ಕನ್ನಡ ಸುದ್ದಿ  /  ಮನರಂಜನೆ  /  ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ನಟ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ನಟ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

Pavithra Jayaram Death: ತೆಲುಗಿನ ತ್ರಿನಯನಿ ಸೀರಿಯಲ್‌ ಮೂಲಕ ಜನಪ್ರಿಯತೆ ಪಡೆದಿರುವ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಮ್‌ ಮೇ 12ರಂದು ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಗಲಿದ ಗೆಳತಿಯನ್ನು ನೆನಪಿಸಿಕೊಂಡು ಚಂದ್ರಕಾಂತ್‌ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಚಂದ್ರಕಾಂತ್‌ ಭಾವುಕ
ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಚಂದ್ರಕಾಂತ್‌ ಭಾವುಕ

ಬೆಂಗಳೂರು: ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿ ಪವಿತ್ರಾ ಜಯರಾಮ್‌ ಇತ್ತೀಚಿಗೆ ತ್ರಿನಯನಿ ಸೀರಿಯಲ್‌ನಲ್ಲಿ ತಿಲೋತ್ತಮ ಪಾತ್ರದಲ್ಲಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಮೇ 12ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪವಿತ್ರಾ ಜಯರಾಮ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಟಿ ಭಾನುವಾರ ಆಪ್ತರ ಜತೆಗೆ ಹೈದರಾಬಾದ್‌ನಿಂದ ಹುಟ್ಟೂರಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪವಿತ್ರಾ ಜಯರಾಮ್‌ ಜತೆಗೆ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಅಪಘಾತದಲ್ಲಿ ಗಾಯಗೊಂಡಿದ್ದು, ಗೆಳತಿಯ ಸಾವಿಗೆ ಕಣ್ಣೀರಿಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಪೋಸ್ಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪವಿತ್ರಾ ಜಯರಾಮ್‌ ನೆನೆದು ನಟ ಚಂದ್ರಕಾಂತ್‌ ಭಾವುಕ

ಪವಿತ್ರಾ ಜಯರಾಮ್‌ ಜತೆಗೆ ಕ್ಲಿಕ್ಕಿಸಿಕೊಂಡ ಕೊನೆಯ ಫೋಟೋವನ್ನು ಚಂದ್ರಕಾಂತ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಾ, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಕಾಸಾರಿ ಮಾಮಾ ಆನಿ ಪಿಲುವೀ. ನನ್ನ ಪಾವಿ ಇನ್ನಿಲ್ಲ, ದಯವಿಟ್ಟು ಹಿಂತುರುಗಿ ಬಾ. ಇದು ನಿನ್ನೊಂದಿಗೆ ತೆಗೆದ ಕೊನೆಯ ಚಿತ್ರ, ದಯವಿಟ್ಟು ಹಿಂತುರುಗಿ ಬಂದು ನನ್ನ ಕಣ್ಣೀರು ಒರೆಸು" ಎಂದು ಭಾವುಕವಾಗಿ ಬರೆದಿದ್ದಾರೆ.

ಕೈ ಮತ್ತು ತಲೆಗೆ ಬ್ಯಾಂಡೇಜ್‌ ಕಟ್ಟಿಕೊಂಡಿರುವ ಚಂದ್ರಕಾಂತ್‌ ಎನ್‌ಎಸ್‌ ಎಂಟರ್‌ಟೇನ್‌ಮೆಂಟ್‌ ಜತೆ ಮಾತನಾಡಿದ್ದು ಘಟನೆಯ ಕುರಿತು ಮಾಹಿತಿ ನೀಡಿದ್ದರು. "ನಾವು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗುತ್ತಿದ್ದೇವು. ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಆರಂಭಿಸಿದೆವು. ಬೆಂಗಳೂರಿನಲ್ಲಿ ಭಾರಿ ಮಳೆ ಬಂದ ಕಾರಣ ನಮ್ಮ ಪ್ರಯಾಣ 3 ಗಂಟೆ ವಿಳಂಬವಾಯಿತು. ನಾನು, ಪಾವಿ (ಪವಿತ್ರಾ) ಮತ್ತು ಅವಳ ಸೋದರ ಸೊಸೆ(ಸಹೋದರಿಯ ಸೊಸೆ) ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಕಾರು ಚಾಲಕ ಡ್ರೈವಿಂಗ್‌ ಮಾಡುತ್ತಿದ್ದರಿಂದ ನಾನು ನಿದ್ದೆಗೆ ಜಾರಿದೆ. ಮಧ್ಯರಾತ್ರಿ 12.30 ಗಂಟೆಗೆ ಆರ್‌ಟಿಸಿ ಬಸ್‌ ನಮ್ಮನ್ನು ಎಡಗಡೆಯಿಂದ ಹಿಂದಿಕ್ಕಿತು. ನಮ್ಮ ಚಾಲಕ ಬಲಕ್ಕೆ ಕಾರನ್ನು ತಿರುಗಿಸಿದರು. ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ" ಎಂದು ಅವರು ಹೇಳಿದ್ದಾರೆ.

ಅಂದಹಾಗೆ, ಪವಿತ್ರಾ ಜಯರಾಮ್‌ ಮತ್ತು ಚಂದ್ರಕಾಂತ್ ಇಬ್ಬರು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಇನ್ನೇನು ಶೀಘ್ರದಲ್ಲಿ ಮದುವೆ ಆಗುವವರಿದ್ದರು ಎಂದೂ ಹೇಳಲಾಗುತ್ತಿದೆ.

"ಪವಿತ್ರಾ ಜಯರಾಮ್‌ ಆಘಾತದಿಂದ ಮೃತಪಟ್ಟರು, ಗಾಯದಿಂದಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನನ್ನನ್ನು ಹೊರತುಪಡಿಸಿ ಯಾರಿಗೂ ಗಾಯವಾದಂತೆ ಕಾಣಿಸಲಿಲ್ಲ. ಅವಳು ಆಘಾತಕ್ಕೆ ಒಳಗಾಗಿದ್ದಳು. ಅವಳಿಗೆ ಸ್ಟ್ರೋಕ್‌ ಆಯಿತು. ನಾನು ಪ್ರಜ್ಞೆ ತಪ್ಪಿದೆ. ನಮ್ಮನ್ನು ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ಬೆಳಗ್ಗೆ 1 ಗಂಟೆಯಾಗಿತ್ತು. ನನಗೆ ಪ್ರಜ್ಞೆ ಬರುವಾಗ ಬೆಳಗ್ಗೆ 4 ಗಂಟೆಯಾಗಿತ್ತು. ನಂತರ ಅವಳು ಮೃತಪಟ್ಟ ವಿಷಯ ನನಗೆ ತಿಳಿಯಿತು" ಎಂದು ಅವರು ಅಪಘಾತದ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದರು.

ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ದಿವಂಗತ ಪವಿತ್ರಾ ಜಯರಾಮ್ ಬಗ್ಗೆ

ಪವಿತ್ರಾ ಜಯರಾಮ್‌ ಕನ್ನಡ ಸೀರಿಯಲ್‌ ಜೋಕಾಲಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2018 ರಲ್ಲಿ ಅವರು ತೆಲುಗು ಕಿರುತೆರೆಗೆ ನಿನ್ನೇ ಪೆಲ್ಲದಥಾ ಮೂಲಕ ಪದಾರ್ಪಣೆ ಮಾಡಿದರು. ತ್ರಿನಯನಿ ಧಾರಾವಾಹಿಯಲ್ಲಿ ತಿಲೋತ್ತಮ ಪಾತ್ರದ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.  ಚಂದ್ರಕಾಂತ್ ಕೂಡ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರ ಸಹೋದರ ಪರಶುರಾಮ್ ಪಾತ್ರದಲ್ಲಿ ನಟಿಸಿದ್ದಾರೆ.

IPL_Entry_Point