Sandalwood News: ವಂಶಿಕಾ ಹೆಸರಲ್ಲಿ ಹಣ ವಸೂಲಿ; ಮಗಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ; ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್
ಕನ್ನಡ ಸುದ್ದಿ  /  ಮನರಂಜನೆ  /  Sandalwood News: ವಂಶಿಕಾ ಹೆಸರಲ್ಲಿ ಹಣ ವಸೂಲಿ; ಮಗಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ; ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್

Sandalwood News: ವಂಶಿಕಾ ಹೆಸರಲ್ಲಿ ಹಣ ವಸೂಲಿ; ಮಗಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ; ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್

ಮೊದಲು ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಅಗತ್ಯ ಹೌದು, ಹಾಗಂತ ಪಾಠವನ್ನು ಕಡೆಗಣಿಸಬಾರದು. ಈಗಲಾದರೂ ಎಚ್ಚೆತ್ತುಕೊಳ್ಳಿ. ಮಗಳಿಗೆ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ನಟಿಸುವಂತೆ ಪ್ರೋತ್ಸಾಹಿಸಬೇಡಿ, ಅವಳ ವಿದ್ಯಾಭ್ಯಾಸದತ್ತ ಗಮನ ನೀಡಿ ಎಂದು ನೆಟಿಜನ್ಸ್‌ ಬುದ್ಧಿ ಮಾತು ಹೇಳುತ್ತಿದ್ದಾರೆ.

ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್‌
ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್‌ (PC: VanshikaAnjaniKashyapaOfficial Instagram)

ಮಾಸ್ಟರ್‌ ಆನಂದ್‌ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದೀಗ ಆನಂದ್‌ ಪುತ್ರಿ ವಂಶಿಕಾ ಕೂಡಾ ಅಪ್ಪನಂತೆ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪನನ್ನೂ ಮೀರಿಸುವಂತೆ ರಿಯಾಲಿಟಿ ಶೋ, ಸಿನಿಮಾ, ಕಾಮಿಡಿ ವಿಡಿಯೋಗಳಲ್ಲಿ ನಟಿಸಿ ಹೆಸರಾಗಿದ್ದಾರೆ.

ನನ್ನಮ್ಮ ಸೂಪರ್‌ ಸ್ಟಾರ್‌ ಮೂಲಕ ಪರಿಚಯವಾದ ವಂಶಿಕಾ

ವಂಶಿಕಾ ಮೊದಲ ಬಾರಿಗೆ ''ನನ್ನಮ್ಮ ಸೂಪರ್‌ ಸ್ಟಾರ್‌'' ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಪರಿಚಯ ಆದರು. ಅಲ್ಲಿವರೆಗೂ ಆನಂದ್‌ಗೆ ಇಂಥ ಚಿನಕುರಳಿ ಪಟಾಕಿಯಂಥ ಮಗಳು ಇದ್ದಾಳೆ ಎಂದು ಅನೇಕರಿಗೆ ತಿಳಿದಿರಲಿಲ್ಲ. ಇದಾದ ನಂತರ ಕೂಡಾ ವಂಶಿಕಾ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ವಂಶಿಕಾ ಜನಪ್ರಿಯತೆ ಹೆಚ್ಚಾದಂತೆ ಆ ಮಗುವಿನ ಹೆಸರಿನಲ್ಲೇ ತಂದೆ ತಾಯಿ ಇನ್‌ಸ್ಟಾಗ್ರಾಮ್‌ ಪೇಜ್‌ ಕ್ರಿಯೇಟ್‌ ಮಾಡಿದರು. ಇದೀಗ ವಂಶಿಕಾ ಹೆಸರು ಹೇಳಿಕೊಂಡು ಬೇರೆ ಪೋಷಕರ ಬಳಿ ಹಣ ಕೀಳುತ್ತಿದ್ದ ನಿಶಾ ನರಸಪ್ಪ ಎಂಬ ಯುವತಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ವಂಶಿಕಾ ಹೆಸರಲ್ಲಿ ಮೋಸ ಮಾಡಿದ ನಿಶಾ ನರಸಪ್ಪ

ನಿಶಾ ನರಸಪ್ಪ, ಎನ್‌ಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ವತಿಯಿಂದ ಮಕ್ಕಳಿಗೆ ರಿಯಾಲಿಟಿ ಶೋಗೆ ಅವಕಾಶ ಕೊಡಿಸುತ್ತೇನೆ, ಫೋಟೋಶೂಟ್‌ ಮಾಡಿಸುತ್ತೇನೆ ಎಂದು ಹೇಳಿ ವಂಶಿಕಾ ಹೆಸರಿನಲ್ಲಿ ಬೇರೆ ಪೋಷಕರಲ್ಲಿ ಆಸೆ ತೋರಿಸಿ ಹಣ ವಸೂಲಿ ಮಾಡುತ್ತಿದ್ದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ವಿಚಾರ ಹೊರಗೆ ಬರುತ್ತಿದ್ದಂತೆ ಆನಂದ್‌ ಪತ್ನಿ ಯಶಸ್ವಿನಿ ಇನ್‌ಸ್ಟಾಗ್ರಾಮ್‌ ಲೈವ್‌ ಬಂದು ''ದಯವಿಟ್ಟು ಇನ್ಮುಂದೆ ಯಾವುದೇ ಪೋಷಕರು ಮಕ್ಕಳ ವಿಚಾರದಲ್ಲಿ ರೀತಿ ತಪ್ಪು ಮಾಡಬೇಡಿ, ನಿಮ್ಮ ಮಕ್ಕಳು ಮುಂದೆ ಬರಬೇಕು ಎನ್ನುವ ಆಸೆಯಿಂದ ಹಣ ಕಳೆದುಕೊಳ್ಳಬೇಡಿ'' ಎಂದು ಮನವಿ ಮಾಡಿದ್ದರು. ಇಷ್ಟೆಲ್ಲಾ ಆದ ನಂತರ ಕೆಲವು ನೆಟಿಜನ್ಸ್‌ ಈಗ ಮಾಸ್ಟರ್ ಆನಂದ್‌ ಹಾಗೂ ಯಶಸ್ವಿನಿ ಇಬ್ಬರಿಗೂ ಬುದ್ಧಿ ಹೇಳುತ್ತಿದ್ದಾರೆ.

ಮಾಸ್ಟರ್‌ ಆನಂದ್‌ ದಂಪತಿಗೆ ತಿಳಿ ಹೇಳಿದ ನೆಟಿಜನ್ಸ್‌

''ನಿಮ್ಮ ಮಗು ಪ್ರತಿಭಾವಂತೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಮಗಳನ್ನು ಬಣ್ಣದ ಲೋಕಕ್ಕೆ ತರುವ ಅವಶ್ಯಕತೆ ಏನಿತ್ತು. ನನ್ನಮ್ಮ ಸೂಪರ್‌ ಸ್ಟಾರ್‌ ವಿನ್‌ ಆದ ಬಳಿಕ ಅಷ್ಟೇ ಸಾಕಿತ್ತು. ಅವಳಿಗೆ ಇನ್ನೂ ಭವಿಷ್ಯ ಇದೆ. ಮಗುವಿನ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ ಪೇಜ್‌ ತಾನೇ ಏಕೆ ಬೇಕು. ಮಗಳು ಹೆಸರು ಗಳಿಸುತ್ತಿದ್ದಾಳೆ, ಅವಳಿಂದ ಹಣ ಬರುತ್ತಿದೆ ಎಂಬ ಆಸೆಗೆ ನಿವೇ ನಿಮ್ಮ ಮಗಳ ಭವಿಷ್ಯ ಹಾಳು ಮಾಡುತ್ತಿದ್ದೀರಿ, ಮೊದಲು ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಅಗತ್ಯ ಹೌದು, ಹಾಗಂತ ಪಾಠವನ್ನು ಕಡೆಗಣಿಸಬಾರದು. ಈಗಲಾದರೂ ಎಚ್ಚೆತ್ತುಕೊಳ್ಳಿ. ಮಗಳಿಗೆ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ನಟಿಸುವಂತೆ ಪ್ರೋತ್ಸಾಹಿಸಬೇಡಿ, ಅವಳ ವಿದ್ಯಾಭ್ಯಾಸದತ್ತ ಗಮನ ನೀಡಿ'' ಎಂದು ಬುದ್ಧಿ ಮಾತು ಹೇಳುತ್ತಿದ್ದಾರೆ.

Whats_app_banner