ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಪೂರ್ತಿ ಅಪ್ಪು ಇದ್ದಾರೆ; 'ಬಾನ ದಾರಿಯಲಿ' ಪ್ರೀಮಿಯರ್‌ ಶೋ ನೋಡಿ ಸೆಲೆಬ್ರಿಟಿಗಳು ಹೇಳಿದ್ದಿಷ್ಟು

ಸಿನಿಮಾ ಪೂರ್ತಿ ಅಪ್ಪು ಇದ್ದಾರೆ; 'ಬಾನ ದಾರಿಯಲಿ' ಪ್ರೀಮಿಯರ್‌ ಶೋ ನೋಡಿ ಸೆಲೆಬ್ರಿಟಿಗಳು ಹೇಳಿದ್ದಿಷ್ಟು

ಸಿನಿಮಾ ಬಹಳ ವಿಭಿನ್ನವಾಗಿದೆ. ಕೀನ್ಯಾವನ್ನು ಚೆನ್ನಾಗಿ ತೋರಿಸಲಾಗಿದೆ. ನಾವೇ ಕೀನ್ಯಾಗೆ ಹೋಗಿ ಬಂದಂತೆ ಆಯ್ತು. ಒಟ್ಟಿನಲ್ಲಿ ಅಪ್ಪ ಮಗನ ಪ್ರೀತಿಯ ದೃಶ್ಯಗಳು ಹೃದಯಕ್ಕೆ ಬಹಳ ಹತ್ತಿರವಾಗುತ್ತಿದೆ.

ಬಾನ ದಾರಿಯಲಿ ಸಿನಿಮಾ ಸೆಲೆಬ್ರಿಟಿ ರಿವ್ಯೂ
ಬಾನ ದಾರಿಯಲಿ ಸಿನಿಮಾ ಸೆಲೆಬ್ರಿಟಿ ರಿವ್ಯೂ

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ 'ಬಾನ ದಾರಿಯಲಿ' ಸಿನಿಮಾ ಇಂದು ತೆರೆ ಕಂಡಿದೆ. ಆದರೆ ಬುಧವಾರವೇ ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರೀಮಿಯರ್‌ ಶೋ ಏರ್ಪಡಿಸಿತ್ತು. ಸಾಧು ಕೋಕಿಲ, ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ , ಶರಣ್‌ ಹಾಗೂ ಇನ್ನಿತರರು ಸಿನಿಮಾ ನೋಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿನಿಮಾ ನೋಡಿದ ಎಲ್ಲಾ ಸೆಲೆಬ್ರಿಟಿಗಳು ಚಿತ್ರವನ್ನು ಮೆಚ್ಚಿದ್ಧಾರೆ. ಪ್ರೀತಂ ಗುಬ್ಬಿ ನಿರ್ದೇಶನ, ರಂಗಾಯಣ ರಘು, ರುಕ್ಮಿಣಿ ವಸಂತ್‌, ಗಣೇಶ್‌ ನಟನೆಯನ್ನು ಕೊಂಡಾಡಿದ್ದಾರೆ. ಸಿನಿಮಾ ನೋಡಿ ಯಾವ ಯಾವ ಸೆಲೆಬ್ರಿಟಿಗಳು ಏನಂದ್ರು? ಇಲ್ಲಿದೆ ನೋಡಿ ವಿವರ

ಸಾಧು ಕೋಕಿಲ

ಅಕ್ಟೋಬರ್‌ ಬಂತು, ಈ ತಿಂಗಳು ನಾವು ಅಪ್ಪು ಸರ್‌ನ ಕಳೆದುಕೊಂಡಿದ್ದ ತಿಂಗಳು. ಆದರೆ 'ಬಾನ ದಾರಿಯಲಿ' ಸಿನಿಮಾ ಪೂರ್ತಿ ಅಪ್ಪು ಸರ್‌ ಇದ್ದಾರೆ. ಅಪ್ಪು ಅವರ ಬಾನ ದಾರಿಯಲಿ ಸೂರ್ಯ ಜಾರಿ ಹೋದ ಹಾಡನ್ನು ಬಹಳ ಚೆನ್ನಾಗಿ ಕನೆಕ್ಟ್‌ ಮಾಡಿದ್ದಾರೆ. ಚಿತ್ರದಲ್ಲಿ ತಂದೆ ಮಗ ಸೇರಿದಂತೆ ಎಲ್ಲಾ ಸಂಬಂಧಗಳ ಬಾಂಧವ್ಯವನ್ನು ಬಹಳ ಚೆನ್ನಾಗಿ ಕಟ್ಟಿಕೊಡಲಾಗಿದೆ. ಕ್ಲೈಮಾಕ್ಸ್‌ ಬಹಳ ಇಷ್ಟ ಆಯ್ತು. ಪ್ರೀತಂ ಗುಬ್ಬಿ ಸಿನಿಮಾವನ್ನು ಬಹಳ ಚೆನ್ನಾಗಿ ಪ್ರೆಸೆಂಟ್‌ ಮಾಡಿದ್ದಾರೆ.

ಮಿಲನಾ ನಾಗರಾಜ್‌

'ಬಾನ ದಾರಿಯಲಿ' ಟೈಟಲ್‌ನಂತೆಯೇ ಸಿನಿಮಾ ಕೂಡಾ ಬಹಳ ಸುಂದರವಾಗಿದೆ. ಚಿತ್ರದಲ್ಲಿ ಎಲ್ಲರ ಆಕ್ಟಿಂಗ್‌ ಬಹಳ ಇಷ್ಟ ಆಯ್ತು. ಅದರಲ್ಲೂ ಗಣೇಶ್‌ ಅವರ ನಟನೆ ಚೆನ್ನಾಗಿದೆ. ಚಿತ್ರವನ್ನು ಕೀನ್ಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಯಾರೂ ಸಿನಿಮಾ ಮಿಸ್‌ ಮಾಡಿಕೊಳ್ಳಬೇಡಿ, ಎಲ್ಲರೂ ನೋಡಿ.

ಡಾರ್ಲಿಂಗ್‌ ಕೃಷ್ಣ

ಗಣೇಶ್‌ ಅವರ ಸಿನಿಮಾಗಳಲ್ಲಿ ನಾನು ಬಹಳ ಇಷ್ಟಪಡುವುದು ಅವರ ಎಮೋಷನಲ್‌ ಹಾಗೂ ಕಾಮಿಡಿ ದೃಶ್ಯಗಳು. ಚಿತ್ರದಲ್ಲಿ ಎಮೋಷನ್ಸ್‌ ಹೆಚ್ಚಾಗಿದೆ, ರಂಗಾಯಣ ರಘು ಹಾಗೂ ಗಣೇಶ್‌ ಅವರ ಬಾಂಧವ್ಯ ಚೆನ್ನಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನ ಅದ್ಭುತವಾಗಿದೆ. ಚಿತ್ರದಲ್ಲಿ ಕೀನ್ಯಾವನ್ನು ಚೆನ್ನಾಗಿ ತೋರಿಸಲಾಗಿದೆ, ಎಮೋಷನ್ಸ್‌ ಇಷ್ಟಪಡುವವರು ತಪ್ಪದೆ ಸಿನಿಮಾ ನೋಡಿ.

ಶರಣ್‌

'ಬಾನ ದಾರಿಯಲ್ಲಿ' ಹೆಸರೇ ಸೊಗಸಾಗಿದೆ. ಈ ಹೆಸರನ್ನು ಕಥೆಗೆ ಚೆನ್ನಾಗಿ ಕನೆಕ್ಟ್‌ ಮಾಡಲಾಗಿದೆ. ಚಿತ್ರರಂಗದಲ್ಲಿ ಕೆಲವೊಂದು ಕಾಂಬಿನೇಷನ್‌ಗಳನ್ನು ಮರೆಯಲಾಗುವುದಿಲ್ಲ. ಅದೇ ರೀತಿ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಷನ್‌ ಕೂಡಾ. ಕೀನ್ಯಾವನ್ನು ಬಹಳ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಗಣೇಶ್‌ ಆಕ್ಟಿಂಗನ್ನು ಒಂದೆರಡು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ನಿಜಕ್ಕೂ ಸಿನಿಮಾ ನೋಡಿ ಗೂಸ್‌ ಬಂಪ್ಸ್‌ ಬಂತು. ಸಿನಿಮಾ ನೋಡಿದ ಎಲ್ಲರ ಕಣ್ಣು ಒದ್ದೆಯಾಗಿತ್ತು. ಸಿನಿಮಾ ಬಹಳ ಇಷ್ಟ ಆಯ್ತು. ಇಂತಹ ಸಿನಿಮಾಗಳು ಮತ್ತಷ್ಟು ಬರಲಿ.

ಕೃಷಿ ತಾಪಂಡ

ನನ್ನ ಖುಷಿ ನೋಡಿಯೇ ನಿಮಗೆ ಸಿನಿಮಾ ಹೇಗಿರಬಹುದು ಎಂದು ಅರ್ಥವಾಗಬಹುದು. 'ಬಾನ ದಾರಿಯಲಿ' ಸಿನಿಮಾ ನೋಡಿ ನನಗೆ ಮುಂಗಾರುಮಳೆ ನೆನಪಾಯ್ತು. ಇದೊಂದು ಅಲ್ಟಿಮೇಟ್‌ ಲವ್‌ ಸ್ಟೋರಿ. ರಂಗಾಯಣ ರಘು ಅವರ ಆಕ್ಟಿಂಗ್‌ ಬಹಳ ಇಷ್ಟ ಆಯ್ತು. ಅವರ ಇದುವರೆಗಿನ ಸಿನಿಮಾಗಳಲ್ಲಿ ಇದು ವಿಭಿನ್ನ, ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಎಲ್ಲರೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ

ಪ್ರಿಯಾಂಕಾ ಉಪೇಂದ್ರ

ಸಿನಿಮಾ ಬಹಳ ವಿಭಿನ್ನವಾಗಿದೆ. ಕೀನ್ಯಾವನ್ನು ಚೆನ್ನಾಗಿ ತೋರಿಸಲಾಗಿದೆ. ನಾವೇ ಕೀನ್ಯಾಗೆ ಹೋಗಿ ಬಂದಂತೆ ಆಯ್ತು. ಒಟ್ಟಿನಲ್ಲಿ ಅಪ್ಪ ಮಗನ ಪ್ರೀತಿಯ ದೃಶ್ಯಗಳು ಹೃದಯಕ್ಕೆ ಬಹಳ ಹತ್ತಿರವಾಗುತ್ತಿದೆ. ನಾನೂ ಕೂಡಾ ನನ್ನ ತಂದೆಗೆ ಬಹಳ ಕ್ಲೋಸ್‌ ಇದ್ದೆ, ಸಿನಿಮಾ ವೈಯಕ್ತಿಕವಾಗಿ ನನಗೂ ಕನೆಕ್ಟ್‌ ಆಯ್ತು. ರಂಗಾಯಣ ರಘು ಅವರ ನಟನೆ ಬಗ್ಗೆ ಹೇಳುವುದೇ ಬೇಡ, ಚಿತ್ರತಂಡಕ್ಕೆ ಒಳ್ಳೆಯದಾಗಲಿ.

ಇನ್ನೂ ಅನೇಕ ಸೆಲೆಬ್ರಿಟಿಗಳು 'ಬಾನ ದಾರಿಯಲಿ' ಸಿನಿಮಾ ನೋಡಿ ಮೆಚ್ಚಿದ್ದಾರೆ. ಚಿತ್ರವನ್ನು ಶ್ರೀವಾರಿ ಟಾಕೀಸ್‌ ಬ್ಯಾನರ್‌ ಅಡಿಯಲ್ಲಿ ಸಂತೋಷ್‌ ಮತ್ತು ವೇಣು ನಿರ್ಮಿಸಿದ್ದು ಪ್ರೀತಂ ಗುಬ್ಬಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದು ರೀಷ್ಮಾ ನಾಣಯ್ಯ, ರುಕ್ಮಿಣಿ ವಸಂತ್‌, ರಂಗಾಯಣ ರಘು ಹಾಗೂ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024