ಲವ್ವಿಗೆ ಬಿದ್ರು ಪ್ರಮೋದ್‌ ಶೆಟ್ಟಿ, ಲಾಫಿಂಗ್‌ ಬುದ್ಧ ಸಿನಿಮಾದ ಹಾಡಿನ ಮೋಡಿ, ರಿಷಬ್ ಶೆಟ್ರ ಸಿನಿಮಾ ಶೀಘ್ರದಲ್ಲಿ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  ಲವ್ವಿಗೆ ಬಿದ್ರು ಪ್ರಮೋದ್‌ ಶೆಟ್ಟಿ, ಲಾಫಿಂಗ್‌ ಬುದ್ಧ ಸಿನಿಮಾದ ಹಾಡಿನ ಮೋಡಿ, ರಿಷಬ್ ಶೆಟ್ರ ಸಿನಿಮಾ ಶೀಘ್ರದಲ್ಲಿ ಬಿಡುಗಡೆ

ಲವ್ವಿಗೆ ಬಿದ್ರು ಪ್ರಮೋದ್‌ ಶೆಟ್ಟಿ, ಲಾಫಿಂಗ್‌ ಬುದ್ಧ ಸಿನಿಮಾದ ಹಾಡಿನ ಮೋಡಿ, ರಿಷಬ್ ಶೆಟ್ರ ಸಿನಿಮಾ ಶೀಘ್ರದಲ್ಲಿ ಬಿಡುಗಡೆ

laughing buddha Kannada Movie: ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆಯಾಗಲಿದೆ.

ಲವ್ವಿಗೆ ಬಿದ್ರು ಪ್ರಮೋದ್‌ ಶೆಟ್ಟಿ, ಲಾಫಿಂಗ್‌ ಬುದ್ಧ ಸಿನಿಮಾದ ಹಾಡಿನ ಮೋಡಿ
ಲವ್ವಿಗೆ ಬಿದ್ರು ಪ್ರಮೋದ್‌ ಶೆಟ್ಟಿ, ಲಾಫಿಂಗ್‌ ಬುದ್ಧ ಸಿನಿಮಾದ ಹಾಡಿನ ಮೋಡಿ

ಬೆಂಗಳೂರು: ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಸಿನಿಮಾ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕಾಗಿ ಕೆ.ಕಲ್ಯಾಣ್ ಬರೆದಿರುವ "ಎಂಥಾ ಚಂದಾನೇ" ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿಷ್ಣು ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಕುರಿತು ಚಿತ್ರತಂಡದ ಸದಸ್ಯರು ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಲಾಫಿಂಗ್‌ ಬುದ್ಧ ಸಿನಿಮಾ ಬಿಡುಗಡೆ ದಿನಾಂಕ

"ನನ್ನ ಅಭಿನಯದ "ಹೀರೋ" ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ಹತ್ತಿರವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದ್ದೆ‌ವು. ಈಗ ನನ್ನಿಷ್ಟದ ಸಾಹಿತಿಗಳಲ್ಲಿ ಒಬ್ಬರಾದ ಕಲ್ಯಾಣ್ ಅವರು ಬರೆದಿರುವ ಹಾಡು ಬಿಡುಗಡೆಯಾಗಿದೆ. ಆಗಸ್ಟ್ 15 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಆಗಸ್ಟ್ 30 ರಂದು ಚಿತ್ರ ತೆರೆಗೆ ಬರಲಿದೆ‌" ಎಂದು ನಿರ್ಮಾಪಕ ರಿಷಬ್‌ ಶೆಟ್ಟಿ ತಿಳಿಸಿದ್ದಾರೆ.

ಲಾಫಿಂಗ್‌ ಬುದ್ಧ ಪಾತ್ರವರ್ಗ

" ಪೊಲೀಸ್ ಅವರ ಕುಟುಂಬ ಹಾಗು ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪೇದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೇಜು ಬೆಳವಾಡಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಮಂಚಾಲೆ ಅವರ ಪಾತ್ರ ಬಿಡುಗಡೆಯ ತನಕ ಗೌಪ್ಯವಾಗಿರುತ್ತದೆ. ಭದ್ರಾವತಿ ಹಾಗೂ ಸುತ್ತಮುತ್ತಲ್ಲಿನ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ‌ ಈ ಚಿತ್ರಕ್ಕಿದೆ. ಚೀನಾ ದೇಶದಲ್ಲಿ 'ಬುಡೈ' ಎಂಬುವನ್ನು ಒಂದು ಚೀಲದಲ್ಲಿ ಮಕ್ಕಳಿಗೆ ಬೇಕಾದ ಸಿಹಿ ಪದಾರ್ಥಗಳನ್ನು ತುಂಬಿಕೊಂಡು, ಮಕ್ಕಳನ್ನು ಹಾಗೂ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ. ನಮ್ಮ ಚಿತ್ರದ ನಾಯಕ ಗೋವರ್ಧನ ಪಾತ್ರವು ಸಹ ಇದೇ ರೀತಿ. ಹಾಗಾಗಿ "ಲಾಫಿಂಗ್ ಬುದ್ಧ" ಶೀರ್ಷಿಕೆ ಇಟ್ಟಿರುವುದಾಗಿ ನಿರ್ದೇಶಕ ಭರತ್ ರಾಜ್ ಮಾಹಿತಿ ನೀಡಿದ್ದಾರೆ.

ರಿಷಭ್ ಹಾಗೂ ಭರತ್ ರಾಜ್ ಈ ಚಿತ್ರದ ನಾಯಕ ನಾನೇ ಎಂದಾಗ ನನಗೆ ಆಶ್ಚರ್ಯವಾಯಿತು. ನಂತರ ಕಥೆ ಕೇಳಿ ಈ ಇಷ್ಟವಾಯಿತು. ಈ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ನಾನು ದಪ್ಪ ಆದ ತಕ್ಷಣ ಚಿತ್ರೀಕರಣ ಆರಂಭವಾಯಿತು. ಈ ಚಿತ್ರದ ನಂತರ ಇಪ್ಪತ್ಮೂರು ಕೆ‌ಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ. ರಿಷಭ್ ಶೆಟ್ಟಿ ಅವರು ಮಾಡಬೇಕಿದ್ದ ಪಾತ್ರವನ್ನು ನಾನು ಮಾಡಿದ್ದೇನೆ. ಆದರೆ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ ಎಂದು ದಿಗಂತ್‌ ಹೇಳಿದ್ದಾರೆ.

ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ತೇಜು ಬೆಳವಾಡಿ ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಹಾಡಿನ ಬಗ್ಗೆ ಕೆ.ಕಲ್ಯಾಣ್ ಮಾತನಾಡಿದರು. ಚಿತ್ರದ ವಿತರಕರಾದ ಕೆ‌.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.