‘ನಿನ್ನ ಮಕ್ಕಳು ಉಗ್ರಗಾಮಿಗಳಾಗುತ್ತಾರೆ’ ಮುಸ್ತಫಾ ಜತೆ ವಿವಾಹವಾಗಿದ್ದಕ್ಕೆ ಪ್ರಿಯಾಮಣಿ ವಿರುದ್ಧ ದ್ವೇಷದ ಕಾಮೆಂಟ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ‘ನಿನ್ನ ಮಕ್ಕಳು ಉಗ್ರಗಾಮಿಗಳಾಗುತ್ತಾರೆ’ ಮುಸ್ತಫಾ ಜತೆ ವಿವಾಹವಾಗಿದ್ದಕ್ಕೆ ಪ್ರಿಯಾಮಣಿ ವಿರುದ್ಧ ದ್ವೇಷದ ಕಾಮೆಂಟ್ಸ್‌

‘ನಿನ್ನ ಮಕ್ಕಳು ಉಗ್ರಗಾಮಿಗಳಾಗುತ್ತಾರೆ’ ಮುಸ್ತಫಾ ಜತೆ ವಿವಾಹವಾಗಿದ್ದಕ್ಕೆ ಪ್ರಿಯಾಮಣಿ ವಿರುದ್ಧ ದ್ವೇಷದ ಕಾಮೆಂಟ್ಸ್‌

ಸಿನಿಮಾ ಜಗತ್ತಿನಲ್ಲಿ ಅನ್ಯ ಧರ್ಮದವರನ್ನು ಮದುವೆಯಾಗುವುದು, ಪ್ರೀತಿಸುವುದು ಸಾಮಾನ್ಯ. ಇಂಡಸ್ಟ್ರಿಯಲ್ಲಿ ಧರ್ಮದ ಗೋಡೆ ಒಡೆದು ಮನೆ ಕಟ್ಟಿಕೊಂಡಿರುವ ಇಂತಹ ಜೋಡಿಗಳು ಸಾಕಷ್ಟಿವೆ. ಆ ಪೈಕಿ ಪ್ರಿಯಾಮಣಿ ಸಹ ಒಬ್ಬರು. ಈಗ ಇದೇ ನಟಿ ತಾವು ಎದುರಿಸಿದ ಟ್ರೋಲ್‌ ಬಗ್ಗೆ ಮಾತನಾಡಿದ್ದಾರೆ.

ಮುಸ್ತಫಾ ರಾಜ್‌ ಜತೆ ವಿವಾಹವಾಗಿದ್ದಕ್ಕೆ ಪ್ರಿಯಾಮಣಿ ವಿರುದ್ಧ ದ್ವೇಷದ ಕಾಮೆಂಟ್ಸ್‌
ಮುಸ್ತಫಾ ರಾಜ್‌ ಜತೆ ವಿವಾಹವಾಗಿದ್ದಕ್ಕೆ ಪ್ರಿಯಾಮಣಿ ವಿರುದ್ಧ ದ್ವೇಷದ ಕಾಮೆಂಟ್ಸ್‌

Priyamani opens up about Interfaith Marriage: ಬಹುಭಾಷಾ ನಟಿ ಪ್ರಿಯಾಮಣಿ ಒಂದೇ ಭಾಷೆಗೆ ಸೀಮಿತವಾಗದೆ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ. ಮನೋಜ್ ಬಾಜಪೇಯಿ ಜೊತೆಗಿನ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯೊಂದಿಗೆ ಬಾಲಿವುಡ್‌ನಲ್ಲಿ ಹೆಚ್ಚು ಕ್ರೇಜ್‌ ಸೃಷ್ಟಿಸಿಕೊಂಡರು. ಸದ್ಯ ತಮಿಳಿನ ಕೊಟೇಶನ್ ಗ್ಯಾಂಗ್ ಸಿನಿಮಾದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಸಿನಿಮಾ ತಮಿಳಿನ ಜತೆಗೆ ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ದಳಪತಿ ವಿಜಯ್ ಅವರ ಕೊನೆಯ ತಮಿಳು ಚಿತ್ರದಲ್ಲಿಯೂ ನಟಿಸಲು ಸಹಿ ಹಾಕಿದ್ದಾರೆ. ಈ ನಡುವೆಯೇ ತಮ್ಮ ಅನ್ಯಧರ್ಮೀಯ ವಿವಾಹದ ಬಗ್ಗೆ ಮೌನ ಮುರಿದಿದ್ದಾರೆ.

ಸಿನಿಮಾ ಜಗತ್ತಿನಲ್ಲಿ ಅನ್ಯ ಧರ್ಮದವರನ್ನು ಮದುವೆಯಾಗುವುದು, ಪ್ರೀತಿಸುವುದು ಸಾಮಾನ್ಯ. ಇಂಡಸ್ಟ್ರಿಯಲ್ಲಿ ಧರ್ಮದ ಗೋಡೆ ಒಡೆದು ಮನೆ ಕಟ್ಟಿಕೊಂಡಿರುವ ಇಂತಹ ಜೋಡಿಗಳು ಸಾಕಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅನ್ಯ ಧರ್ಮದ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದರು. ಅವರ ಮದುವೆಯ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಸಿನ್ಹಾ ಕುಟುಂಬವನ್ನು ಟ್ರೋಲ್‌ ಸಹ ಮಾಡಲಾಗಿತ್ತು. ಈ ಸರಣಿಯಲ್ಲಿ, ಸೌತ್‌ ನಟಿ ಪ್ರಿಯಾಮಣಿ ಅವರ ಹೆಸರೂ ಸೇರಿದೆ. ಕೆಲ ವರ್ಷಗಳ ಹಿಂದೆಯೇ ಅನ್ಯಧರ್ಮಿಯನನ್ನು ಅವರು ಮದುವೆಯಾಗಿದ್ದರು.

ಇತ್ತೀಚೆಗೆ ಫಿಲ್ಮ್‌ಫೇರ್ ಸಮಾರಂಭದಲ್ಲಿ ಭಾಗವಹಿಸಿ, ಬಳಿಕ ವಿಶೇಷ ಸಂದರ್ಶನದಲ್ಲಿ ಪ್ರಿಯಾಮಣಿ ಮಾತನಾಡಿದ್ದಾರೆ. ಅನ್ಯ ಧರ್ಮದಲ್ಲಿ ಮದುವೆಯ ಕುರಿತು, ತಾವು ಎದುರಿಸಿದ ಟೀಕೆಗಳ ಬಗ್ಗೆ ಹೇಳಿಕೊಂಡಿದ್ದಾರೆ. "ನಾನು ಹುಟ್ಟಿನಿಂದ ಹಿಂದೂ. ಯಾವಾಗಲೂ ನಾನು ಹಿಂದೂ ಧರ್ಮವನ್ನೇ ಅನುಸರಿಸುತ್ತೇನೆ. ಈದ್ ಆಚರಣೆಯ ಫೋಟೋಗಳನ್ನು ಹಂಚಿಕೊಂಡ ಬಳಿಕ, ಜನರು ನವರಾತ್ರಿಯ ಫೋಟೋವನ್ನು ಏಕೆ ಹಂಚಿಕೊಳ್ಳಲಿಲ್ಲ? ಎಂದು ಟ್ರೋಲ್ ಮಾಡುತ್ತಾರೆ. ಅಷ್ಟೇ ಅಲ್ಲ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ್ರಾ? ಎಂದೂ ಕಾಮೆಂಟ್‌ ಮಾಡುತ್ತಾರೆ" ಎಂದಿದ್ದಾರೆ ಪ್ರಿಯಾಮಣಿ.

ಮುಂದುವರಿದು ಮಾತನಾಡುವ ಪ್ರಿಯಾಮಣಿ, "ನಮ್ಮ ಮದುವೆಯ ನಂತರ, ನಾನು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದೇನೆ. ಬೇರೆ ಧರ್ಮದವರನ್ನು ಮದುವೆಯಾಗಿದ್ದಕ್ಕೆ ಅನೇಕರು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಟೀಕೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಇಂಡಸ್ಟ್ರಿಯಲ್ಲಿ ಜಾತಿ ಬೇಧವಿಲ್ಲದೆ ಮದುವೆಯಾಗಿರುವ ತಾರೆಯರಿದ್ದಾರೆ. ಆದರೆ, ನನ್ನನ್ನು ಟಾರ್ಗೆಟ್ ಮಾಡಿ ಹೆಚ್ಚು ಟೀಕೆ ಮಾಡುವುದು ಏಕೆ? ಎಂದಿದ್ದಾರೆ.

ಯಾರಾದರೂ ಅನ್ಯ ಧರ್ಮೀಯನನ್ನು ಮದುವೆಯಾಗಿದ್ದಾರೆ ಎಂದ ಮಾತ್ರಕ್ಕೆ, ಅವರು ಧರ್ಮ ಬದಲಾಯಿಸಿದ್ದಾರೆ ಎಂದು ಅರ್ಥವಲ್ಲ. ಇದರಲ್ಲಿ ದ್ವೇಷ ಹರಡಲು ಏನಿದೆ? ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳೇ ಕೇಳಿಬರುತ್ತಿವೆ. ನಿಮ್ಮ ಮಕ್ಕಳು ಟೆರರಿಸ್ಟ್‌ ಆಗುತ್ತಾರೆ ಎಂದೂ ಕಾಮೆಂಟ್‌ ಹಾಕಿದ್ದಾರೆ. ಒಬ್ಬ ಸೆಲೆಬ್ರಿಟಿಯನ್ನು ಯಾಕೆ ಹೀಗೆಲ್ಲಾ ಟಾರ್ಗೆಟ್ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪ್ರಿಯಾಮಣಿ ಬೇಸರದಲ್ಲಿ ಹೇಳಿಕೊಂಡಿದ್ದಾರೆ.

Whats_app_banner