Viral Video: ಕಣ್ಸೆನ್ನೆ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡ ಹಾಡು ವೈರಲ್‌; ನಂಗೆ ಅಲ್ಲವ ಎಂದು ಮುದ್ದಾಗಿ ಹಾಡಿದ ನಟಿ-sandalwood news oru adaar love actress priya prakash varrier kannada song reel nange allava viral in social media pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Viral Video: ಕಣ್ಸೆನ್ನೆ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡ ಹಾಡು ವೈರಲ್‌; ನಂಗೆ ಅಲ್ಲವ ಎಂದು ಮುದ್ದಾಗಿ ಹಾಡಿದ ನಟಿ

Viral Video: ಕಣ್ಸೆನ್ನೆ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡ ಹಾಡು ವೈರಲ್‌; ನಂಗೆ ಅಲ್ಲವ ಎಂದು ಮುದ್ದಾಗಿ ಹಾಡಿದ ನಟಿ

Priya Prakash Varrier: ಒರು ಅದಾರ್‌ ಲವ್‌ (ಕನ್ನಡದಲ್ಲಿ ಕಿರಿಕ್‌ ಲವ್‌ ಸ್ಟೋರಿ) ಸಿನಿಮಾದಲ್ಲಿ ಕಣ್ಸೆನ್ನೆ ಮೂಲಕ ಫೇಮಸ್‌ ಆಗಿದ್ದ ಪ್ರಿಯಾ ಪ್ರಕಾಶ್‌ ವಾರಿಯರ್‌ ಇದೀಗ ಕನ್ನಡ ಹಾಡು "ನಂಗೆ ಅಲ್ಲವ" ಹಾಡಿದ್ದಾರೆ. ಕನ್ನಡ ಗೊತ್ತಿಲ್ಲದೆ ಇದ್ದರೂ ಮುದ್ದಾಗಿ ಈಕೆ ಹಾಡಿರುವ ರೀಲ್ಸ್‌ ವೈರಲ್‌ ಆಗಿದೆ.

Viral Video: ಕಣ್ಸೆನ್ನೆ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡ ಹಾಡು ವೈರಲ್‌
Viral Video: ಕಣ್ಸೆನ್ನೆ ಹುಡುಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡ ಹಾಡು ವೈರಲ್‌

ಬೆಂಗಳೂರು: ಕಣ್ಸೆನ್ನೆ ಮೂಲಕ ವೈರಲ್‌ ಆಗಿದ್ದ ಪ್ರಿಯಾ ಪ್ರಕಾಶ್‌ ವಾರಿಯರ್‌ ಇತ್ತೀಚೆಗೆ ಕನ್ನಡ ಹಾಡು "ನಂಗೆ ಅಲ್ಲವ" ಹಾಡಿಗೆ ರೀಲ್ಸ್‌ ಮಾಡಿದ್ದು, ಆ ವಿಡಿಯೋ ವೈರಲ್‌ ಆಗಿದೆ. ನಟಿಯ ಕನ್ನಡ ಪ್ರೀತಿಯು ಅಭಿಮಾನಿಗಳ ಮನಸ್ಸು ತುಂಬಿಸಿದೆ. ಪ್ರಿಯಾ ವಾರಿಯರ್‌ ಕನ್ನಡ ಹಾಡು ಕೇಳುವ ಮುನ್ನ ಇವರ ಬಗ್ಗೆ ಒಂದಿಷ್ಟು ವಿಚಾರ ನೆನಪಿಸಿಕೊಳ್ಳೋಣ. ಪ್ರಿಯಾ ವಾರಿಯರ್‌ ಎಂದಾಗ ಮುದ್ದಾಗಿ ಲೈನ್‌ ಹೊಡೆದ ವಿಡಿಯೋವೊಂದು ನೆನಪಾಗಬಹುದು. ಒರು ಅದಾರ್‌ ಲವ್‌ ಸಿನಿಮಾದ ಹಾಡೊಂದರಲ್ಲಿ ಕ್ಲಾಸ್‌ ರೂಂನಲ್ಲಿ ಈಕೆ ಮಾಡಿದ ಕಣ್ಸೆನೆಯಿಂದ ಸಾಕಷ್ಟು ಜನರಿಗೆ ಕ್ರಶ್‌ ಆಗಿದ್ದರು. ಇವರು ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಿಯಾ ಪ್ರಕಾಶ್‌ ವಾರಿಯರ್‌ ಗೂಗಲ್‌ ಇಂಡಿಯಾದಲ್ಲಿ 2018ರಲ್ಲಿ ಅತ್ಯಧಿಕ ಸರ್ಚ್‌ಗೆ ಒಳಗಾದ ಬೆಡಗಿ. ಅದಕ್ಕೆ ಕಾರಣವಾದದ್ದು ಆಕೆಯ ಮೊದಲ ಸಿನಿಮಾದ ಲೈನ್‌ ಹೊಡೆದ ಸೀನ್‌. ಆಕೆ ಕಣ್ಣು ಮಿಟುಕಿಸಿದ ಆ ದೃಶ್ಯವು ಭಾರತದ ಹರೆಯದ ಹುಡುಗರ ಎದೆ ಮಿಟುಕಿಸಿತ್ತು. ಆಕೆ ಆ ಹಾಡಿನ ಬಳಿಕ ಎಲ್ಲರ ಕ್ರಶ್‌ ಆಗಿ ಹೊರಹೊಮ್ಮಿದ್ದರು. ಆ ಕಣ್ಸೆನ್ನೆ ವಿಡಿಯೋ ದೇಶಾದ್ಯಂತ ವೈರಲ್‌ ಆಗಿತ್ತು. ಇದಾದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದರು. ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದರು. ಇವರ ಒರು ಅದಾರ್ ಲವ್ ಸಿನಿಮಾವು ಕನ್ನಡದಲ್ಲಿ ಕಿರಿಕ್‌ ಲವ್‌ ಸ್ಟೋರಿಯಾಗಿ ಬಿಡುಗಡೆಯಾಗಿತ್ತು.

ವಿಶೇಷವಾಗಿ ಕನ್ನಡಿಗರು ಖುಷಿಪಡುವಂತೆ ಈಕೆ ಕನ್ನಡ ಹಾಡೊಂದಕ್ಕೆ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಂಗೆ ಅಲ್ಲವ ಎಂಬ ಹಾಡಿಗೆ ತನ್ನ ಮಧುರ ಕಂಠದಲ್ಲಿ ಹಾಡಿದ್ದಾರೆ. ಹಳದಿ ಬಣ್ಣದ ಪ್ರಿಂಟೆಡ್‌ ಕುರ್ತಾ ಧರಿಸಿದ ಇವರು ಈ ವಿಡಿಯೋದಲ್ಲಿ ಕನಿಷ್ಠ ಮೇಕಪ್‌ನೊಂದಿಗೆ ಮುದ್ದಾಗಿ ಕಾಣಿಸಿದ್ದಾರೆ. ತಲೆಕೂದಲನ್ನು ಇಳಿಬಿಟ್ಟ ಇವರ ಕಿವಿಯಲ್ಲಿ ದೊಡ್ಡ ಕಿವಿಯೋಲೆ ನೇತಾಡುತ್ತಿದೆ. ಈ ವಿಡಿಯೋ ಹಂಚಿಕೊಂಡ ಇವರು " ನನಗೆ ಕನ್ನಡ ಮಾತನಾಡಲು ಗೊತ್ತಿಲ್ಲದೆ ಇದ್ದರೂ ಈ ಚಂದದ ಹಾಡನ್ನು ಹಾಡದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ಈ ಹಾಡು ಹಾಡುವಾಗ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ (ಕ್ಷಮಿಸಿಬಿಡಿ ಎಂದು ಕನ್ನಡದಲ್ಲೇ ಬರೆದಿದ್ದಾರೆ)" ಎಂದು ಕ್ಷಾಪ್ಷನ್‌ ಬರೆದಿದ್ದಾರೆ.

ಪ್ರಿಯಾ ವಾರಿಯರ್‌ ಹಾಡಿರುವ ಹಾಡು ಕೇಳಿ

ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಫ್ಯಾನ್ಸ್‌ ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. "ಕನ್ನಡದಲ್ಲಿ ಹಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು" "ರಶ್ಮಿಕಾ ಮಂದಣ್ಣ ನಿಮ್ಮಿಂದ ಕನ್ನಡ ಕಲಿಯಬೇಕು" "ಎಷ್ಟೋ ನಮ್ಮ ಕನ್ನಡಿಗರಿಗೆ ಮತ್ತು ಕನ್ನಡದ ಸೊ ಕಾಲ್ಡ್ ಕ್ರಿಯೇಟರ್ ಗಳಿಗೆನೆ ಈ ಹಾಡು ಬಳಸೋ ಮನಸ್ಸು ಬರಲಿಲ್ಲ! ಈಯಮ್ಮ ಇಷ್ಟು ಚೆಂದ ಹಾಡಿದ್ದಾಳೆ. ಕಂಡ ಕಂಡ ರೀಲ್ಸ್ ನಲ್ಲೆಲ್ಲ ಪೇಸ ಲೈಟ ಆಸ ಕೂಡ ಅನ್ನೋರಿಗೆ!! ಬಿಡಿ ಹಿತ್ತಲ ಗಿಡ ಮದ್ದಲ್ಲ ಅನ್ನೋರು ನಮಗ್ಯಾಕೆ!" "ನಮ್ಮ ಕನ್ನಡ ನಮ್ಮ ಪ್ರಿಯ " "ಕನ್ನಡಿಗರಿಂದ ನಿಮಗೆ ತುಂಬಾ ಪ್ರೀತಿ" ಹೀಗೆ ಹಲವು ಕಾಮೆಂಟ್‌ಗಳು ಬಂದಿವೆ.

ಪ್ರಿಯಾ ವಾರಿಯರ್‌ ಫ್ಯಾಷನ್‌ ಪ್ರಿಯೆಯೂ ಹೌದು. ಅವರ ಇನ್‌ಸ್ಟಾಗ್ರಾಂನಲ್ಲಿ ವೈವಿಧ್ಯಮಯ ಫ್ಯಾಷನ್‌ ಲುಕ್‌ಗಳನ್ನು ಕಾಣಬಹುದು. ಸಾಂಪ್ರದಾಯಿಕ ಸೀರೆಯಿಂದ ಮಿನಿ ಉಡುಗೆಯ ತನಕ ವಿವಿಧ ಬಗೆಯ ಡ್ರೆಸ್‌ಗಳಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ.