' ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್‌ ಮುಗಿದಿದ್ದು ಸಿನಿಮಾ ಬಿಡುಗಡೆಗೆ ರೆಡಿ ಇದೆ. ಚಿತ್ರ ತಂಡ ಹಾಡುಗಳನ್ನು ರಿಲೀಸ್‌ ಮಾಡಿದ್ದು ಸಿನಿಮಾಭಿಮಾನಿಗಳು ಈ ಹಾಡಿಗೆ ರೀಲ್ಸ್‌ ಮಾಡಿ ಸಂಭ್ರಮಿಸುತ್ತಿದ್ಧಾರೆ.

ಕ್ಯಾನ್ಸರ್‌ ರೋಗಿಗಳಿಗೆ ತಲೆಗೂದಲು ದಾನ

ವಿದ್ಯಾಭ್ಯಾಸ ಹಾಗೂ ಸಿನಿಮಾ ಎರಡನ್ನೂ ನಿಭಾಯಿಸುತ್ತಿರುವ ಅಮೃತಾ ಪ್ರೇಮ್‌ ಇದೀಗ ಕ್ಯಾನ್ಸರ್‌ ರೋಗಿಗಳಿಗಾಗಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಒಮ್ಮೆಯೂ ಕತ್ತರಿಸದ ತಮ್ಮ ತಲೆಗೂದಲನ್ನು ಅಮೃತಾ ಈಗ ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಗಮನ ಸೆಳೆದಿದ್ದಾರೆ. ಅಮೃತಾ, ತಮ್ಮ ತಲೆಗೂದಲು ಕತ್ತರಿಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟ ಪ್ರೇಮ್‌ ಪುತ್ರಿಯ ಈ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಕಾರ್ಯ ನೋಡಿ, ನಮಗೂ ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಬೇಕು ಎನಿಸುತ್ತಿದೆ ಎಂದ ಜನರು ಕಾಮೆಂಟ್‌ ಮಾಡುವ ಮೂಲಕ ಅಮೃತಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮಗಳ ಕಾರ್ಯಕ್ಕೆ ಪ್ರೇಮ್‌ ಮೆಚ್ಚುಗೆ

ನನಗೆ ಉದ್ದ ತಲೆಗೂದಲು ಎಂದರೆ ಇಷ್ಟ. ಆದ್ದರಿಂದ ಒಮ್ಮೆಯೂ ಕತ್ತರಿಸಿರಲಿಲ್ಲ. ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಬೇಕೆಂದು ಮೊದಲಿನಿಂದಲೂ ಅಂದುಕೊಂಡಿದ್ದೆ, ಆದರೆ 'ಟಗರು ಪಲ್ಯ' ಸಿನಿಮಾದಲ್ಲಿ ಅವಕಾಶ ದೊರೆತ ಕಾರಣ ಕೂದಲು ಕತ್ತರಿಸಲು ಸಾಧ್ಯವಾಗಿರಲಿಲ್ಲ. ಈಗ ಅಂದುಕೊಂಡಿದ್ದನ್ನು ಮಾಡಿದ್ದೇನೆ, ಇದರಿಂದ ನನಗೆ ಖುಷಿ ಇದೆ. ಒಂದೊಳ್ಳೆ ಕೆಲಸ ಮಾಡಿದ ಸಮಾಧಾನ ಇದೆ ಎಂದು ಅಮೃತಾ ಹೇಳಿದ್ದಾರೆ. ಸುಮಾರು 13 ಇಂಚು ಕೂದಲನ್ನು ಅಮೃತಾ ಕ್ಯಾನ್ಸರ್‌ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಮಗಳ ಕೆಲಸಕ್ಕೆ ಪ್ರೇಮ್‌ ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನವೆಂಬರ್‌ನಲ್ಲಿ ಟಗರು ಪಲ್ಯ ರಿಲೀಸ್‌

ಅಮೃತಾ ಅಭಿನಯದ 'ಟಗರು ಪಲ್ಯ' ಚಿತ್ರವನ್ನು ನಟ ಧನಂಜಯ್‌ ತಮ್ಮ ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಮೂಲಕ ತಯಾರಿಸಿದ್ಧಾರೆ. ಚಿತ್ರಕ್ಕೆ ಉಮೇಶ್‌ ಕೃಪ ಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ಧಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟಗರು ಪಲ್ಯ ಟೈಟಲ್‌ ಹಾಡು ವೈರಲ್‌ ಆಗುತ್ತಿದೆ. ಸೂರ್ಯಕಾಂತಿ ಹಾಡು ಕೂಡಾ ಬಹಳ ಚೆನ್ನಾಗಿದೆ. ಚಿತ್ರದಲ್ಲಿ ಅಮೃತಾಗೆ ನಾಯಕನಾಗಿ ನಾಗಭೂಷಣ್‌ ನಟಿಸುತ್ತಿದ್ದಾರೆ. ಇವರೊಂದಿಗೆ ರಂಗಾಯಣ ರಘು, ತಾರಾ ಅನುರಾಧಾ, ಶರತ್‌ ಲೋಹಿತಾಶ್ವ, ವಾಸುಕಿ ವೈಭವ್‌, ಚಿತ್ರಾ ಶೆಣೈ, ವೈಜನಾಥ್‌ ಬಿರಾದಾರ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ನವೆಂಬರ್‌ನಲ್ಲಿ ರಿಲೀಸ್‌ ಆಗುತ್ತಿದೆ.