ಫಿಲ್ಮ್‌ ಚೇಂಬರ್‌ ಚುನಾವಣೆ; ಅಧ್ಯಕ್ಷರಾಗಿ ಎನ್‌ಎಮ್ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆ
ಕನ್ನಡ ಸುದ್ದಿ  /  ಮನರಂಜನೆ  /  ಫಿಲ್ಮ್‌ ಚೇಂಬರ್‌ ಚುನಾವಣೆ; ಅಧ್ಯಕ್ಷರಾಗಿ ಎನ್‌ಎಮ್ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆ

ಫಿಲ್ಮ್‌ ಚೇಂಬರ್‌ ಚುನಾವಣೆ; ಅಧ್ಯಕ್ಷರಾಗಿ ಎನ್‌ಎಮ್ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆ

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1599 ಸದ್ಯರಿದ್ದು ಈ ಬಾರಿ 967 ಸದಸ್ಯರು ಮಾತ್ರ ಮತ ಚಲಾಯಿಸಿದ್ದಾರೆ. ಬೆಂಗಳೂರಿನ ಕ್ರಿಸೆಂಟ್‌ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆದಿತ್ತು.

ಫಿಲ್ಮ್‌ ಚೇಂಬರ್‌ ನೂತನ ಅಧ್ಯಕ್ಷರಾಗಿ ಎನ್‌ಎಮ್ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆ
ಫಿಲ್ಮ್‌ ಚೇಂಬರ್‌ ನೂತನ ಅಧ್ಯಕ್ಷರಾಗಿ ಎನ್‌ಎಮ್ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆ

ಇಂದು ( ಸೆಪ್ಟೆಂಬರ್‌ 23) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಗಿದಿದೆ. ಈ ಎಲೆಕ್ಷನ್‌ನಲ್ಲಿ ಅಧ್ಯಕ್ಷರಾಗಿ ಎನ್‌ಎಂ ಸುರೇಶ್‌ ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌ ಆಯ್ಕೆಯಾಗಿದ್ಧಾರೆ. ಚುನಾಯಿತಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಿನಿಮಾ ಗಣ್ಯರು, ಸಿನಿಮಾಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಫಿಲ್ಮ್‌ ಚೇಂಬರ್‌ನಲ್ಲಿ ಒಟ್ಟು 1599 ಸದಸ್ಯರು

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1599 ಸದ್ಯರಿದ್ದು ಈ ಬಾರಿ 967 ಸದಸ್ಯರು ಮಾತ್ರ ಮತ ಚಲಾಯಿಸಿದ್ದಾರೆ. ಬೆಂಗಳೂರಿನ ಕ್ರಿಸೆಂಟ್‌ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಫಿಲ್ಮ್‌ ಚೇಂಬರ್‌ನ 65ನೇ ವಾರ್ಷಿಕ ಮಹಾಸಭೆ ನಡೆದಿತ್ತು. ಸಭೆ ನಂತರ ಮತದಾನ ನಡೆದಿತ್ತು. ಕಳೆದ ಬಾರಿ ನಿರ್ಮಾಪಕರ ವಲಯದಿಂದ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬಾಮಾ ಹರೀಶ್‌ ಅವರ ಅಧಿಕಾರಾವಧಿ ಮೆ 28ಕ್ಕೆ ಅಂತ್ಯವಾಗಿತ್ತು. ಜೂನ್‌ನಲ್ಲಿ ಎಲೆಕ್ಷನ್‌ ನಡೆದು ಈ ವೇಳೆಗಾಗಲೇ ಹೊಸ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚುನಾವಣೆ ಈ ಬಾರಿ ಸೆಪ್ಟೆಂಬರ್‌ನಲ್ಲಿ ನಡೆದಿದೆ.

120 ಮತಗಳ ಅಂತರದಿಂದ ಗೆದ್ದ ಎನ್‌ಎಮ್‌ ಸುರೇಶ್‌

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಲ್ಲಿ ಶಿಲ್ಪಾ ಶ್ರೀನಿವಾಸ್‌ಗೆ 217 ಮತಗಳು, ವಿಹೆಚ್‌ ಸುರೇಶ್‌ಗೆ 181, ಎನ್‌ಎಂ ಸುರೇಶ್‌ಗೆ 337 ಮತಗಳು ಹಾಗೂ ಎ ಗಣೇಶ್‌ಗೆ 204 ಮತಗಳು ದೊರೆತಿದ್ದು ಎನ್‌ಎಂ ಸುರೇಶ್‌ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್‌ಎಂ ಸುರೇಶ್‌, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್‌, ಕಾರ್ಯದರ್ಶಿ ಆಗಿ ಬಾಮಾ ಹರೀಶ್‌ ಹಾಗೂ ಖಜಾಂಚಿಯಾಗಿ ಜಯಸಿಂಹ ಮುಸುರಿ ಆಯ್ಕೆ ಆಗಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner