ಕನ್ನಡ ಸುದ್ದಿ  /  Entertainment  /  Sandalwood News Prajwal Devaraj Starrer Karavali Movie Team Welcomes Actor Mitra As Mahabala Mnk

ಮಾರಣಕಟ್ಟೆ ಲಾರಿ ಮುಂದೆ ಕಟ್ಟುಮಸ್ತಾದ ಕೋಣಗಳನ್ನು ಹಿಡಿದು ನಿಂತ ಮಹಾಬಲ; ‘ಕರಾವಳಿ’ ಬಳಗಕ್ಕೆ ಮಿತ್ರನ ಎಂಟ್ರಿ

ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸುತ್ತಿರುವ ಕರಾವಳಿ ಸಿನಿಮಾ ಸದ್ಯ ಕುತೂಹಲ ಮೂಡಿಸಿದೆ. ಇದೀಗ ಇದೇ ಬಳಗಕ್ಕೆ ನಟ ಮಿತ್ರ ಆಗಮನವಾಗಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾಬಲನಾಗಿ ಕರಾವಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿತ್ರ.

ಮಾರಣಕಟ್ಟೆ ಲಾರಿ ಮುಂದೆ ಕಟ್ಟುಮಸ್ತಾದ ಕೋಣ ಹಿಡಿದು ನಿಂತ ಮಹಾಬಲ; ‘ಕರಾವಳಿ’ ಬಳಗಕ್ಕೆ ಮಿತ್ರನ ಎಂಟ್ರಿ
ಮಾರಣಕಟ್ಟೆ ಲಾರಿ ಮುಂದೆ ಕಟ್ಟುಮಸ್ತಾದ ಕೋಣ ಹಿಡಿದು ನಿಂತ ಮಹಾಬಲ; ‘ಕರಾವಳಿ’ ಬಳಗಕ್ಕೆ ಮಿತ್ರನ ಎಂಟ್ರಿ

Karavali New Look: ಕರಾವಳಿ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾಗೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೇ ನಾಯಕಿ ಸಂಪದ ಅವರನ್ನು ಪರಿಚಯಿಸಿದ್ದ ಸಿನಿಮಾ ತಂಡ ಇದೀಗ ಮತ್ತೊಂದು ಮಹತ್ವದ ಪಾತ್ರದ ಪರಿಚಯ ಮಾಡಿಕೊಡುವ ಮೂಲಕ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಕರಾವಳಿ ಸಿನಿಮಾಗೆ ಖ್ಯಾತ ನಟ ಮಿತ್ರ ಎಂಟ್ರಿ ಕೊಟ್ಟಿದ್ದಾರೆ.

ಇಂದು (ಮಾ. 8) ಮಹಾಶಿವರಾತ್ರಿಯ ಪ್ರಯುಕ್ತ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ನಟ ಮಿತ್ರ ಅವರನ್ನು ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಿದೆ ಕರಾವಳಿ ಸಿನಿಮಾತಂಡ. ಸಿನಿಮಾದಲ್ಲಿ ನಾಯಕ ನಾಯಕಿಯ ಹಾಗೆ ಪೋಷಕ ಪಾತ್ರಗಳು ಸಹ ಅಷ್ಟೇ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಕರಾವಳಿಯಲ್ಲಿ ನಟ ಮಿತ್ರ ಅವರು ನಿರ್ವಹಿಸುತ್ತಿರುವ ಪಾತ್ರ ಅಷ್ಟೇ ಮಹತ್ವದಾಗಿದೆ‌. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ನಟ ಮಿತ್ರ ಎರಡು ಕೋಣಗಳನ್ನು ಹಿಡಿದು ನಿಂತಿದ್ದಾರೆ. ಅವರ ಹಿಂದೆ ಒಂದು ಲಾರಿ ನಿಂತಿದ್ದು ಅದರ ಮೇಲೆ ಮಾರಣಕಟ್ಟೆ ಎಂದು ಬರೆಯಲಾಗಿದೆ. ಈ ಲುಕ್ ನೋಡ್ತಿದ್ರೆ ಮಿತ್ರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ದುಪ್ಪಟ್ಟಾಗಿಸಿದೆ. ಮಹಾಬಲ ಪಾತ್ರದಲ್ಲಿ ಮಿತ್ರ ಮಿಂಚಲಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿರುವ ಮಿತ್ರ, 'ನನ್ನ ಸಿನಿ ಜೀವನದಲ್ಲಿಯೇ ನಾನು ಮಾಡಿರದ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಗುರುದತ್ ಗಾಣಿಗ ಅವರು ನನಗೆ ಅದ್ಭುತವಾದ ಪಾತ್ರವನ್ನು ನೀಡಿದ್ದಾರೆ. ಕರಾವಳಿ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ನನಗಿದೆ' ಎನ್ನುತ್ತಾರೆ. ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ಈ ಸಿನಿಮಾ ತಂಡ, ಕರಾವಳಿಯ ಸುತ್ತಮುತ್ತ ಶೂಟಿಂಗ್ ಮಾಡಿಕೊಳ್ಳಲಿದೆ.

ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕರಾವಳಿ ಸಿನಿಮಾ ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಇದು ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ. ಕಂಬಳ ಪ್ರಪಂಚದಲ್ಲಿ ನಡೆಯುತ್ತಿರುವ ಕಥೆ. ಈ ಸಿನಿಮಾ ಸಂಪೂರ್ಣವಾಗಿ ಕಂಬಳದ ಬಗ್ಗೆ ಇರಲಿದೆ.

ಇನ್ನು ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಸೇರಿದಂತೆ ಹಲವು ಪ್ರಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.