Prajwal Devaraj: ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್; ಮಾಫಿಯಾ ನಿರ್ದೇಶಕರ ಮತ್ತೊಂದು ಸಿನಿಮಾ ಘೋಷಣೆ
ಕನ್ನಡ ಸುದ್ದಿ  /  ಮನರಂಜನೆ  /  Prajwal Devaraj: ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್; ಮಾಫಿಯಾ ನಿರ್ದೇಶಕರ ಮತ್ತೊಂದು ಸಿನಿಮಾ ಘೋಷಣೆ

Prajwal Devaraj: ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್; ಮಾಫಿಯಾ ನಿರ್ದೇಶಕರ ಮತ್ತೊಂದು ಸಿನಿಮಾ ಘೋಷಣೆ

ಸ್ಯಾಂಡಲ್‌ವುಡ್‌ನ ಬ್ಯುಸಿಯಸ್ಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಹಿತ್ ಇದೀಗ ಮತ್ತೊಂದು ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ರಾಕ್ಷಸ ಹೆಸರಿನ ಈ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಲಿದ್ದಾರೆ.

Prajwal Devaraj: ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್; ಮಾಫಿಯಾ ನಿರ್ದೇಶಕರ ಮತ್ತೊಂದು ಸಿನಿಮಾ ಘೋಷಣೆ
Prajwal Devaraj: ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್; ಮಾಫಿಯಾ ನಿರ್ದೇಶಕರ ಮತ್ತೊಂದು ಸಿನಿಮಾ ಘೋಷಣೆ

Prajwal Devaraj: 'ಮಮ್ಮಿ' ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕ್ಯಾಪ್ಚರ್ ಮತ್ತು ಮಾಫಿಯಾ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಲೋಹಿತ್, ಈ ಎರಡು ಸಿನಿಮಗಳ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಬ್ಯುಸಿಯಸ್ಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಹಿತ್ ಇದೀಗ ಮತ್ತೊಂದು ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಕನ್ನಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಲೋಹಿತ್ ಹೊಸ ಸಿನಿಮಾಗೆ 'ರಾಕ್ಷಸ' ಎಂದು ಹೆಸರಿಡಲಾಗಿದೆ. ಸಂಕ್ರಾಂತಿಯ ಮುನ್ನ ದಿನ 'ರಾಕ್ಷಸ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

ಅಂದಹಾಗೆ 'ರಾಕ್ಷಸ'ನಾಗಿ ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಪ್ರಜ್ವಲ್ ದೇವರಾಜ್ ಗನ್ ಹಿಡಿದಿದ್ದಾರೆ. ಪುಟ್ಟ ಮಗು ಪ್ರಜ್ವಲ್ ಕೈ ಬೆರಳನ್ನು ಹಿಡಿದಿದೆ. ಕೈಯಲ್ಲಿ ಇರುವ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.

ಈಗಾಗಲೇ ಪ್ರಜ್ವಲ್ ಜೊತೆ 'ಮಾಫಿಯಾ' ಸಿನಿಮಾ ಮಾಡಿರುವ ಲೋಹಿತ್ ಆ ಸಿನಿಮಾ ರಿಲೀಸ್‌ಗೂ ಮೊದಲೇ 'ರಾಕ್ಷಸ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ಷಸ ಸಿನಿಮಾದ ಫಸ್ಟ್ ಲುಕ್ ಅನ್ನು ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರು ರಿಲೀಸ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 40 ಜನ ನಿರ್ದೇಶಕರು 'ರಾಕ್ಷಸ' ಸಿನಿಮಾದ ಮೊದಲ ನೋಟ ಬಿಡುಗಡೆ ಮಾಡಿರುವುದು ವಿಶೇಷ.

ಇನ್ನೂ ರಾಕ್ಷಸನ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ನಿರ್ದೇಶಕ ಲೋಹಿತ್, ಕೇವಲ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕವೇ ಕುತೂಹಲ ಹೆಚ್ಚಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಯಾರೆಲ್ಲ ಅಭಿನಯಿಸಿದ್ದಾರೆ, ಇದು ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ನೊಬಿನ್ ಪೌಲ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

Whats_app_banner