Kannada News  /  Entertainment  /  Sandalwood News Out Of Syllabus Movie Character Glimpses Released Directed By Pradeep Doddaiah Mnk
ಜೀವನವೇ ಔಟ್ ಆಫ್ ಸಿಲಬಸ್ ಅಲ್ಲವೇ? ಅಹಂ ಬಿಡ್ರಿ ಮುಂದೆ ನಡೀರಿ; ನಿರ್ದೇಶಕನ ಕ್ಯಾಪ್‌ ಧರಿಸಿದ ಪ್ರದೀಪ್‌ ದೊಡ್ಡಯ್ಯ
ಜೀವನವೇ ಔಟ್ ಆಫ್ ಸಿಲಬಸ್ ಅಲ್ಲವೇ? ಅಹಂ ಬಿಡ್ರಿ ಮುಂದೆ ನಡೀರಿ; ನಿರ್ದೇಶಕನ ಕ್ಯಾಪ್‌ ಧರಿಸಿದ ಪ್ರದೀಪ್‌ ದೊಡ್ಡಯ್ಯ

Out of syllabus: ಜೀವನವೇ ಔಟ್ ಆಫ್ ಸಿಲಬಸ್ ಅಲ್ಲವೇ? ಅಹಂ ಬಿಡ್ರಿ ಮುಂದೆ ನಡೀರಿ; ನಿರ್ದೇಶಕನ ಕ್ಯಾಪ್‌ ಧರಿಸಿದ ಪ್ರದೀಪ್‌ ದೊಡ್ಡಯ್ಯ

24 May 2023, 16:43 ISTManjunath B Kotagunasi
24 May 2023, 16:43 IST

ಪ್ರದೀಪ್‌ ದೊಡ್ಡಯ್ಯ ಈಗ ಔಟ್‌ ಆಫ್‌ ಸಿಲಬಸ್‌ ಹೆಸರಿನ ಸಿನಿಮಾ ಮಾಡಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಅದಕ್ಕೂ ಮುನ್ನ ಚಿತ್ರದ ಸಣ್ಣ ವಿಡಿಯೋ ತುಣುಕೊಂದು ಬಿಡುಗಡೆ ಆಗಿದೆ.

Out of syllabus: ಯೂಟ್ಯೂಬ್‌ನಲ್ಲಿ ತಮ್ಮ ಮೋಟಿವೇಷನಲ್‌, ಕಾಮಿಡಿ ಹೀಗೆ ಎಲ್ಲ ರೀತಿಯ ವಿಡಿಯೋಗಳ ಮೂಲಕವೇ ಸದ್ದು ಸುದ್ದಿಯಲ್ಲಿರುವ ಪ್ರದೀಪ್‌ ದೊಡ್ಡಯ್ಯ (Pradeep Doddaiah) ಈಗ ಸದ್ದಿಲ್ಲದೆ ಸಿನಿಮಾ ಮಾಡಿ, ಬಿಡುಗಡೆ ಹಂತಕ್ಕೂ ಬಂದಿದ್ದಾರೆ. ಆ ಸಿನಿಮಾ ಹೆಸರೇ ಔಟ್‌ ಆಫ್‌ ಸಿಲಬಸ್‌ (Out of syllabus). ಇತ್ತೀಚೆಗಷ್ಟೇ ಈ ಚಿತ್ರದ ಪಾತ್ರಗಳ ಪರಿಚಯದ ಕಿರು ವಿಡಿಯೋ ಝೇಂಕಾರ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

ಔಟ್‌ ಆಫ್‌ ಸಿಲಬಸ್‌ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಇದೀಗ ಇದೇ ಚಿತ್ರದಲ್ಲಿನ ನಟ ಅಚ್ಯುತ್‌ ಕುಮಾರ್ ಅವರ ಪಾತ್ರದ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಅಹಂ ಬಗ್ಗೆ ಅವರ ಬಾಯಿಂದ ವಾಸ್ತವದ ಪಾಠ ಮಾಡಿಸಿದ್ದಾರೆ ನಿರ್ದೇಶಕರು. ಎಲ್ಲ ಮಾನಸಿಕ ಅಸ್ಥಿರತೆಗೆ ಮೂಲ ಕಾರಣ ಇಗೋ ಎಂದು ಹೇಳಿಸಿದ್ದಾರೆ.

ಇನ್ನು ಸಿನಿಮಾ ಮತ್ತು ಶೀರ್ಷಿಕೆ ಬಗ್ಗೆ ಹೇಳುವುದಾದರೆ, ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಪುಸ್ತಕದಲ್ಲಿ ಇಲ್ಲದೇ ಇರುವಂಥ ಪ್ರಶ್ನೆಗಳು ಬಂದರೆ ಔಟ್ ಆಫ್ ಸಿಲಬಸ್ ಅನ್ನೋದು ವಾಡಿಕೆ. ಇದು ವಿದ್ಯಾರ್ಥಿ ವಲಯದಲ್ಲಿ ಹೆಚ್ಚು ಪ್ರಸ್ತುತ ಬಳಕೆಯಲ್ಲಿರುವ ಪದ. ಇದನ್ನೇ ಸಿನಿಮಾದ ಶೀರ್ಷಿಕೆಯಾಗಿ ಬಳಸಿಕೊಂಡು ಸಿನಿಮಾ ಮಾಡಿದ್ದಾರೆ ಪ್ರದೀಪ್‌ ದೊಡ್ಡಯ್ಯ.

ವಿಶೇಷ ಏನೆಂದರೆ ಈ ಔಟ್ ಆಫ್ ಸಿಲಬಸ್ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ. ಕೆ ವಿಜಯಕಲಾ ಸುಧಾಕರ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮುಖ್ಯಭೂಮಿಕೆಯಲ್ಲಿ ಅಚ್ಯುತ್‌ ಕುಮಾರ್‌, ಪ್ರದೀಪ್‌ ದೊಡ್ಡಯ್ಯ ಮತ್ತು ಹೃತಿಕಾ ಶ್ರೀನಿವಾಸ್‌ ನಟಿಸುತ್ತಿದ್ದಾರೆ.