ಕನ್ನಡ ಸುದ್ದಿ  /  Entertainment  /  Sandalwood News Pan India Movie Record Break Release On March 8, Nihaar Nagarjuna Raghda Iftekhar Pcp

ಪ್ಯಾನ್‌ ಇಂಡಿಯಾ ಸಿನಿಮಾ ರೆಕಾರ್ಡ್ ಬ್ರೇಕ್ ಮಾ 8ರಂದು ರಿಲೀಸ್‌, 2 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ

Record Break Movie: ಚಲದವಾಡ ಶ್ರೀನಿವಾಸರಾವ್ ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಚಿತ್ರ "ರೆಕಾರ್ಡ್ ಬ್ರೇಕ್" ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವು ದೇಶಾದ್ಯಂತ 2 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ರೆಕಾರ್ಡ್ ಬ್ರೇಕ್ ಮಾ 8ರಂದು ರಿಲೀಸ್‌
ಪ್ಯಾನ್‌ ಇಂಡಿಯಾ ಸಿನಿಮಾ ರೆಕಾರ್ಡ್ ಬ್ರೇಕ್ ಮಾ 8ರಂದು ರಿಲೀಸ್‌

ಬೆಂಗಳೂರು: ಮಾರ್ಚ್‌ 8ರಂದು ರೆಕಾರ್ಡ್‌ ಬ್ರೇಕ್‌ ಎಂಬ ಪ್ಯಾನ್‌ ಇಂಡಿಯಾ ಸಿನಿಮಾ ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿರುವ, ಈವರೆಗೂ ತೆಲುಗು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಚಲನಚಿತ್ರಗಳನ್ನು ವಿತರಣೆ ಮಾಡಿರುವ ಚಲದವಾಡ ಶ್ರೀನಿವಾಸರಾವ್ ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಮಹಾ ಶಿವರಾತ್ರಿ ದಿನದಂದು ಎಲ್ಲಾ ಭಾಷೆಗಳಲ್ಲೂ ಭಾರತದಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರೆಕಾರ್ಡ್‌ ಬ್ರೇಕ್‌ ಬಿಡುಗಡೆಯಾಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

"ನಾನು ಮೂಲತಃ ಟಿಂಬರ್ ಉದ್ಯಮಿ. ಅಯೋಧ್ಯಾ ಶ್ರೀರಾಮನ ದೇವಸ್ಥಾನ ಸೇರಿದಂತೆ ಅನೇಕ ಜಗತ್ಪ್ರಸಿದ್ಧ ದೇವಸ್ಥಾನಗಳಿಗೆ ಮರ ಒದಗಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅನೇಕ ಭಾಷೆಗಳ ಚಿತ್ರಗಳನ್ನು ವಿತರಣೆ ಕೂಡ ಮಾಡಿದ್ದೇವೆ. ದುಡ್ಡು ಮಾಡುವುದಕ್ಕಿಂತ ನೋಡುಗರಿಗೆ ಒಳ್ಳೆಯ ಚಿತ್ರ ಕೊಡುವ ಆಸೆ ನನ್ನದು" ಎಂದು ನಿರ್ಮಪಕ ಮತ್ತು ನಿರ್ದೇಶಕ ಚಲದವಾಡ ಶ್ರೀನಿವಾಸರಾವ್ ಹೇಳಿದ್ದಾರೆ.

"ಚಂಟಿ ಹಾಗೂ ಬಂಟಿ ಎಂಬ ಅನಾಥ ಹುಡುಗರಿಬ್ಬರು ತಾವು ಅಂದುಕೊಂಡದ್ದನ್ನು ಹಾಗೂ ಯಾರು ನಿರೀಕ್ಷಿಸದ್ದನ್ನು ಸಾಧಿಸುವ ಕಥೆಯಿದು. ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಂಟಿ ಹಾಗೂ ಬಂಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಗ್ದಾ ಇಫ್ತೇಕರ್ ಈ ಚಿತ್ರದ ನಾಯಕಿ. ಸತ್ಯಕೃಷ್ಣ, ಸಂಜನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ಮಾರ್ಚ್‌ 8ರಂದು ಮಹಾ ಶಿವರಾತ್ರಿ ಶುಭದಿವಸ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಲಿ, ಒಡಿಯಾ ಭಾಷೆಗಳಲ್ಲಿ ಏಕಕಾಲಕ್ಕೆ ಭಾರತದಾದ್ಯಂತ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಿ. ಹಾರೈಸಿ ಎಂದರು ನಿರ್ಮಪಕ & ನಿರ್ದೇಶಕ ಚಲದವಾಡ ಶ್ರೀನಿವಾಸರಾವ್.

ನಾಯಕರಾದ ನಿಹಾರ್, ನಾಗಾರ್ಜುನ, ನಾಯಕಿ ರಗ್ದಾ ಇಫ್ತೇಕರ್, ನಟಿ ಸತ್ಯಕೃಷ್ಣ ಹಾಗೂ ನಟ ಪ್ರಸನ್ನ ಕುಮಾರ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಿರ್ದೇಶಕ ಅಜಯ್ ಕುಮಾರ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.