ಬೆಂಗಳೂರು ರೆಸ್ಟೋರಂಟ್‌ನಲ್ಲಿ ಹುಟ್ಟಿದ ಕಥೆಗೆ ಸಿನಿಮಾ ರೂಪ; ಚಿಲ್ಲಿ ಚಿಕನ್‌ ಚಿತ್ರದ ಟ್ರೇಲರ್‌ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರು ರೆಸ್ಟೋರಂಟ್‌ನಲ್ಲಿ ಹುಟ್ಟಿದ ಕಥೆಗೆ ಸಿನಿಮಾ ರೂಪ; ಚಿಲ್ಲಿ ಚಿಕನ್‌ ಚಿತ್ರದ ಟ್ರೇಲರ್‌ ಬಿಡುಗಡೆ

ಬೆಂಗಳೂರು ರೆಸ್ಟೋರಂಟ್‌ನಲ್ಲಿ ಹುಟ್ಟಿದ ಕಥೆಗೆ ಸಿನಿಮಾ ರೂಪ; ಚಿಲ್ಲಿ ಚಿಕನ್‌ ಚಿತ್ರದ ಟ್ರೇಲರ್‌ ಬಿಡುಗಡೆ

ರೆಸ್ಟೋರಂಟ್‌ನಲ್ಲಿ ಕುಳಿತಾಗ ಹೊಳೆದ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಪ್ರತೀಕ್‌ ಪ್ರಜೋಶ್‌. ಆ ಚಿತ್ರವೇ ಚಿಲ್ಲಿ ಚಿಕನ್.‌ ಈಗ ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಶೀಘ್ರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

Chilli Chicken Trailer: ಬೆಂಗಳೂರು ರೆಸ್ಟೋರಂಟ್‌ನಲ್ಲಿ ಹುಟ್ಟಿದ ಕಥೆಗೆ ಸಿನಿಮಾ ರೂಪ; ಚಿಲ್ಲಿ ಚಿಕನ್‌ ಚಿತ್ರದ ಟ್ರೇಲರ್‌ ಬಿಡುಗಡೆ
Chilli Chicken Trailer: ಬೆಂಗಳೂರು ರೆಸ್ಟೋರಂಟ್‌ನಲ್ಲಿ ಹುಟ್ಟಿದ ಕಥೆಗೆ ಸಿನಿಮಾ ರೂಪ; ಚಿಲ್ಲಿ ಚಿಕನ್‌ ಚಿತ್ರದ ಟ್ರೇಲರ್‌ ಬಿಡುಗಡೆ

Chilli Chicken Trailer: ಹೋಟೆಲ್ ಕೆಲಸಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ನಿರ್ದೇಶಿಸಿರುವ ಚಿತ್ರ ಚಿಲ್ಲಿ ಚಿಕನ್. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬ ಒನ್ ಲೈನ್ ಕಥೆ ಇಟ್ಟುಕೊಂಡು ಚಿಲ್ಲಿ ಚಿಕನ್ ಸಿನಿಮಾ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ ಎಂಬುದು ವಿಶೇಷ. ಕಳೆದ ತಿಂಗಳು ಟೀಸರ್ ಬಿಡುಗಡೆ ಮಾಡಿದ್ದ ಈ ಚಿತ್ರತಂಡ ಇದೀಗ ಟ್ರೇಲರ್ ಹೊರತಂದಿದೆ. ಈ ಚಿತ್ರದ ಕಥೆ ಹುಟ್ಟಿರುವುದೇ ವಿಶೇಷವಾದ ಸ್ಥಳದಲ್ಲಿ. ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆದಿದೆ. ಅದನ್ನು ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರಿಗೆ ಹೇಳುತ್ತಾರೆ. ಅವರು ಆ ಒಂದು ಲೈನ್ ಕಥೆಯ ಮೇಲೆ ಸಾಕಷ್ಟು ವರ್ಕ್ ಮಾಡಿ ಈಗ ಸಿನಿಮಾ ಮಾಡಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ.

ಈ ಕುರಿತು ಮಾತನಾಡುವ ಸಂಗೀತ ನಿರ್ದೇಶಕರು 'ಸದ್ಯ ಎಲ್ಲೆಡೆ ನಮ್ಮ ಚಿತ್ರದ ಬಗ್ಗೆ ಜನ ಮಾತಾಡುತ್ತಿದ್ದಾರೆ. ಪ್ರತೀಕ್ ಈ ಸಿನಿಮಾ ಮಾಡಲು ನೂರು ಸಲ ಪ್ರಯತ್ನ ಮಾಡಿದ್ದು,‌ ಅವರಿಗೆ ಇದು ನೂರನೇ ಸಿನಿಮಾ ಎನ್ನಬಹುದು. ನೈಜ ಘಟನೆಯನ್ನು ಕಥೆ ಮಾಡಿ ಸಿನಿಮಾ ಮಾಡೋದು ಸುಲಭವಲ್ಲ. ಚಿತ್ರ ಚೆನ್ನಾಗಿ ಬಂದಿದೆ.‌ ಚಿತ್ರದಲ್ಲಿ 5 ಹಾಡುಗಳಿದ್ದು, ಅವುಗಳಿಗೆ ರ್ಯಾಪರ್ ಮಾರ್ಟಿನ್ ಯೋ ಸಾಹಿತ್ಯ ಬರೆದಿದ್ದಾರೆ. ಇದು ಕನ್ನಡಿಗರಷ್ಟೇ ಅಲ್ಲ ನಾನ್ ಕನ್ನಡಿಗರು ಸಹ ನೋಡಲೇಬೇಕಾದ ಚಿತ್ರ. ಇದರಲ್ಲಿ ಒಳ್ಳೇ ಕಥೆ, ಜೊತೆಗೆ ಮನರಂಜನೆ ಎಲ್ಲವೂ ಇದೆ ಎನ್ನುತ್ತಾರೆ.

ಹ್ಯೂಮರ್‌ ಜತೆಗೆ ಫ್ಯಾಮಿಲಿ ಡ್ರಾಮಾ ಸಿನಿಮಾ..

ನಿರ್ದೇಶಕ ಪ್ರತೀಕ್ ಪ್ರಜೋಶ್. ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ರಿಲೀಸ್‌ ಆಗಲಿದೆ. ನಿಮ್ಮಗಳ ಸಹಕಾರವಿರಲಿ ಎಂದಷ್ಟೇ ಹೇಳಿದರು. ಈ ಚಿತ್ರದ ನಾಯಕನಾಗಿ ಬಿ.ವಿ. ಶೃಂಗಾ ಅಭಿನಯಿಸಿದ್ದು, ಪಾತ್ರದ ಬಗ್ಗೆ ಮಾಹಿತಿ ನೀಡುವ ಅವರು 'ನಾವೆಲ್ಲಾ ಇಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ. ನಿಮ್ಮಗಳ ಸಹಕಾರ ಬೇಕು. ನಾನಿಲ್ಲಿ ರೆಸ್ಟೋರೆಂಟ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಂದಿನ ಜನರೇಷನ್‌ಗೆ ಹೇಳಬೇಕಾದ ವಿಷಯವಿದೆ ಅನಿಸಿತು. ಇದರಲ್ಲಿ ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಚೆನ್ನಾಗಿ ಬಳಸಿದ್ದಾರೆ" ಎಂದರು ಬಿ.ವಿ. ಶೃಂಗಾ.

ವಿವಿಧ ಭಾಷೆ ಕಲಾವಿದರ ಸಮಾಗಮ

ಮುಂದುವರಿದು ಮಾತನಾಡುವ ಅವರು, "ನನ್ನದಿಲ್ಲಿ ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದು, ಚೈನೀಸ್ ರೆಸ್ಟೋರೆಂಟ್ ಮಾಡುವ ಆಸೆಯಿಂದ ಹೇಗೆಲ್ಲಾ ಅಲೆದಾಡುತ್ತಾನೆ ಎಂಬುದನ್ನು ನೋಡಬಹುದು' ಎಂದರು. ನಟಿ ನಿತ್ಯಶ್ರೀ 'ನಂಗೆ ಕನ್ನಡದಲ್ಲಿ ಇದು 2ನೇ ಸಿನಿಮಾ. ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಂದಿಷ್ಟು ಸಿನಿಮಾ ಮಾಡಿದ್ದೇನೆ. ಚಿತ್ರಕ್ಕೆ ತಂಡದ ಶ್ರಮ ತುಂಬಾ ಇದ್ದು ಎಲ್ಲಾ ಕಲಾವಿದರು ಭಾಷೆ ಕಲಿತು ಅಭಿನಯ ಮಾಡುವ ಜೊತೆಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ' ಎಂದು ಹೇಳಿದರು.

ಕಾವೇರಿ ಚಿತ್ರಮಂದಿರಕ್ಕೆ ತಂಡದ ಟ್ರಿಬ್ಯೂಟ್‌

ಇದೇ ಸಂದರ್ಭದಲ್ಲಿ ಚಿತ್ರದ ನಾಯಕಿ ರಿನಿ, ಮಣಿಪುರ ನಟ ಬಿಜು ತಾಂಜಿಂ, ಅಸ್ಸಾಂ ಕಲಾವಿದ ಹಿರಾಕ್ ಸೋನಾವಾಲ್, ಉತ್ತರಕಾಂಡದ ನಟ ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಈಗಾಗಲೇ ಈ ಚಿತ್ರವನ್ನು ನೋಡಿದ ನಟ ರಮೇಶ್‌ ಅರವಿಂದ್, ಹೇಮಂತ್ ರಾವ್ ಹಾಗೂ ಬೇರೆ ಭಾಷೆಯ ಪ್ರಮುಖರು ಮೆಚ್ಚಿದ್ದಾರೆ. ಈ ತಂಡ ಬೆಂಗಳೂರಿನಲ್ಲಿ ಒಡೆದು ಹಾಕಿರುವ ಕಾವೇರಿ ಥಿಯೇಟರ್ ಬಗ್ಗೆ ಸಾಂಗ್ ಮಾಡಿ ಅದನ್ನು ಟ್ರಿಬ್ಯೂಟ್ ಕೊಡುತ್ತಿದೆ. ಈ ಗೀತೆಗೆ ಪತ್ರಕರ್ತ ಶ್ರೀಧರ್ ಶಿವಮೊಗ್ಗ ಸಾಹಿತ್ಯ ಬರೆದಿದ್ದಾರೆ.

Whats_app_banner