ಕನ್ನಡ ಸುದ್ದಿ  /  Entertainment  /  Sandalwood News Puneeth Rajkumar Birthday Memory Ashiwini Shivarajkumar Raghavendra Rishab Shetty Namratha Gowda Pcp

Puneeth Rajkumar: ಎಂದೆಂದಿಗೂ ನಮ್ಮ ಹೃದಯದಲ್ಲಿ ಅಪ್ಪು ಅಂದ್ರು ಅಶ್ವಿನಿ, ಶಿವಣ್ಣ, ರಾಘಣ್ಣ; ನಮ್ರತಾ ಗೌಡ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆನಪಿನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದೇ ಸಮಯದಲ್ಲಿ ಅಶ್ಚಿನಿ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ರಾಜ್‌ಕುಮಾರ್‌ ಕುಟುಂಬ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ನಮ್ರತಾ ಗೌಡ ಸಮಾಜಮುಖಿ ಹೆಜ್ಜೆ ಇಟ್ಟಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ
ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ

ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪಿನ ಈ ಸಂದರ್ಭದಲ್ಲಿ ಕನ್ನಡದ ಹಲವು ಸೆಲೆಬ್ರಿಟಿಗಳು ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಶಿವ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಅಪ್ಪು ಕುಟುಂಬವಂತೂ "ಎಂದೆಂದಿಗೂ ನಮ್ಮ ಹೃದಯದಲ್ಲಿ" ಎಂದು ಭಾವುಕರಾಗಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಸೇರಿದಂತೆ ಕನ್ನಡದ ಹಲವು ನಟರು ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ ಸ್ಪರ್ಧಿ, ನಟಿ ನಮ್ರತಾ ಗೌಡ ಸೇರಿದಂತೆ ಒಂದಿಷ್ಟು ಜನರು ಅಪ್ಪು ಜನ್ಮದಿನವನ್ನು ಸ್ಪೂರ್ತಿ ದಿನವಾಗಿಟ್ಟುಕೊಂಡು ಸಮಾಜಕ್ಕೆ ಒಳಿತಾಗುವ ಕೆಲಸಕ್ಕೆ ಮುಂದಾಗಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಸುಂದರವಾದ ಒಂದು ಕವರ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. "ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ... ಎಂದೆಂದಿಗೂ ನಮ್ಮ ಹೃದಯದಲ್ಲಿ" ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪತಿಯನ್ನು ನೆನಪಿಸಿಕೊಂಡು ಹುಟ್ಟುಹಬ್ಬದ ಶುಭಾಶಯದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‌ಗಳಿಗೆ ಅಭಿಮಾನಿಗಳು ""ಅಪ್ಪು" ಗುಣದಲ್ಲಿ "ಶ್ರೀಮಂತ", ಅವರ ನಗುವನ್ನು ಕಂಡ ನಾವೇ "ಪುನೀತ", ಅವರು ನಮ್ಮ ಮನದಲ್ಲಿ ಎಂದೆಂದಿಗೂ "ಜೀವಂತ"! "ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಸಹೋದರನ ನೆನೆದ ಶಿವಣ್ಣ, ರಾಘಣ್ಣ

ತಮ್ಮ ಮುದ್ದಿನ ಸಹೋದರನ ನೆನಪಿನಲ್ಲಿ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಇನ್‌ಸ್ಟಾಗ್ರಾಂನಲ್ಲಿ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಬೇಕು ನಿನ್ನ ಅಪ್ಪುಗೆ… ಒಂದೇ ಒಂದು ಅಪ್ಪುಗೆ… ಎಂದು ಯುವ ರಾಜ್‌ಕುಮಾರ್‌ ಪೋಸ್ಟ್‌ ಮಾಡಿದ್ದಾರೆ.

ರಿಷಬ್‌ ಶೆಟ್ಟಿ, ಸಪ್ತಮಿ ಗೌಡ, ಅನುಶ್ರೀ

ಅಪ್ಪು ಅಭಿಮಾನಿಯಾಗಿ ಅನುಶ್ರಿ ಆಂಕರ್‌ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡಿದ್ದಾರೆ. “ನಿಮ್ಮ ಅಪ್ಪುಗೆ ಇಲ್ಲದೆ ಬದುಕು ಹೇಗೆ ಆಗುತ್ತೆ ಪೂರ್ತಿ ? ಬದುಕಲು ನಿಮ್ಮ ಅಭಿಮಾನಿಗಳಿಗೆ ನೀವೇ ಸ್ಫೂರ್ತಿ .... ವಿಶ್ವ ಮಾನವನ ಜನ್ಮ ಸಂಭ್ರಮಿಸೋಣ ....ಸ್ಪೂರ್ತಿ ದಿನವಾಗಿ ಆಚರಿಸೋಣ ...” ಎಂದು ಬರೆದಿದ್ದಾರೆ.

"ನಮ್ಮೆಲ್ಲರ ಹೃದಯಗಳಲ್ಲಿ ಸದಾ ನೆಲೆಸಿರುವ ಪರಮಾತ್ಮ, ನಗುಮುಖದ ಸರದಾರ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಸರ್‌ ಅವರ ನೆನಪಿನಲ್ಲಿ ನಾವು.." ಎಂದು ಕಾಂತಾರ ನಟ ರಿಷಬ್‌ ಶೆಟ್ಟಿ ದಿವಂಗತ ಪುನೀತ್‌ ರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ನಾಯಕಿ ಸಪ್ತಮಿ ಗೌಡ ಕೂಡ ಅಪ್ಪುವಿಗೆ ಹುಟ್ಟುಹಬ್ಬದ ಶುಭಾಶಯವನ್ನು ಹೇಳಿದ್ದಾರೆ.

ನಮ್ರತಾ ಗೌಡ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪಿನಲ್ಲಿ ಬಿಗ್‌ಬಾಸ್‌ ಕನ್ನಡ ಸ್ಪರ್ಧಿ, ಕಿರುತೆರೆ ನಟಿ ನಮ್ರತಾ ಗೌಡ ಸಮಾಜ ಮುಖಿ ಕಾರ್ಯಕ್ರಮ ಆರಂಭಿಸಿದ್ದಾರೆ. ಬಡವರಿಗೆ, ನಿರ್ಗತಿಕರ ಹೊಟ್ಟೆ ತುಂಬಿಸುವಂತಹ ಒಂದು ಹೆಜ್ಜೆ ಇಟ್ಟಿದ್ದಾರೆ. ಪ್ರತಿತಿಂಗಳು ಹದಿನೇಳನೇ ತಾರೀಕು ಈ ರೀತಿ ಹಸಿದವರಿಗೆ ಊಟ ನೀಡುವ ಕುರಿತು ಅವರು ಮಾತನಾಡಿದ್ದಾರೆ. ನಮ್ರತಾ ಗೌಡ ಅವರ ಸಮಾಜಮುಖಿ ಹೆಜ್ಜೆಗೆ ಫ್ಯಾನ್ಸ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅಪ್ಪು ಹುಟ್ಟುಹಬ್ಬವನ್ನು ಎಲ್ಲೆಡೆ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಪ್ಪು ಸಮಾದಿಗೆ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹುಟ್ಟುಹಬ್ಬದ ಸಂಭ್ರಮ ಆರಂಭವಾಗಿದೆ. ಅಪ್ಪು ಕುಟುಂಬದವರೂ ಸಮಾದಿಗೆ ಆಗಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ಅಪ್ಪು ಫ್ಯಾನ್ಸ್‌ ಅನ್ನದಾನ, ನೇತ್ರದಾನ, ರಕ್ತದಾನದಂತಹ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.

IPL_Entry_Point