ಪೃಥ್ವಿ ಅಂಬಾರ್‌, ಪ್ರಮೋದ್‌ ಜೋಡಿಯ Bhuvanam Gaganam ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್-sandalwood news pruthvi ambaar pramod starrer bhuvanam gaganam movie title track released by kichcha sudeep mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಪೃಥ್ವಿ ಅಂಬಾರ್‌, ಪ್ರಮೋದ್‌ ಜೋಡಿಯ Bhuvanam Gaganam ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್

ಪೃಥ್ವಿ ಅಂಬಾರ್‌, ಪ್ರಮೋದ್‌ ಜೋಡಿಯ Bhuvanam Gaganam ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್

ಹೊಸ ಪ್ರತಿಭೆಗಳಿಗೆ ಸದಾ ಬೆನ್ನುತಟ್ಟುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.

ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಅಂಬಾರ್ ಚಿತ್ರಕ್ಕೆ‌ ನಟ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.
ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಅಂಬಾರ್ ಚಿತ್ರಕ್ಕೆ‌ ನಟ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.

Bhuvanam Gaganam Movie: ಭುವನಂ ಗಗನಂ ಸಿನಿಮಾ ತನ್ನ ಟೀಸರ್‌ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಕ್ಲಾಸ್ ಕಥೆಗಳ ಮೂಲಕ ಗಮನಸೆಳೆದ ಪೃಥ್ವಿ ಅಂಬಾರ್ ಹಾಗೂ ಮಾಸ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ಪ್ರಮೋದ್, ಮೊದಲ ಬಾರಿ ಒಟ್ಟಿಗೆ ತೆರೆಹಂಚಿಕೊಂಡಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಇದೀಗ ಅನಾವರಣಗೊಂಡಿದೆ. ಅದೂ ಕಿಚ್ಚ ಸುದೀಪ್‌ ಅವರ ಕೈಯಿಂದ ಎಂಬುದು ವಿಶೇಷ.

ಗಿರೀಶ್ ಮೂಲಿಮನಿ ಭುವನಂ ಗಗನಂ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದು, ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರು ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್‌ವಿಸಿ ಫಿಲಂಸ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಭುವನಂ ಗಗನಂ ಚಿತ್ರಕ್ಕೆ ಹಣ ಹಾಕಿದ್ದಾರೆ.

ಹೊಸ ಪ್ರತಿಭೆಗಳಿಗೆ ಸದಾ ಬೆನ್ನುತಟ್ಟುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ, ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಭುವನಂ ಗಗನಂ ಎಂದು ಶುರುವಾಗುವ ಹಾಡಿಗೆ ಅನಿರುದ್ಧ ಶಾಸ್ತ್ರೀ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಅರ್ಮಾನ್ ಮಲ್ಲಿಕ್ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಗುಮ್ಮಿನೇನಿ ವಿಜಯ್ ಈ ಮಧುರ ಗೀತೆಗೆ ಟ್ಯೂನ್ ಹಾಕಿದ್ದಾರೆ. ಭುವನಂಗಗನಂ ಟೈಟಲ್ ಟ್ರ್ಯಾಕ್ ನಲ್ಲಿ ಪ್ರಮೋದ್ ಹಾಗೂ ರೆಚೆಲ್ ಡೇವಿಡ್ ಜೋಡಿಯ ಕೆಮಿಸ್ಟ್ರೀ ನೋಡುಗರಿಗೆ ಇಷ್ಟವಾಗುತ್ತದೆ.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಚಿತ್ರವಾಗಿದೆ. ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಲ್ಲಿ ಪ್ರಮೋದ್‌ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಪ್ರಚಾರ ಅಖಾಡಕ್ಕೆ ಇಳಿದಿರುವ ಚಿತ್ರತಂಡ ಆದಷ್ಟು ಬೇಗ ಭುವನಂ ಗಗನಂ ಸಿನಿಮಾ ತೆರೆಗೆ ತರಲಿದೆ.