ಕನ್ನಡ ಸುದ್ದಿ  /  ಮನರಂಜನೆ  /  ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ, ಇದ್ರಲ್ಲಿ ಸಮಾಜಕ್ಕೇನು ಉಪಯೋಗ? ಆಶಿಕಾ ರಂಗನಾಥ್‌ಗೆ ಸಭ್ಯತೆ ಪಾಠ ಮಾಡಿದ ನೆಟ್ಟಿಗರು

ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ, ಇದ್ರಲ್ಲಿ ಸಮಾಜಕ್ಕೇನು ಉಪಯೋಗ? ಆಶಿಕಾ ರಂಗನಾಥ್‌ಗೆ ಸಭ್ಯತೆ ಪಾಠ ಮಾಡಿದ ನೆಟ್ಟಿಗರು

ನಟಿ ಆಶಿಕಾ ರಂಗನಾಥ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಮುಂದು. ಒಂದಾದ ಮೇಲೊಂದು ಗ್ಲಾಮರಸ್‌ ಫೋಟೋಗಳನ್ನು ಶೇರ್‌ ಮಾಡುತ್ತಲಿರುತ್ತಾರೆ ಈ ನಟಿ. ಜತೆಗೆ ನೆಗೆಟಿವ್‌ ವಿಚಾರಗಳಿಗೂ ಕಿವಿಗೊಡದೆ, ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಗಮನ ಹರಿಸುತ್ತಿರುತ್ತಾರೆ.

ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ, ಇದ್ರಲ್ಲಿ ಸಮಾಜಕ್ಕೇನು ಉಪಯೋಗ? ಆಶಿಕಾ ರಂಗನಾಥ್‌ಗೆ ಸಭ್ಯತೆ ಪಾಠ ಮಾಡಿದ ನೆಟ್ಟಿಗರು
ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ, ಇದ್ರಲ್ಲಿ ಸಮಾಜಕ್ಕೇನು ಉಪಯೋಗ? ಆಶಿಕಾ ರಂಗನಾಥ್‌ಗೆ ಸಭ್ಯತೆ ಪಾಠ ಮಾಡಿದ ನೆಟ್ಟಿಗರು

Ashika Ranganath latest photos: ಸೋಷಿಯಲ್‌ ಮೀಡಿಯಾದಲ್ಲಿ ನಟಿಯರು ತಮ್ಮ ಬೋಲ್ಡ್‌ ಬಿನ್ನಾಣ ಪ್ರದರ್ಶನ ಮಾಡುತ್ತಲೇ ಸದಾ ಸುದ್ದಿಯಲ್ಲಿರುತ್ತಾರೆ. ಒಂದಾದ ಮೇಲೊಂದು ಫೋಟೋ ಶೇರ್‌ ಮಾಡಿ ತಮ್ಮ ಮೈಮಾಟ ಪ್ರದರ್ಶಿಸುತ್ತಿರುತ್ತಾರೆ. ಪರಭಾಷೆ ನಟಿಯರಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನ ಎಷ್ಟೋ ಬೆಡಗಿಯರೂ, ತಮ್ಮ ಗ್ಲಾಮರಸ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಕ್ಕೆ ಪೋಸ್ಟ್‌ ಮಾಡುತ್ತಿರುತ್ತಾರೆ. ಆ ಪೈಕಿ ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಸಹ ಒಬ್ಬರು. ಇದೀಗ ಇದೇ ನಟಿ ತಮ್ಮ ಬೋಲ್ಡ್ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕನ್ನಡದ ಜತೆಗೆ ಪಕ್ಕದ ತಮಿಳು, ತೆಲುಗಿನಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ನಟಿ ಆಶಿಕಾ ರಂಗನಾಥ್. ಪಟ್ಟಾತು ಅರಸನ್‌ ಸಿನಿಮಾ ಮೂಲಕ 2022ರಲ್ಲಿ ಕಾಲಿವುಡ್‌ಗೆ ಪ್ರವೇಶ ಪಡೆದಿದ್ದ ಆಶಿಕಾ, ಅದಾದ ಬಳಿಕ ಅಮಿಗೋಸ್‌ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್‌ ಕದ ತಟ್ಟಿದರು. ಅದಾದ ಬಳಿಕ ನಾ ಸಾಮಿ ರಂಗ ಚಿತ್ರದಿಂದಲೂ ಹೆಸರು ಮಾಡಿದರು. ಸದ್ಯ ಕನ್ನಡದ ಹಲವು ಸಿನಿಮಾ ಚಿತ್ರೀಕರಣದಲ್ಲಿ ಈ ನಟಿ ಬಿಜಿಯಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಆಶಿಕಾ ಮಿಂಚಿಂಗ್‌ 

ಸಿನಿಮಾ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಆಶಿಕಾ, ಬೋಲ್ಡ್‌ ಮತ್ತು ಸಾಂಪ್ರದಾಯಿಕ ಫೋಟೋಗಳ ಮೂಲಕ ಆಗಾಗ ಎಲ್ಲರ ಮುಂದೆ ಆಗಮಿಸುತ್ತಿರುತ್ತಾರೆ. ಒಮ್ಮೊಮ್ಮೆ ಸೀರೆಯಲ್ಲಿ ಎದುರಾಗಿ ಮಂತ್ರಮುಗ್ಧಗೊಳಿಸುವ ಆಶಿಕಾ, ಇನ್ನು ಕೆಲವೊಮ್ಮೆ ವೆಸ್ಟರ್ನ್‌ ಶೈಲಿಯ ಉಡುಪುಗಳಲ್ಲಿಯೂ ಮಿಣ ಮಿಣ ಮಿನುಗುತ್ತಿರುತ್ತಾರೆ. ಇದೀಗ ಕಪ್ಪು ವರ್ಣದ ಕಟ್‌ ಪೀಸ್‌ ಗೌನ್‌ ಉಡುಗೆಯಲ್ಲಿ ಎದುರಾಗಿದ್ದೇ ತಡ, ಕೆಲವರು ನಟಿಗೆ ಹೇಗೆ ಉಡುಪು ಧರಿಸಬೇಕು ಎಂದು ಪಾಠ ಮಾಡುತ್ತಿದ್ದಾರೆ.

ಹೌದು ಕಪ್ಪು ವರ್ಣದ ದಿರಿಸಿನಲ್ಲಿ ನಟಿ ಆಶಿಕಾ ಎದುರಾಗುತ್ತಿದ್ದಂತೆ, ನಟಿಯ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಕೆಲವರು ಆಶಿಕಾ ಫೋಟೋಗಳಿಗೆ ಮನಸೋತರೆ, ಇನ್ನು ಕೆಲವರು ಹಾರ್ಟ್‌ ಎಮೋಜಿ ಹಾಕಿ ಲೈಕ್‌ ಒತ್ತುತ್ತಿದ್ದಾರೆ. ಇದಷ್ಟಕ್ಕೆ ಮುಗಿಯಲಿಲ್ಲ, ಬೆಂಕಿ ಎಮೋಜಿಯನ್ನೂ ಕಾಮೆಂಟ್‌ ರೂಪದಲ್ಲಿ ಪೋಸ್ಟ್‌ ಮಾಡಿ, ಸೂಪರ್‌ ಎನ್ನುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ, ನೆಗೆಟಿವ್‌ ಕಾಮೆಂಟ್‌ಗಳೂ ಆಶಿಕಾ ಫೋಟೋಗಳಿಗೆ ಹರಿದುಬರುತ್ತಿವೆ. ಒಂದರ್ಥದಲ್ಲಿ ಸಭ್ಯತೆಯ ಪಾಠ ಮಾಡುತ್ತಿದ್ದಾರೆ.

ನಟಿಗೆ ಸಭ್ಯತೆ ಪಾಠ ಮಾಡಿದ ನೆಟ್ಟಿಗರು

ಚಿನ್ಮಯ್‌ ಪೂಜಾರಿ ಎಂಬುವವರು ನಟಿ ಆಶಿಕಾ ರಂಗನಾಥ್‌ ಹಂಚಿಕೊಂಡ ಫೋಟೋಗಳನ್ನು ನೋಡಿ, ಅದೇ ಪೋಸ್ಟ್‌ಗೆ ಒಂದಷ್ಟು ಪ್ರಶ್ನೆಗಳನ್ನು ಕಾಮೆಂಟ್‌ ರೂಪದಲ್ಲಿ ಹಂಚಿಕೊಂಡಿದ್ದಾರೆ. ಇಂಥ ಫೋಟೋಗಳಿಂದ ಜನರಿಗೆ ಏನು ಸಂದೇಶ ಕೊಡುತ್ತಿದ್ದೀರಿ, ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ ಎಂದಿದ್ದಾರೆ. ಹೀಗಿದೆ ಚಿನ್ಮಯ್‌ ಪೂಜಾರಿ ಅವರ ಕಾಮೆಂಟ್‌

1) ಈ ರೀಲ್ಸ್ ನಿಂದ ಜನರಿಗೆ ಏನು ಸಂದೇಶ ಸಾರುತ್ತದೆ?

2) ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ?

3) ಇದ್ರಲ್ಲಿ ಸಮಾಜಕ್ಕೆ ಏನಾದ್ರೂ ಉಪಯೋಗ ಇದೀಯ?

4) ತುಂಡು ಬಟ್ಟೆಗಳನ್ನು ಉಟ್ಟು ಈ ರೀತಿ ಸೋಶಿಯಲ್ ಮೀಡಿಯಾ likes ಅನಿವಾರ್ಯವೇ? ಎಂದಿದ್ದಾರೆ.

ಇವರ ಈ ಪ್ರಶ್ನೆಗಳಿಗೆ ಪ್ರತಿಯಾಗಿ ಪ್ರತ್ಯುತ್ತರ ನೀಡಿದ ಇನ್ನು ಕೆಲ ನೆಟ್ಟಿಗರು, ಇದು ಅವರ ವೃತ್ತಿ ಎಂದಿದ್ದಾರೆ. ನೀವ್ಯಾಕೆ ಇನ್‌ಸ್ಟಾಗ್ರಾಂ ಬಳಸ್ತಿದ್ದೀರಾ? ನಟಿಯರನ್ನು ಏಕೆ ಫಾಲೋ ಮಾಡ್ತಿದ್ದೀರಾ? ಎಂದು ಕೆಲವರು ಟಾಂಗ್‌ ಕೊಟ್ಟಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ನಟಿಗೆ ನೆಗೆಟಿವ್‌ ಕಾಮೆಂಟ್‌ ಮೂಲಕ ತಿವಿದರೆ, ಬಹುತೇಕರು ನಟಿಯ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿನ ಇಂಥ ಚರ್ಚೆಗಳಿಗೆ ನಟಿ ಆಶಿಕಾ ಯಾವತ್ತು ಸೊಪ್ಪು ಹಾಕುವ ಗೋಜಿಗೆ ಹೋಗಿಲ್ಲ. ನೆಗೆಟಿವಿಟಿ ಬದಿಗಿಟ್ಟು, ಪಾಸಿಟಿವ್‌ ವಿಚಾರಗಳಿಗಷ್ಟೇ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುತ್ತಾರೆ. 

ಟಾಲಿವುಡ್‌ನಲ್ಲಿ ಬಿಜಿ

ಇನ್ನು ಆಶಿಕಾ ರಂಗನಾಥ್‌ ಸಿನಿಮಾ ವಿಚಾರಕ್ಕೆ ಬಂದರೆ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವದ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಟಾಲಿವುಡ್‌ನಲ್ಲಿ ಚಿರಂಜೀವಿ ನಟನೆಯ ವಿಶ್ವಂಭರ ಚಿತ್ರದಲ್ಲೂ ಆಶಿಕಾ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಲ್ಲಿದಿ ವಸಿಷ್ಠ ಈ ಚಿತ್ರದ ನಿರ್ದೇಶಕರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024