ಕನ್ನಡ ಸುದ್ದಿ  /  Entertainment  /  Sandalwood News Panchendriyam Kannada Movie Songs Trailer Released April Movie Release Date Pcp

ಪಂಚೇಂದ್ರಿಯಂ ಸಿನಿಮಾದ ಹಾಡು, ಟೀಸರ್‌ ಬಿಡುಗಡೆ; ವಿನಯ್ ಸೂರ್ಯ ನಟನೆಯ ಸಿನಿಮಾ ಏಪ್ರಿಲ್‌ನಲ್ಲಿ ರಿಲೀಸ್‌

Upcoming Kannada Movies: ಏಪ್ರಿಲ್‌ ತಿಂಗಳಿನಲ್ಲಿ ಪಂಚೇಂದ್ರಿಯಂ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಲಿದೆ. ಇದೀಗ ಈ ಸಿನಿಮಾದ ಹಾಡುಗಳು ಮತ್ತು ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ವಿನಯ್‌ ಸೂರ್ಯ, ನಾಯಕಿಯರಾಗಿ ವಿದ್ಯಾಶ್ರೀ ಮತ್ತು ರಾಘವಿ ನಟಿಸಿದ್ದಾರೆ.

ಪಂಚೇಂದ್ರಿಯಂ ಸಿನಿಮಾದ ಹಾಡು, ಟೀಸರ್‌ ಬಿಡುಗಡೆ
ಪಂಚೇಂದ್ರಿಯಂ ಸಿನಿಮಾದ ಹಾಡು, ಟೀಸರ್‌ ಬಿಡುಗಡೆ

ರಾಜ್ ಪ್ರಿಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್ ಸೋಮಶೇಖರ್ ನಿರ್ಮಿಸಿರುವ ಹಾಗೂ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ "ಪಂಚೇಂದ್ರಿಯಂ" ಚಿತ್ರದ ಹಾಡುಗಳು ಹಾಗೂ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಡಾ. ವಿ.ನಾಗೇಂದ್ರ ಪ್ರಸಾದ್ ಟೀಸರ್ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಪಚಂದ್ರೀಯಂ ಸಿನಿಮಾದ ಕಥೆಯೇನು? ಈ ಪ್ರಶ್ನೆಗೆ ಚಿತ್ರತಂಡ ಈ ರೀತಿ ಮಾಹಿತಿ ನೀಡಿದೆ. ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ ಇವು ಮಾನ ದೇಹವನ್ನು ರೂಪಿಸುವ 5 ಅಂಗಗಳಾಗಿವೆ. ಈ "ಪಂಚೇಂದ್ರಿಯ" ಗಳನ್ನು ದೇವರು ನಮ್ಮ ಒಳ್ಳೆಯದ್ದಕ್ಕೆ, ಸದ್‌ಬಳಕೆಗಾಗಿ ನೀಡಿರುತ್ತಾನೆ. ನಾವು ಅದನ್ನು ದುರ್ಬಳಿಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೆ ಪಂಚೇಂದ್ರಿಯ ಚಿತ್ರದ ಪ್ರಮುಖ ಕಥಾಹಂದರ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಚಿತ್ರದಲ್ಲಿ ಆರು ಹಾಡುಗಳಿದೆ. ನಾನೇ ಸಂಗೀತ ನೀಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ಹೆಚ್ ಸೋಮಶೇಖರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಫ್ಜಲ್ ಅವರು ಈ ಚಿತ್ರದ ದ್ವಿತೀಯ ನಾಯಕನಾಗಿ ಅಭಿನಯಿಸಿರುವುದಲ್ಲದೆ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ವಿನಯ್ ಸೂರ್ಯ ಈ ಚಿತ್ರದ ನಾಯಕರಾಗಿ ಹಾಗೂ ವಿದ್ಯಾಶ್ರೀ ಮತ್ತು ರಾಘವಿ ನಾಯಕಿಯರಾಗಿ ನಟಿಸಿದ್ದಾರೆ. ದೇವರಾಯನದುರ್ಗ, ದಾಬಸ್ ಪೇಟೆ ಮುಂತಾದ ಕಡೆ ಚಿತ್ರೀಕರಣವಾಗಿದೆ. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಹೆಚ್ ಸೋಮಶೇಖರ್ ಮಾಹಿತಿ ನೀಡಿದರು. ಈ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿರುವುದಾಗಿ ಅಫ್ಜಲ್ ತಿಳಿಸಿದ್ದಾರೆ.

ಈ ಸಿನಿಮಾದ ನಾಯಕ ವಿನಯ್‌ ಸೂರ್ಯ ಅವರು ಈ ಹಿಂದೆ "ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ" ಸಿನಿಮಾದಲ್ಲಿ ಬಾಲನಟರಾಗಿ ಅಭಿನಯಸಿದ್ದರು. ಇದೀಗ ಈ ಮೂಲಕ ನಾಯಕ ನಟರಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್ ಹಾಗೂ ಪವನ್ ಮುಂತಾದ ಕಲಾವಿದರು ನಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಿರಿಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಉಪಸ್ಥಿತರಿದ್ದರು.

IPL_Entry_Point